ಮೋಸಗಾರ, ವ್ಯಸನಿ, ಮಗಳಿಗೆ ಅನ್ಯಾಯ ಮಾಡಿದ್ದಾನೆ: ವರ್ತೂರು ಸಂತೋಷ್ ವಿರುದ್ಧ ಮಾವ ಆರೋಪ

Bigg Boss 10: ವರ್ತೂರು ಸಂತೋಷ್ ಮದುವೆಯ ಚಿತ್ರಗಳು ವೈರಲ್ ಆದ ಬೆನ್ನಲ್ಲೆ, ಸಂತೋಷ್​ರ ಮಾವ ಸೋಮನಾಥ್, ಸಂತೋಷ್​ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮೋಸಗಾರ, ವ್ಯಸನಿ, ಮಗಳಿಗೆ ಅನ್ಯಾಯ ಮಾಡಿದ್ದಾನೆ: ವರ್ತೂರು ಸಂತೋಷ್ ವಿರುದ್ಧ ಮಾವ ಆರೋಪ
Follow us
ಮಂಜುನಾಥ ಸಿ.
|

Updated on: Nov 14, 2023 | 10:16 PM

ವರ್ತೂರು ಸಂತೋಷ್ (Varthur Santhosh), ಬಿಗ್​ಬಾಸ್ (Bigg Boss) ಮನೆ ಪ್ರವೇಶದ ಮಾಡಿದ ಬೆನ್ನಲ್ಲೆ ವಿವಾದಗಳ ಮೇಲೆ ವಿವಾದಗಳು ಅವರ ಬೆನ್ನಿಗೆ ಬಿದ್ದಂತಿವೆ. ಮೊದಲಿಗೆ ಹುಲಿ ಉಗುರು ಪ್ರಕರಣದಲ್ಲಿ ಜೈಲು ಪಾಲಾದ ವರ್ತೂರು ಸಂತೋಷ್, ಅದರಿಂದ ಹೊರಗೆ ಬಂದು ಹೇಗೋ ಆಟ ಆಡುತ್ತಿದ್ದರು. ಇದೀಗ ವರ್ತೂರು ಸಂತೋಷ್ ಮೇಲೆ ಇನ್ನೂ ಗಂಭೀರ ಆರೋಪಗಳನ್ನು ಅವರ ಸ್ವಂತ ಮಾವನವರೇ ಮಾಡಿದ್ದಾರೆ. ವರ್ತೂರು ಸಂತೋಷ್ ಮಹಿಳಾ ಪೀಡಕ, ಮಗಳ ಮೇಲೆ ದೌರ್ಜನ್ಯ ಮಾಡಿದ್ದಾರೆ, ಅವನೊಬ್ಬ ಮಾದಕ ವ್ಯಸನಿ ಎಂದು ಸಂತೋಷ್​ರ ಮಾವ ಆರೋಪ ಮಾಡಿದ್ದಾರೆ.

ವರ್ತೂರು ಸಂತೋಷ್​ಗೆ ಮದುವೆ ಆಗಿರುವ ಸುದ್ದಿ ಇದೀಗ ಹೊರಗೆ ಬಂದಿದೆ. ಬಿಗ್​ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಅವರು ತಮ್ಮ ಮದುವೆ ವಿಷಯ ಪ್ರಸ್ತಾಪ ಮಾಡಿರಲಿಲ್ಲ. ಆದರೆ ಈಗ ವರ್ತೂರು ಸಂತೋಷ್​ಗೆ ಮದುವೆ ಆಗಿರುವ ವಿಷಯ ಹೊರಬಿದ್ದಿದ್ದು, ಅವರಿಗೆ ಒಬ್ಬ ಮಗಳು ಸಹ ಇದ್ದಾಳೆ ಎನ್ನಲಾಗುತ್ತಿದೆ. ವರ್ತೂರು ಸಂತೋಷ್ ಅವರ ಮದುವೆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ವರ್ತೂರು ಸಂತೋಷ್​ ಅವರ ಪತ್ನಿ ಜಯಶ್ರೀ ಅವರ ತಂದೆ ಸೋಮನಾಥ್, ”ವರ್ತೂರು ಸಂತೋಷ್ ಒಬ್ಬ ಮೋಸಗಾರ, ಮಾದಕ ವ್ಯಸನಿ, ನನ್ನ ಮಗಳಿಗೆ ಅನ್ಯಾಯ ಮಾಡಿದ್ದಾನೆ. ಅವನೊಬ್ಬ ಮಾದಕ ವ್ಯಸನಿ” ಎಂದು ಆರೋಪಿಸಿದ್ದಾರೆ. ನನ್ನ ಮಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟೆ ಆದರೆ ಆಕೆಯ ಮೇಲೆ ದೌರ್ಜನ್ಯ ಮಾಡಿದ್ದಾನೆ, ಮದುವೆಯಾದ ಕೆಲವೇ ದಿನಕ್ಕೆ ಅವಳಿಂದ ವಿಚ್ಛೇದನ ಪಡೆಯುವಂತೆ ಅವನ ಮನೆಯವರೇ ಹೇಳಿಕೊಟ್ಟರು ಎಂದಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ: ವೀಕ್ಷಕರ ಕ್ಷಮೆ ಕೇಳಿದ ಕಿಚ್ಚ ಸುದೀಪ್

”ಡ್ರಗ್ಸ್ ಹಾಕೊಳ್ಳೋದು, ಡ್ರಿಂಕ್ಸ್ ಮಾಡೋದು ಅಭ್ಯಾಸ ಅವನಿಗೆ ಒಂದು ಬಾರಿ ಸ್ಪಂದನಾ ಆಸ್ಪತ್ರೆಗೆ ಸೇರಿಸಿದ್ದರು, ಉಳಿಯೋದಿಲ್ಲ ಅಂದುಕೊಂಡಿದ್ದರು, ನಾನೇ ಹೋಗಿ ಅವನನ್ನು ನೋಡಿಕೊಂಡಿದ್ದೆ. ಎರಡು ಮೂರು ತಿಂಗಳು ಸುಧಾರಿಸಿ ಮನೆಗೆ ಕಳಿಸಿದ್ದೀನಿ. ಅವರ ಅಮ್ಮ ಇಲ್ಲದೆ ಇರೋದನ್ನೆಲ್ಲ ಹಾಕಿ ಕೊಡೋ ಕೆಲ್ಸಾ ಮಾಡ್ತಾರೆ. ಇವನು ಪ್ರತಿ ಸಂಜೆ ಬಂದು ಕುಡಿಯೋದು ನನ್ ಮಗಳನ್ನು ಹೊಡೆಯೋದು. ನಾನು ಮನೆಗೆ ಹೋಗಿದ್ದಾಗ ನನ್ನ ಎದುರಿಗೇ ಕತ್ತು ಕೊಯ್ಯುವುದಕ್ಕೆ ಚಾಕು ಎತ್ತಿದ್ದ. ಅವತ್ತು ಮನೆಯಲ್ಲಿ 30-40 ಜನ ಇದ್ದರು. ಎಲ್ಲ ದೊಡ್ಡೋರು, ಬುದ್ಧಿವಂತರೇ ಆದರೆ ಅವತ್ತೂ ಅವನು ಯಾರ ಮಾತು ಕೇಳಿರಲಿಲ್ಲ” ಎಂದಿದ್ದಾರೆ.

ವರ್ತೂರು ಸಂತೋಷ್​ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದರು. ಸುದೀಪ್ ಸೇರಿದಂತೆ ಹಲವರು ವರ್ತೂರು ಸಂತೋಷ್ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಕೊನೆಗೆ ವರ್ತೂರು ಸಂತೋಷ್ ಅವರ ಅಮ್ಮನವರೇ ಬಿಗ್​ಬಾಸ್ ಮನೆಗೆ ಬಂದು ವರ್ತೂರು ಸಂತೋಷ್ ಮನಸ್ಸು ಬದಲಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್