‘ನೀವು ಮದುವೆ ಆಗಿ ಸಂತೋಷ್ ಮನೆಗೆ ಹೋದರೆ ಪರಿಸ್ಥಿತಿ ಏನು’; ನಮ್ರತಾ ಪ್ರಶ್ನೆಗೆ ತನಿಷಾ ಶಾಕ್

ತನಿಷಾ ಕುಪ್ಪಂಡ ಹಾಗೂ ಸಂತೋಷ್ ಮಧ್ಯೆ ಫ್ರೆಂಡ್​ಶಿಪ್ ಬೆಳೆದಿದೆ. ಇವರ ಮಧ್ಯೆ ಲವ್ ಆಗಿದೆ ಎಂದು ಬಿಂಬಿಸುವ ಕೆಲಸ ಆಗುತ್ತಿದೆ. ಆದರೆ, ತನಿಷಾ ಅವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

‘ನೀವು ಮದುವೆ ಆಗಿ ಸಂತೋಷ್ ಮನೆಗೆ ಹೋದರೆ ಪರಿಸ್ಥಿತಿ ಏನು’; ನಮ್ರತಾ ಪ್ರಶ್ನೆಗೆ ತನಿಷಾ ಶಾಕ್
ನಮ್ರತಾ-ಸಂತೋಷ್-ತನಿಷಾ
Follow us
ರಾಜೇಶ್ ದುಗ್ಗುಮನೆ
|

Updated on: Nov 15, 2023 | 7:40 AM

ವರ್ತೂರು ಸಂತೋಷ್ (Varthur Santosh) ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತೇನೆ ಎಂದು ಹಠ ಹಿಡಿದು ಕುಳಿತಿದ್ದರು. ಆದರೆ, ಅವರ ತಾಯಿ ಬಂದು ಅವರನ್ನು ಸಮಾಧಾನ ಮಾಡಿದ್ದಾರೆ. ಇದರಿಂದ ಸಂತೋಷ್ ಅವರು ಖುಷಿಯಾಗಿದ್ದಾರೆ. ಬಿಗ್ ಬಾಸ್​ನಲ್ಲಿ ಆಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ. ಇದರಿಂದ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರ ತಾಯಿ ಬಂದಾಗ ಆಗಿರುವ ಒಂದು ಘಟನೆ ಬಗ್ಗೆ ತನಿಷಾ ಹಾಗೂ ನಮ್ರತಾ ಅವರು ಮಾತನಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆದಿದೆ.

ತನಿಷಾ ಕುಪ್ಪಂಡ ಹಾಗೂ ಸಂತೋಷ್ ಮಧ್ಯೆ ಫ್ರೆಂಡ್​ಶಿಪ್ ಬೆಳೆದಿದೆ. ಇವರ ಮಧ್ಯೆ ಲವ್ ಆಗಿದೆ ಎಂದು ಬಿಂಬಿಸುವ ಕೆಲಸ ಆಗುತ್ತಿದೆ. ಆದರೆ, ತನಿಷಾ ಅವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಇದೆಲ್ಲವನ್ನೂ ಸುಮ್ಮನೆ ಹೇಳೋದು ಅನ್ನೋದು ತನಿಷಾಗೂ ಗೊತ್ತಿದೆ. ಆದರೂ ಮನೆ ಮಂದಿ ಕಾಲು ಎಳೆಯುತ್ತಿದ್ದಾರೆ.

ಸಂತೋಷ್ ಅವರ ತಾಯಿ ಮಾತನಾಡಿದ ಭಾಷೆ ಬಗ್ಗೆ ನಮ್ರತಾ ಹಾಗೂ ತನಿಷಾ ಚರ್ಚೆ ಮಾಡಿದ್ದಾರೆ. ‘ಆ ಭಾಷೆ ಕೇಳೋಕೆ ಬಹಳ ವಿಚಿತ್ರವಾಗಿದೆ’ ಎಂದರು ನಮ್ರತಾ. ‘ಅವರ ಆಡುಭಾಷೆ ಹಾಗೆಯೇ. ಕನ್ನಡ, ತೆಲುಗು, ತಮಿಳು ಭಾಷೆಯ ಮಿಶ್ರಣವಾಗಿ ಇದೆ. ಅರ್ಥವೇ ಆಗುವುದಿಲ್ಲ’ ಎಂದರು ತನಿಷಾ. ಇದನ್ನು ಕೇಳಿದ ನಮ್ರತಾ ಅವರು ತನಿಷಾರ ಕಾಲೆಳೆದರು. ‘ಹೀಗಾದ್ರೆ ಮುಂದೆ ಹೇಗೆ? ಅಂದ್ರೆ, ಮದುವೆ ಆಗಿ ಅವರ ಮನೆಗೆ ಹೋದರೆ ಪರಿಸ್ಥಿತಿ ಏನು’ ಎಂದು ಪ್ರಶ್ನೆ ಮಾಡಿದ್ದಾರೆ ನಮ್ರತಾ. ಇದಕ್ಕೆ ತನಿಷಾ, ‘ಯೇ ಹೋಗೇ’ ಎಂದಷ್ಟೇ ಹೇಳಿ ನಕ್ಕಿದ್ದಾರೆ.

ಇದನ್ನೂ ಓದಿ: ಮೋಸಗಾರ, ವ್ಯಸನಿ, ಮಗಳಿಗೆ ಅನ್ಯಾಯ ಮಾಡಿದ್ದಾನೆ: ವರ್ತೂರು ಸಂತೋಷ್ ವಿರುದ್ಧ ಮಾವ ಆರೋಪ

ಸಂತೋಷ್ ಅವರು ಬಿಗ್ ಬಾಸ್​ನಲ್ಲಿ ಎಲ್ಲಿಯೂ ಮದುವೆ ವಿಚಾರ ಎತ್ತಿಲ್ಲ. ಅವರಿಗೆ ಈಗಾಗಲೇ ಒಂದು ಮದುವೆ ಆಗಿ ವಿಚ್ಛೇದನ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತನಿಷಾ ಜೊತೆ ಅವರು ಕ್ಲೋಸ್ ಆದ ಬಳಿಕ ಈ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ