ಅಸಲಿ ಆಟ ಶುರುಮಾಡಿದ ವರ್ತೂರು ಸಂತೋಷ್; ಮೊದಲ ಚಾಲೆಂಜ್​ನಲ್ಲೇ ಗೆಲುವು

ಸಂತೋಷ್ ಅವರು ಮನೆಯಿಂದ ಹೊರ ಹೋಗುವುದಾಗಿ ಹಠ ಹಿಡಿದಿದ್ದರು. ಆದರೆ, ಅವರ ತಾಯಿ ಬಂದು ಸಮಾಧಾನ ಮಾಡಿದ ಬಳಿಕ ಅವರ ಕೂಲ್ ಆದರು. ಈಗ ಅವರು ಮನೆಯಲ್ಲಿ ಆಟ ಮುಂದುವರಿಸುವುದಾಗಿ ಹೇಳಿದ್ದಾರೆ.

ಅಸಲಿ ಆಟ ಶುರುಮಾಡಿದ ವರ್ತೂರು ಸಂತೋಷ್; ಮೊದಲ ಚಾಲೆಂಜ್​ನಲ್ಲೇ ಗೆಲುವು
ವರ್ತೂರು ಸಂತೋಷ್
Follow us
ರಾಜೇಶ್ ದುಗ್ಗುಮನೆ
|

Updated on:Nov 15, 2023 | 8:06 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ವರ್ತೂರು ಸಂತೋಷ್ ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಹುಲಿ ಉಗುರು ಪ್ರಕರಣ ಅವರನ್ನು ತುಂಬಾನೇ ಕಾಡಿದೆ. ಈ ಕಾರಣಕ್ಕೆ ಅವರು ದೊಡ್ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದರು. ಅವರು ಈಗ ಬಿಗ್ ಬಾಸ್​ನಲ್ಲೇ (Bigg Boss) ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಈಗ ಸಂತೋಷ್ ಅವರು ಅಸಲಿ ಆಟ ಶುರು ಮಾಡಿದ್ದಾರೆ. ಗುಂಪು ಕಟ್ಟಿಕೊಂಡು ಆಟ ಆಡುತ್ತಿರುವ ವಿನಯ್ ವಿರುದ್ಧ ಅವರು ತೊಡೆ ತಟ್ಟೋಕೆ ರೆಡಿ ಆಗಿದ್ದಾರೆ. ಅವರು ತಂಡ ಕಟ್ಟಿ ವಿನಯ್​ನ ಬಗ್ಗಿ ಬಡಿಯಲು ಸಿದ್ಧರಾಗಿದ್ದಾರೆ.

ಸಂತೋಷ್ ಅವರು ಮನೆಯಿಂದ ಹೊರ ಹೋಗುವುದಾಗಿ ಹಠ ಹಿಡಿದಿದ್ದರು. ಆದರೆ, ಅವರ ತಾಯಿ ಬಂದು ಸಮಾಧಾನ ಮಾಡಿದ ಬಳಿಕ ಅವರ ಕೂಲ್ ಆದರು. ಈಗ ಅವರು ಮನೆಯಲ್ಲಿ ಆಟ ಮುಂದುವರಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಅಸಲಿ ಆಟ ಶುರು ಮಾಡಿದ್ದಾರೆ. ಮೊದಲ ಚಾಲೆಂಜ್​ನಲ್ಲೇ ಗೆಲುವು ಕಂಡಿದ್ದಾರೆ.

ಕೈನ ಸಹಾಯ ಇಲ್ಲದೆ ಶಾರ್ಟ್ಸ್ ಧರಿಸುವ ಚಟುವಟಿಕೆ ಬಿಗ್ ಬಾಸ್ ನೀಡಿದ್ದರು. ಈ ಟಾಸ್ಕ್​ನಲ್ಲಿ ವರ್ತೂರು ಸಂತೋಷ್ ಅವರು ಕೂಡ ಆಡಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಅವರು, ಈಗ ಮತ್ತೆ ಆಸಕ್ತಿ ತೋರಿಸುತ್ತಿದ್ದಾರೆ. ಮೊದಲ ಚಾಲೆಂಜ್​ನ ಸುಲಭದಲ್ಲಿ ಮುಗಿಸಿದ್ದಾರೆ. ಈ ಮೂಲಕ ಅವರು ಮನೆಗೆ ದಿನಸಿ ವಸ್ತುಗಳನ್ನು ಕೊಡಿಸಿದ್ದಾರೆ.

ಇದನ್ನೂ ಓದಿ: ಮೋಸಗಾರ, ವ್ಯಸನಿ, ಮಗಳಿಗೆ ಅನ್ಯಾಯ ಮಾಡಿದ್ದಾನೆ: ವರ್ತೂರು ಸಂತೋಷ್ ವಿರುದ್ಧ ಮಾವ ಆರೋಪ

ವರ್ತೂರು ಸಂತೋಷ್ ಅವರು ಆರಂಭದ ದಿನಗಳಲ್ಲಿ ಸಖತ್ ಆಗಿ ಆಡುತ್ತಿದ್ದರು. ಹುಲಿ ಉಗುರು ಪ್ರಕರಣದ ಬಳಿಕ ಅವರು ಡಲ್ ಆದರು. ಈಗ ಅವರು ಮತ್ತೆ ಟ್ರ್ಯಾಕ್​ಗೆ ಮರಳಿದ್ದಾರೆ. ತಮ್ಮ ನಿಜವಾದ ಆಟದ ಶೈಲಿ ತೋರಿಸೋಕೆ ಮುಂದಾಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಎಪಿಸೋಡ್ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:05 am, Wed, 15 November 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ