Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ತೂರು ಸಂತೋಷ್ ಮೇಲೆ ಆರೋಪಗಳ ಸುರಿಮಳೆ, ಹಳೆ ಚಿತ್ರಗಳು ವೈರಲ್

Varthur Santhosh: ವರ್ತೂರು ಸಂತೋಷ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸರಣಿ ಆರೋಪಗಳನ್ನು ಮಾಡಿದ್ದಾರೆ. ವರ್ತೂರು ಸಂತೋಷ್ ಮಹಿಳಾ ಪೀಡಕ, ಮಾಧಕ ವ್ಯಸನಿ ಎಂದು ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಅವರ ಮದುವೆಯ ಚಿತ್ರಗಳು ಸಹ ವೈರಲ್ ಆಗಿವೆ.

ವರ್ತೂರು ಸಂತೋಷ್ ಮೇಲೆ ಆರೋಪಗಳ ಸುರಿಮಳೆ, ಹಳೆ ಚಿತ್ರಗಳು ವೈರಲ್
ವರ್ತೂರು ಸಂತೋಷ್
Follow us
ಮಂಜುನಾಥ ಸಿ.
|

Updated on:Nov 14, 2023 | 4:27 PM

ವರ್ತೂರು ಸಂತೋಷ್ (Varthur Santhosh) ಕಳೆದ ವಾರಾಂತ್ಯ ಸುದೀಪ್ ಮುಂದೆ, ತಮ್ಮನ್ನು ಮನೆಗೆ ಕಳಿಸಿಬಿಡುವಂತೆ ಕಣ್ಣೀರು ಹಾಕಿಕೊಂಡು ಕೇಳಿದ್ದರು. ಮನೆಯವರೆಲ್ಲ ಇಲ್ಲೇ ಉಳಿಯಿರಿ ಎಂದರೂ ಮನಸ್ಸು ಬದಲಾಯಿಸಿರಲಿಲ್ಲ. ಆದರೆ ವರ್ತೂರು ಅವರ ತಾಯಿ ಬಂದು ಧೈರ್ಯ ತುಂಬಿದ ಮೇಲೆ ವರ್ತೂರು ಸಂತೋಷ್ ಮನೆಯಲ್ಲಿಯೇ ಉಳಿಯುವ ಮನಸ್ಸು ಮಾಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವರ್ತೂರು ಸಂತೋಷ್ ವಿರುದ್ಧ ಕೆಲವು ಆರೋಪಗಳು ಸಹ ಕೇಳಿ ಬಂದಿವೆ.

ವರ್ತೂರು ಸಂತೋಷ್​ ಹಾಗೂ ತನಿಷಾ ಆತ್ಮೀಯರಾಗಿರುವ ವಿಚಾರ ಇತ್ತೀಚೆಗೆ ಬಿಗ್​ಬಾಸ್ ಮನೆಯಲ್ಲಿ ಚರ್ಚೆಯಾಗಿತ್ತು. ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿರುವ ರಕ್ಷಕ್ ಸಹ, ಬಿಗ್​ಬಾಸ್ ಮುಗಿದ ಬಳಿಕ ವರ್ತೂರು ಸಂತೋಷ್ ಮದುವೆ ಆಗಲಿದ್ದಾರೆ, ಈಗಾಗಲೇ ಅವರಿಗೆ ನಿಶ್ಚಿತಾರ್ಥ ಆಗಿದೆ ಎಂದಿದ್ದರು. ಆದರೆ ಈಗ ವರ್ತೂರು ಸಂತೋಷ್ ರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೊತೆಗೆ ಕೆಲವು ನಿಂದನಾತ್ಮಕ ಪೋಸ್ಟ್​ಗಳು ಸಹ ಹರಿದಾಡುತ್ತಿವೆ.

‘ವರ್ತೂರು ಸಂತೋಷ್ ಹೆಣ್ಣು ಪೀಡಕ’, ‘ವರ್ತೂರು ಸಂತೋಷ್ ಮಾದಕ ವ್ಯಸನಿ’ ‘ವರ್ತೂರು ಸಂತೋಷ್ ಹುಡುಗರು ರೌಡಿಗಳು’, ‘ವರ್ತೂರು ಸಂತೋಷ್​ಗೆ ಮದುವೆ ಆಗಿದೆ, ಅವನಿಗೆ ಯಾರೂ ಹೆಣ್ಣು ಕೊಡಬೇಡಿ ಅವನೊಬ್ಬ ಮಹಾ ಮೋಸಗಾರ’ ಎಂಬಿತ್ಯಾದಿ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ಹರಿದಾಡುತ್ತಿವೆ. ಜೊತೆಗೆ ವರ್ತೂರು ಸಂತೋಷ್​ ಮದುವೆಯ ಚಿತ್ರಗಳು, ರಿಸೆಪ್ಷನ್ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವರ್ತೂರು ಸಂತೋಷ್​ ಜಯಶ್ರೀ ಎಂಬ ಮಹಿಳೆಯೊಂದಿಗೆ ಮದುವೆ ಆಗುತ್ತಿರುವ ಚಿತ್ರಗಳು ಇವು ಎಂಬ ಒಕ್ಕಣೆ ಚಿತ್ರಗಳಿಗಿವೆ ಇದೆ.

ಇದನ್ನೂ ಓದಿ:BBK 10: ಬಿಗ್​ ಬಾಸ್​ಗೆ ಸುಷ್ಮಾ ರಾವ್​ ಬಂದಿದ್ದು ವರ್ತೂರು ಸಂತೋಷ್​ ಸಲುವಾಗಿ ಮಾತ್ರವಲ್ಲ; ಅಸಲಿ ಕಾರಣ ಇಲ್ಲಿದೆ..​

ವರ್ತೂರು ಸಂತೋಷ್ ಅವರಿಗೆ ಕೆಲವು ವರ್ಷಗಳ ಹಿಂದೆ ಜಯಶ್ರೀ ಎಂಬುವರೊಟ್ಟಿಗೆ ವಿವಾಹವಾಗಿತ್ತು, ಒಬ್ಬ ಹೆಣ್ಣು ಮಗು ಸಹ ಸಂತೋಷ್ ಅವರಿಗಿದೆ. ಆದರೆ ಆ ಬಳಿಕ ಉಂಟಾದ ಮನಸ್ಥಾಪಗಳಿಂದಾಗಿ ಇಬ್ಬರೂ ಬೇರೆ-ಬೇರೆಯಾಗಿ ಬದುಕುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸಂತೋಷ್ ಬಿಗ್​ಬಾಸ್ ಮನೆಯಲ್ಲಿ ಹೇಳಿಕೊಂಡಿಲ್ಲ.

ವರ್ತೂರು ಸಂತೋಷ್ ವ್ಯಸನಿ, ಮಹಿಳಾ ಪೀಡಕ ಎಂಬ ಆರೋಪಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದಾರೆ, ಆದರೆ ವರ್ತೂರು ಸಂತೋಷ್ ಬಿಗ್​ಬಾಸ್ ಮನೆಯಲ್ಲಿ ಹಾಗೆ ನಡೆದುಕೊಂಡಿದ್ದು ಗಮನಕ್ಕೆ ಬಂದಿಲ್ಲ. ವರ್ತೂರು ಸಂತೋಷ್ ಸಭ್ಯವಾಗಿಯೇ ನಡೆದುಕೊಂಡಿದ್ದಾರೆ. ಹಳ್ಳಿ ಸೊಗಡಿನ ಭಾಷೆಯಾದರೂ ಮಹಿಳೆಯರಿಗೆ ಅಗೌರವ ನೀಡುವ ರೀತಿ ಮಾತು ಸಹ ಆಡಿಲ್ಲ. ಆದರೆ ಸಂತೋಷ್ ತಮ್ಮ ಹಿಂದಿನ ಮದುವೆ ಬಗ್ಗೆಯೂ ಸಹ ಬಿಗ್​ಬಾಸ್ ಮನೆಯಲ್ಲಿ ಮಾತನಾಡಿಲ್ಲ.

ಬಿಗ್​ಬಾಸ್ ಮನೆಗೆ ಬಂದ ಬಳಿಕ ವರ್ತೂರು ಸಂತೋಷ್ ಜೀವನದಲ್ಲಿ ಏನೇನೋ ಆಗುತ್ತಿದೆ. ಬಿಗ್​ಬಾಸ್ ಮನೆಗೆ ಬಂದ ಬಳಿಕ ಹುಲಿ ಉಗುರು ಪ್ರಕರಣದಲ್ಲಿ ಸಂತೋಷ್ ಜೈಲು ಪಾಲಾದರು. ಅದಾದ ಬಳಿಕ ಈಗ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪ್ರಚಾರ ಶುರುವಾಗಿದೆ. ಇದರ ನಡುವೆ ವರ್ತೂರು ಸಂತೋಷ್ ಬಿಗ್​ಬಾಸ್ ಮನೆಯಲ್ಲಿಯೇ ಇರಬೇಕೆಂದು 34 ಲಕ್ಷಕ್ಕೂ ಅಧಿಕ ಜನ ಮತ ಚಲಾಯಿಸಿ ವರ್ತೂರು ಬೆಂಬಲಕ್ಕೆ ನಿಂತಿದ್ದಾರೆ. ಬಿಗ್​ಬಾಸ್ ಮನೆಯಿಂದ ಹೊರ ಹೋಗಬೇಕು ಅಂದುಕೊಂಡಿದ್ದ ಸಂತೋಷ್, ಇದೀಗ ಮನೆಯಲ್ಲಿಯೇ ಉಳಿಯುವ ನಿರ್ಣಯ ಮಾಡಿದ್ದು, ಮುಂದಿನ ದಿನಗಳಲ್ಲಿ ಅವರು ಹೇಗೆ ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:45 pm, Tue, 14 November 23

ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ