AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Varthur Santhosh: ‘ಚಿನ್ನದ ಚೈನ್​ನಲ್ಲಿ ಕಟ್ಟಿಹಾಕಿದ್ರೂ ಇಲ್ಲಿ ಇರೋಕೆ ಆಗಲ್ಲ’: ಸ್ಪಷ್ಟ ನಿರ್ಧಾರ ತಿಳಿಸಿದ ವರ್ತೂರು ಸಂತೋಷ್​

Bigg Boss Kannada: ಬಿಗ್​ ಬಾಸ್​ ಮನೆಯಿಂದ ಹೇಗೆ ಹೊರಗೆ ಹೋಗಬೇಕು ಎಂಬ ಬಗ್ಗೆ ವರ್ತೂರು ಸಂತೋಷ್​ ಅವರಿಗೆ ನಾನಾ ಆಲೋಚನೆಗಳು ಬರುತ್ತಿವೆ. ಮನೆಮಂದಿಯೆಲ್ಲ ಅವರ ಮನಸ್ಸನ್ನು ಬದಲಾಯಿಸಲು ಕಷ್ಟಪಟ್ಟಿದ್ದಾರೆ. ಆದರೂ ಅವರು ಕನ್ಫೆಷನ್​ ರೂಮ್​ಗೆ ಬಂದು ಕಣ್ಣಿರು ಹಾಕಿದ್ದಾರೆ. ‘ನನ್ನನ್ನು ಕಳಿಸಿಕೊಡಿ’ ಎಂದು ಕೋರಿದ್ದಾರೆ.

Varthur Santhosh: ‘ಚಿನ್ನದ ಚೈನ್​ನಲ್ಲಿ ಕಟ್ಟಿಹಾಕಿದ್ರೂ ಇಲ್ಲಿ ಇರೋಕೆ ಆಗಲ್ಲ’: ಸ್ಪಷ್ಟ ನಿರ್ಧಾರ ತಿಳಿಸಿದ ವರ್ತೂರು ಸಂತೋಷ್​
ವರ್ತೂರು ಸಂತೋಷ್​
ಮದನ್​ ಕುಮಾರ್​
|

Updated on: Nov 13, 2023 | 11:39 PM

Share

ಹಳ್ಳಿಕಾರ್​ ತಳಿ ಸಂರಕ್ಷಣೆ ಮೂಲಕ ಹೆಸರು ಮಾಡಿರುವ ವರ್ತೂರು ಸಂತೋಷ್​ ಅವರಿಗೆ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಜನರಿಂದ ಅವರಿಗೆ ಭರ್ಜರಿ ಬೆಂಬಲ ಕೂಡ ಸಿಕ್ಕಿದೆ. ಆದರೆ ಅರ್ಧದಲ್ಲೇ ಅವರು ಆಟವನ್ನು ಕೈ ಚೆಲ್ಲಲು ಮುಂದಾಗಿದ್ದಾರೆ. ವೀಕ್ಷಕರು ಅವರಿಗೆ ಬರೋಬ್ಬರಿ 34 ಲಕ್ಷಕ್ಕೂ ಹೆಚ್ಚು ವೋಟ್​ ಮಾಡಿದ್ದಾರೆ. ಜನರ ಅಭಿಪ್ರಾಯದ ವಿರುದ್ಧವಾಗಿ ಹೋಗಲು ತಾವು ಸಿದ್ಧರಿಲ್ಲ ಎಂದು ಕಿಚ್ಚ ಸುದೀಪ್ (Kichcha Sudeep) ಕೂಡ ಹೇಳಿದ್ದಾರೆ. ಹಾಗಿದ್ದರೂ ವರ್ತೂರು ಸಂತೋಷ್​ (Varthur Santhosh) ಅವರು ಕಣ್ಣೀರು ಹಾಕುವುದು ನಿಲ್ಲಿಸಿಲ್ಲ. ನವೆಂಬರ್​ 13ರ ಎಪಿಸೋಡ್​ನಲ್ಲಿ ತಮ್ಮ ನಿರ್ಧಾರ ಏನು ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಭಾನುವಾರದ (ನವೆಂಬರ್​ 13) ಸಂಚಿಕೆಯಲ್ಲಿ ವರ್ತೂರು ಸಂತೋಷ್​ ಅವರನ್ನು ಮನವೊಲಿಸಲು ಇನ್ನುಳಿದ ಸ್ಪರ್ಧಿಗಳು ಪ್ರಯತ್ನಿಸಿದರು. ತುಕಾಲಿ ಸಂತೋಷ್​, ಡ್ರೋನ್​ ಪ್ರತಾಪ್​, ಅತಿಥಿಯಾಗಿ ಬಂದ ಸುಷ್ಮಾ ರಾವ್​ ಸೇರಿದಂತೆ ಎಲ್ಲರೂ ಪದೇ ಪದೇ ಅದನ್ನೇ ಹೇಳಿದಾಗ ವರ್ತೂರು ಸಂತೋಷ್​ ಅವರಿಗೆ ಇನ್ನೂ ಬೇಸರ ಆಯಿತು. ಮತ್ತೆ ಮತ್ತೇ ಅದೇ ವಿಷಯ ಕೆದಕಬೇಡಿ ಎಂದು ಅವರು ಸ್ವಲ್ಪ ಗರಂ ಆಗಿಯೇ ಹೇಳಿದರು.

ಇದನ್ನೂ ಓದಿ: Varthur Santhosh: ಬಿಗ್​ ಬಾಸ್​ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದೇ ಬಿಕ್ಕಿಬಿಕ್ಕಿ ಅತ್ತ ವರ್ತೂರು ಸಂತೋಷ್​

‘ಇಷ್ಟೆಲ್ಲ ಆದ ಮೇಲೆ ಇರು ಎಂದರೆ ಇರೋಕೆ ಆಗಲ್ಲ. ಚಿನ್ನದ ಚೈನ್​ನಲ್ಲಿ ಕಟ್ಟಿ ಹಾಕಿದ್ರೂ ಇರೋಕೆ ಆಗಲ್ಲ’ ಎಂದು ವರ್ತೂರು ಸಂತೋಷ್​ ಅವರು ಹೇಳಿದ್ದಾರೆ. ಮನೆಯಿಂದ ಹೇಗೆ ಹೊರಗೆ ಹೋಗಬೇಕು ಎಂಬ ಬಗ್ಗೆ ಅವರಿಗೆ ನಾನಾ ಆಲೋಚನೆಗಳು ಬರುತ್ತಿವೆ. ಒಂದು ವೇಳೆ ಬಿಗ್​ ಬಾಸ್​ ಕೊಟ್ಟ ಎಲ್ಲ ಟಾಸ್ಕ್​ಗಳನ್ನು ಆಡದೇ ಸುಮ್ಮನೇ ಕುಳಿತುಬಿಟ್ಟರೆ ಏನಾಗುತ್ತದೆ ಎಂದು ಕೂಡ ಅವರು ಆಲೋಚಿಸಿದ್ದಾರೆ. ‘ಹಾಗೆಲ್ಲ ಮಾಡಿಕೊಳ್ಳಬೇಡಿ’ ಎಂದು ಮನೆ ಮಂದಿ ಬುದ್ಧಿ ಹೇಳಿದ್ದಾರೆ. ಏನೇ ಆದರೂ ವರ್ತೂರು ಸಂತೋಷ್​ ಅವರು ಮನಸ್ಸು ಬದಲಾಯಿಸಿಲ್ಲ.

ಇದನ್ನೂ ಓದಿ: Varthur Santhosh: ಸ್ಪರ್ಧಿಗಳಿಗೆ ಹೊಡೆದು ಬಿಗ್​ ಬಾಸ್​ ಮನೆಯಿಂದ ಹೊರಬರಲು ವರ್ತೂರು ಸಂತೋಷ್​ ಪ್ಲ್ಯಾನ್​?

ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲ ಸ್ಪರ್ಧಿಗಳ ಮನೆಯಿಂದ ಊಟ ತರಿಸಲಾಗಿದೆ. ಈ ವೇಳೆ ವರ್ತೂರು ಸಂತೋಷ್​ ಅವರು ಹೆಚ್ಚು ಎಮೋಷನಲ್​ ಆದರು. ಅವರ ಮನೆಯಿಂದ ಊಟ ಬಂದಿಲ್ಲ. ಅವರನ್ನು ಡ್ರೋನ್​ ಪ್ರತಾಪ್​ ಸಮಾಧಾನ ಮಾಡಿದ್ದಾರೆ. ಇದಕ್ಕೂ ಮುನ್ನ ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ವರ್ತೂರು ಸಂತೋಷ್​ ಅವರ ತಾಯಿ ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ್ದು ಕಾಣಿಸಿತ್ತು. ಆದರೆ ಭಾನುವಾರದ ಸಂಚಿಕೆಯಲ್ಲಿ ಅದು ಪ್ರಸಾರ ಆಗಿಲ್ಲ. ಸೋಮವಾರ (ನ.14) ಏನಾಗಲಿದೆ ಎಂಬುದನ್ನು ಕಾದುನೋಡಬೇಕು. ತಾಯಿಯ ಮಾತಿಗೆ ಅವರು ಬೆಲೆ ಕೊಡುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು