AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK 10: ಬಿಗ್​ ಬಾಸ್​ಗೆ ಸುಷ್ಮಾ ರಾವ್​ ಬಂದಿದ್ದು ವರ್ತೂರು ಸಂತೋಷ್​ ಸಲುವಾಗಿ ಮಾತ್ರವಲ್ಲ; ಅಸಲಿ ಕಾರಣ ಇಲ್ಲಿದೆ..​

Varthur Santhosh: ಕನ್ನಡ ಕಿರುತೆರೆಯ ಖ್ಯಾತ ನಟಿ ಸುಷ್ಮಾ ರಾವ್ ಅವರನ್ನು ಬಿಗ್​ ಬಾಸ್​ ಮನೆಯೊಳಗೆ ಕಳಿಸಿ, ವರ್ತೂರು ಸಂತೋಷ್​ಗೆ ಬುದ್ಧಿಮಾತು ಹೇಳುವ ಪ್ರಯತ್ನ ಮಾಡಲಾಗಿದೆ. ಅಚ್ಚರಿ ಏನೆಂದರೆ ಸುಷ್ಮಾ ರಾವ್​ ಅವರು ದೊಡ್ಮನೆಯೊಳಗೆ ಕಾಲಿಟ್ಟಿದ್ದು ಕೇವಲ ಇದೊಂದೇ ಕಾರಣಕ್ಕಾಗಿ ಅಲ್ಲ. ಅಸಲಿ ಕಾರಣಗಳು ಇನ್ನಷ್ಟು ಇವೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

BBK 10: ಬಿಗ್​ ಬಾಸ್​ಗೆ ಸುಷ್ಮಾ ರಾವ್​ ಬಂದಿದ್ದು ವರ್ತೂರು ಸಂತೋಷ್​ ಸಲುವಾಗಿ ಮಾತ್ರವಲ್ಲ; ಅಸಲಿ ಕಾರಣ ಇಲ್ಲಿದೆ..​
ಸುಷ್ಮಾ ರಾವ್​
ಮದನ್​ ಕುಮಾರ್​
|

Updated on: Nov 14, 2023 | 8:36 AM

Share

ಈ ಬಾರಿಯ ಕನ್ನಡ ಬಿಗ್​ ಬಾಸ್​ (Bigg Boss Kannada) ರಿಯಾಲಿಟಿ ಶೋ ರೋಚಕತೆ ಪಡೆದುಕೊಂಡಿದೆ. ಇದು 10ನೇ ಸೀಸನ್​ ಆದ್ದರಿಂದ ಪ್ರೇಕ್ಷಕರು ಆಸಕ್ತಿ ತೋರಿಸುತ್ತಿದ್ದಾರೆ. ಎಲ್ಲ ಸ್ಪರ್ಧಿಗಳ ನಡುವಿನ ಹಣಾಹಣಿ ಜೋರಾಗಿದೆ. ವರ್ತೂರು ಸಂತೋಷ್​ (Varthur Santhosh) ಅವರು ಬಿಗ್ ಬಾಸ್​ ಆಟವನ್ನು ಅರ್ಧಕ್ಕೆ ತೊರೆಯುವ ನಿರ್ಧಾರ ಮಾಡಿದ್ದಾರೆ. ಅವರ ಮನಸ್ಸನ್ನು ಬದಲಾಯಿಸಲು ನಾನಾ ಸರ್ಕಸ್​ ನಡೆದಿದೆ. ಕನ್ನಡ ಕಿರುತೆರೆಯ ಖ್ಯಾತ ನಟಿ ಸುಷ್ಮಾ ರಾವ್ ಅವರನ್ನು ಬಿಗ್​ ಬಾಸ್​ ಮನೆಯೊಳಗೆ ಕಳಿಸಿ, ವರ್ತೂರು ಸಂತೋಷ್​ಗೆ ಬುದ್ಧಿಮಾತು ಹೇಳುವ ಪ್ರಯತ್ನ ಮಾಡಲಾಗಿದೆ. ಅಚ್ಚರಿ ಏನೆಂದರೆ ಸುಷ್ಮಾ ರಾವ್​ (Sushma Rao) ಅವರು ದೊಡ್ಮನೆಯೊಳಗೆ ಕಾಲಿಟ್ಟಿದ್ದು ಕೇವಲ ಇದೊಂದೇ ಕಾರಣಕ್ಕಾಗಿ ಅಲ್ಲ. ಅಸಲಿ ಕಾರಣಗಳು ಇನ್ನಷ್ಟು ಇವೆ..

ಈಗ ಬಿಗ್​ ಬಾಸ್​ ಮನೆಯಲ್ಲಿ 5 ವಾರಗಳು ಕಳೆದಿವೆ. 6ನೇ ವಾರಕ್ಕೆ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಹೊರ ಜಗತ್ತಿನಿಂದ ಅವರು ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದ್ದಾರೆ. ತಮ್ಮ ಆಟದ ವೈಖರಿ ಯಾವ ರೀತಿ ಇದೆ ಎಂಬುದು ಸ್ವತಃ ಸ್ಪರ್ಧಿಗಳಿಗೂ ತಿಳಿದಿರುವುದಿಲ್ಲ. ತಮ್ಮ ವ್ಯಕ್ತಿತ್ವದ ಬಗ್ಗೆ ವೀಕ್ಷಕರಿಗೆ ಯಾವ ರೀತಿಯ ಭಾವನೆ ಇದೆ ಎಂಬುದು ಗೊತ್ತಾದರೆ ಇನ್ನಷ್ಟು ಚೆನ್ನಾಗಿ ಆಟವಾಡಲು ಸ್ಪರ್ಧಿಗಳಿಗೆ ಹುಮ್ಮಸ್ಸು ಬರುತ್ತದೆ. ಆ ಹುಮ್ಮಸ್ಸು ತುಂಬುವ ಕೆಲಸವನ್ನು ಸುಷ್ಮಾ ರಾವ್​ ಮಾಡಿದ್ದಾರೆ.

ಇದನ್ನೂ ಓದಿ: Varthur Santhosh: ‘ಚಿನ್ನದ ಚೈನ್​ನಲ್ಲಿ ಕಟ್ಟಿಹಾಕಿದ್ರೂ ಇಲ್ಲಿ ಇರೋಕೆ ಆಗಲ್ಲ’: ಸ್ಪಷ್ಟ ನಿರ್ಧಾರ ತಿಳಿಸಿದ ವರ್ತೂರು ಸಂತೋಷ್​

ಎಲ್ಲ ಸ್ಪರ್ಧಿಗಳ ಜೊತೆಗೂ ಸುಷ್ಮಾ ರಾವ್​ ಮಾತನಾಡಿದ್ದಾರೆ. ಯಾರ ಪರ್ಫಾರ್ಮೆನ್ಸ್​ ಯಾವ ರೀತಿ ಮೂಡಿಬರುತ್ತಿದೆ ಎಂಬುದನ್ನು ಅವರು ಕೆಲವರಿಗೆ ನೇರವಾಗಿ ಹಾಗೂ ಕೆಲವರಿಗೆ ಪರೋಕ್ಷವಾಗಿ ಹೇಳಿದ್ದಾರೆ. ತುಕಾಲಿ ಸಂತೋಷ್​ ಕಡ್ಡಿ ಗೀರುವ ಕೆಲಸ ಮಾಡುತ್ತಿದ್ದಾರೆ ಎಂದು ಸುಷ್ಮಾ ರಾವ್​ ಎಲ್ಲರ ಎದುರಿನಲ್ಲಿ ಹೇಳಿದರು. ‘ನಿಮ್ಮ ಆಟ ಚೆನ್ನಾಗಿದೆ’ ಎಂದು ಪರ್ಸನಲ್​ ಆಗಿ ತುಕಾಲಿ ಸಂತೋಷ್​ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಂಗೀತಾ ಶೃಂಗೇರಿ, ಈಶಾನಿ, ಡ್ರೋನ್​ ಪ್ರತಾಪ್​, ನಮ್ರತಾ ಗೌಡ ಸೇರಿದಂತೆ ಅನೇಕ ಬಳಿ ಹೋಗಿ ಅವರು ಕೆಲವು ಸಲಹೆ ಗಳನ್ನು ನೀಡಿದ್ದಾರೆ.

‘ನಿಮ್ಮೆಲ್ಲರಿಗೂ ಹ್ಯಾಟ್ಸಾಫ್​. ಬಿಗ್​ ಬಾಸ್​ನಲ್ಲಿ ಈ ರೀತಿ ಜೀವನ ಸಾಗಿಸುವುದು ಕಷ್ಟ. ಈ ಸೀಸನ್​ ತುಂಬ ಅದ್ಭುತವಾಗಿ ಮೂಡಿಬರುತ್ತಿದೆ. ನಾನು ತಮಾಷೆ ಮಾಡುತ್ತಿಲ್ಲ. ನೀವು ನಿರೀಕ್ಷೆಯೂ ಮಾಡಿರದ ರೀತಿಯಲ್ಲಿ ರೆಸ್ಪಾನ್ಸ್​ ಸಿಗುತ್ತಿದೆ. ಅದಕ್ಕಾಗಿ ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಸುಷ್ಮಾ ರಾವ್​ ಹೇಳಿದ್ದಾರೆ. ಇದರಿಂದಾಗಿ ಎಲ್ಲ ಸ್ಪರ್ಧಿಗಳಿಗೆ ಒಂದು ಐಡಿಯಾ ಸಿಕ್ಕಂತೆ ಆಗಿದೆ. ಆ ಕೆಲಸವನ್ನು ಸುಷ್ಮಾ ರಾವ್​ ಮಾಡಿದ್ದಾರೆ. ಆದ್ದರಿಂದ ಹಬ್ಬದ ಬಳಿಕ ಎಲ್ಲರ ಆಟದ ವೈಖರಿ ಬದಲಾಗುವ ಸಾಧ್ಯತೆ ಇದೆ. ಪ್ರತಿ ರಾತ್ರಿ ‘ಕಲರ್ಸ್​ ಕನ್ನಡ’ದಲ್ಲಿ ರಾತ್ರಿ 9.30ಕ್ಕೆ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ 24 ಗಂಟೆಯೂ ಉಚಿತವಾಗಿ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು