‘ವರ್ತೂರು ಸಂತೋಷ್ ಬಿಗ್ಬಾಸ್ ಸಂಭಾವನೆ ಸೇರುವುದು ಅನಾಥಾಶ್ರಮಕ್ಕೆ’
Varthur Santhosh: ವರ್ತೂರು ಸಂತೋಷ್ ಬಿಗ್ಬಾಸ್ ಮನೆ ಪ್ರವೇಶಿಸಿದಾಗಿನಿಂದಲೂ ಅವರ ವಿವಾದಗಳು ಅವರ ಬೆನ್ನು ಬಿದ್ದಿವೆ. ಇದರ ನಡುವೆ ಅವರ ಗೆಳೆಯ ಮಹೇಶ್ ಎಂಬುವರು ಮಾತನಾಡಿ, ವರ್ತೂರು ಸಂತೋಷ್ರನ್ನು ಕೊಂಡಾಡಿರುವ ಜೊತೆಗೆ ಸಂತೋಷ್ ಅವರ ಸಂಭಾವನೆಯನ್ನು ಅನಾಥಾಶ್ರಮಕ್ಕೆ ನೀಡಿದ್ದಾರೆ ಎಂದಿದ್ದಾರೆ.
ವರ್ತೂರು ಸಂತೋಷ್ (Varthur Santhosh) ಬಿಗ್ಬಾಸ್ ಮನೆ ಪ್ರವೇಶಿಸಿದ ಮೇಲೆ ಕೆಲವು ವಿವಾದಗಳು ಅವರ ಬೆನ್ನು ಬಿದ್ದಿವೆ. ಮೊದಲಿಗೆ ಹುಲಿ ಉಗುರು ಪ್ರಕರಣದಲ್ಲಿ ಬಿಗ್ಬಾಸ್ ಮನೆಯಿಂದಲೇ ಜೈಲಿಗೆ ಹೋದ ವರ್ತೂರು ಸಂತೋಷ್, ಅಲ್ಲಿಂದ ನೇರವಾಗಿ ಬಿಗ್ಬಾಸ್ ಮನೆಗೆ ಮರಳಿದರು. ಆ ನಂತರವೂ ಅಲ್ಲಿ ನೆಮ್ಮದಿಯಿಂದ ಇರಲಾರದೆ ಒದ್ದಾಡಿದರು. ಈಗ ವರ್ತೂರು ಸಂತೋಷ್ರ ಖಾಸಗಿ ಜೀವನದ ಬಗ್ಗೆ ಕೆಲವು ಸುದ್ದಿಗಳು ಹರಿದಾಡುತ್ತಿವೆ. ವರ್ತೂರು ಸಂತೋಷ್ ಅವರ ಮಾವ, ಸಂತೋಷ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೀಗ ಸಂತೋಷ್ರ ಗೆಳೆಯ ಮಹೇಶ್ ಎಂಬುವರು ಸಂತೋಷ್ಗೆ ಸುತ್ತಿಕೊಂಡಿರುವ ವಿವಾದಗಳ ಬಗ್ಗೆ ಮಾತನಾಡಿರುವ ಜೊತೆಗೆ ವರ್ತೂರು ಸಂತೋಷ್ಗೆ ಬಿಗ್ಬಾಸ್ನಿಂದ ಬರುವ ಸಂಭಾವನೆಯನ್ನು ಅವರು ಅನಾಥಾಶ್ರಮಕ್ಕೆ ನೀಡಿದ್ದಾರೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 pm, Wed, 15 November 23
Latest Videos