ಅಂದು ವಿನಯ್ ಜತೆ ಜಗಳವಾಡಿ ಇಂದು ಲವ್ ಎನ್ನುತ್ತಿರುವ ಸಂಗೀತಾ; ಶಾಕ್ ಆದ ಕಾರ್ತಿಕ್?
ದೀಪಾವಳಿ ಹಬ್ಬದ ಪ್ರಯುಕ್ತ ನೀಡಲಾಗಿದ್ದ ಟಾಸ್ಕ್ ಸಮಯದಲ್ಲಿ ಅನೇಕ ಸತ್ಯಗಳು ಹೊರಬಿದ್ದಿವೆ. ಯಾರಿಗೆ ಯಾರ ಮೇಲೆ ಪ್ರೀತಿ ಇದೆ? ಯಾರಿಗೆ ಯಾರ ಮೇಲೆ ಕ್ರಶ್ ಆಗಿದೆ ಎಂಬಿತ್ಯಾದಿ ವಿಚಾರಗಳನ್ನು ಬಿಗ್ ಬಾಸ್ ಸ್ಪರ್ಧಿಗಳು ಬಾಯಿ ಬಿಟ್ಟಿದ್ದಾರೆ. ಸಂಗೀತಾ ಶೃಂಗೇರಿ ಹೇಳಿದ ಮಾತು ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ದೊಡ್ಮನೆಯೊಳಗೆ ಕಾರ್ತಿಕ್ ಮಹೇಶ್ ಮತ್ತು ಸಂಗೀತಾ ಶೃಂಗೇರಿ (Sangeetha Sringeri) ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ತಮ್ಮಿಬ್ಬರ ನಡುವೆ ಪ್ರೀತಿ ಇದೆ ಎಂದು ಕಾರ್ತಿಕ್ ಭಾವಿಸಿದ್ದಾರೆ. ಆದರೆ ಸಂಗೀತಾ ಅವರು ಅದನ್ನು ಸ್ನೇಹ ಎಂದು ಆಗಾಗ ಸ್ಪಷ್ಟಪಡಿಸುತ್ತಲೇ ಇದ್ದಾರೆ. ಭಾನುವಾರ (ನ.13) ಬಿಗ್ ಬಾಸ್ ನೀಡಿದ್ದ ಟಾಸ್ಕ್ನಲ್ಲಿ ಸಖತ್ ಫನ್ ತುಂಬಿತ್ತು. ಈ ವೇಳೆ ಸಂಗೀತಾ ಶೃಂಗೇರಿ ಅವರು ಹೊಸ ವಿಚಾರ ಬಹಿರಂಗ ಮಾಡಿದ್ದಾರೆ. ‘ಸಂಗೀತಾ ಮತ್ತು ವಿನಯ್ ಅವರು ಈ ಮನೆಯಲ್ಲಿ ಯಾವಾಗಲೂ ಪ್ರೀತಿ ಮಾಡುತ್ತಾರೆ’ ಎಂದು ಸ್ವತಃ ಸಂಗೀತಾ ಹೇಳಿದರು. ಇದನ್ನು ಕೇಳಿ ಕಾರ್ತಿಕ್ ಮಹೇಶ್ ಅವರಿಗೆ ಶಾಕ್ ಆಗಿದೆ. ಬಿಗ್ ಬಾಸ್ ಮನೆಯ ಇತರೆ ಸದಸ್ಯರು ಕೂಡ ಹೋ ಎಂದು ಕಿರುಚಿದ್ದಾರೆ. ಕೆಲವೇ ದಿನಗಳ ಹಿಂದೆ ಸಂಗೀತಾ ಹಾಗೂ ವಿನಯ್ ಗೌಡ (Vinay Gowda) ಹಾವು-ಮುಂಗುಸಿ ರೀತಿ ಕಿತ್ತಾಡಿದ್ದರು. ಈಗ ಸಂಗೀತಾ ಪ್ರೀತಿ ಎಂದಿದ್ದು ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಈ ಮೋಜಿನ ಟಾಸ್ಕ್ ಸಮಯದಲ್ಲಿ ಅನೇಕ ಸತ್ಯಗಳು ಹೊರಬಿದ್ದಿವೆ. ಯಾರಿಗೆ ಯಾರ ಮೇಲೆ ಪ್ರೀತಿ ಇದೆ? ಯಾರಿಗೆ ಯಾರ ಮೇಲೆ ಕ್ರಶ್ ಆಗಿದೆ ಎಂಬಿತ್ಯಾದಿ ವಿಚಾರಗಳನ್ನು ಬಿಗ್ ಬಾಸ್ (Bigg Boss Kannada) ಸ್ಪರ್ಧಿಗಳು ಬಾಯಿ ಬಿಟ್ಟಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್ ಬಾಸ್ ಸಂಚಿಕೆ ಬಿತ್ತರವಾಗುತ್ತದೆ. ಜಿಯೋ ಸಿನಿಮಾದಲ್ಲಿ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 14, 2023 07:41 AM
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

