ಮತ್ತೊಂದು ಮದುವೆಗೆ ರೆಡಿಯಾಗಿದ್ದಾರಾ ವರ್ತೂರು ಸಂತೋಷ್: ಎಂಗೇಜ್ಮೆಂಟ್ ಬಗ್ಗೆ ರಕ್ಷಕ್ ಹೇಳಿದ್ದೇನು?
Bigg Boss: ವರ್ತೂರು ಸಂತೋಷ್ಗೆ ಮದುವೆಯಾಗಿ ಮಗುವೊಂದು ಇರುವ ಸುದ್ದಿ ಇಂದು ವೈರಲ್ ಆಗಿದೆ. ಅವರ ಮಾವ, ಸಂತೋಷ್ ವಿರುದ್ಧ ಹಲವು ಆರೋಪಗಳನ್ನು ಸಹ ಮಾಡಿದ್ದಾರೆ. ಇದರ ನಡುವೆ ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಮತ್ತೊಂದು ಮದುವೆಯಾಗುವ ಯೋಚನೆಯಲ್ಲಿ ವರ್ತೂರು ಸಂತೋಷ್ ಇದ್ದಾರಾ ಎಂಬ ಅನುಮಾನವೂ ಮೂಡಿದೆ.
ಬಿಗ್ಬಾಸ್ (Bigg Boss Kannada Season 10) ಮನೆಯಲ್ಲಿರುವ ವರ್ತೂರು ಸಂತೋಷ್ (Varthur Santhosh) ಕುರಿತು ಹೊಸದೊಂದು ಸುದ್ದಿ ಹರಿದಾಡುತ್ತಿದೆ. ವರ್ತೂರು ಸಂತೋಷ್ ವೈವಾಹಿಕ ಜೀವನ ಇಷ್ಟು ದಿನ ಗುಟ್ಟಾಗಿತ್ತು. ಇದೀಗ ವರ್ತೂರು ಸಂತೋಷ್ಗೆ ಮದುವೆಯಾಗಿ ಹೆಣ್ಣು ಮಗುವೊಂದಿದೆ ಎಂಬ ಅಂಶ ಹೊರಗೆ ಬಿದ್ದಿರುವುದು ಮಾತ್ರವೇ ಅಲ್ಲದೆ, ವರ್ತೂರು ಸಂತೋಷ್ರ ಮಾವ, ಸಂತೋಷ್ ವಿರುದ್ಧ ಮಹಿಳಾ ಪೀಡಕ, ಮಾದಕ ವ್ಯಸನಿ ಇನ್ನೂ ಕೆಲವು ಆರೋಪಗಳನ್ನು ಸಹ ಮಾಡಿದ್ದಾರೆ. ಇದರ ನಡುವೆ ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ವರ್ತೂರು ಸಂತೋಷ್ ಮತ್ತೊಂದು ಮದುವೆಯಾಗಲು ಯೋಜನೆ ಹಾಕಿಕೊಂಡಿದ್ದಾರಾ ಎಂಬ ಅನುಮಾನವೂ ಇದೆ. ಕಳೆದ ವಾರ ಮನೆಯಿಂದ ಹೊರಬಂದ ಬುಲೆಟ್ ರಕ್ಷಕ್, ವರ್ತೂರು ಸಂತೋಷ್ರ ನಿಶ್ಚಿತಾರ್ಥದ ಬಗ್ಗೆ ಹೀಗೆ ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

