ಮುನಿಸು ಹತ್ತಿಕ್ಕಿ ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಮನೆಯಲ್ಲಿ ಅಭಿನಂದಿಸಿದ ಸಿಟಿ ರವಿ
ಮುನಿಸಿಕೊಂಡಿರುವ ಪ್ರಬಲ ಲಿಂಗಾಯತ ಸಮುದಾಯದ ಮತದಾರರನ್ನು ಲೋಕ ಸಭೆ ಚುನಾವಣೆಗೆ ಮೊದಲು ಪುನಃ ಒಲಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ವಿಜಯೇಂದ್ರರಿಗೆ ಬಡ್ತಿ ನೀಡಿರುವುದು ನಿಜವಾದರೂ, ರವಿ, ರಮೇಶ್ ಜಿಗಜಿಣಿಗೆ, ಸೋಮಣ್ಣ, ಡಿವಿ ಸದಾನಂದ ಗೌಡ, ಬಸನಗೌಡ ಯತ್ನಾಳ್ ಮೊದಲಾದವರು ಹೈಕಮಾಂಡ್ ನಡೆಯಿಂದ ತೀವ್ರ ಅಸಮಾಧಾನಗೊಡಿರುವುದೂ ಸುಳ್ಳಲ್ಲ.
ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಪಕ್ಷದ ವರಿಷ್ಠರು ಬಿ ಎಸ್ ಯಡಿಯೂರಪ್ಪ (BS Yediyurappa) ಅವರ ಪುತ್ರ ಮತ್ತು ಶಾಸಕ ಬಿವೈ ವಿಜಯೇಂದ್ರ (BY Vijayendra) ಅವರನ್ನು ನೇಮಕ ಮಾಡಿದ್ದು ನಾಳೆ ಅವರು ಅಧಿಕೃತವಾಗಿ ನಿರ್ಗಮಿಸಲಿರುವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರಿಂದ ಅಧಿಕಾರವಹಿಸಿಕೊಳ್ಳಲಿದ್ದಾರೆ. ಅವರ ಅಯ್ಕೆಯ ಬಗ್ಗೆ ಅಸಮಾಧಾನಗೊಂಡಿರುವ ಹಲವು ಬಿಜೆಪಿ ನಾಯಕರಲ್ಲಿ ಒಬ್ಬರಾಗಿರುವ ಮಾಜಿ ಶಾಸಕ ಸಿಟಿ ರವಿ ಇಂದು ಬೆಳಗ್ಗೆ ನಗರದ ಶಿವಾನಂದ ಸರ್ಕಲ್ ನಲ್ಲಿರುವ ವಿಜಯೇಂದ್ರರ ಖಾಸಗಿ ನಿವಾಸಕ್ಕೆ ತೆರಳಿ ನಿಯೋಜಿತ ರಾಜ್ಯಾಧ್ಯಕ್ಷರನ್ನು ಅಭಿನಂದಿಸಿ ಶುಭಕೋರಿದರು. ಶನಿವಾರ ಮತ್ತು ನಿನ್ನೆ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ರವಿ ತಮ್ಮ ಅತೃಪ್ತಿ ಮತ್ತು ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದರು. ಮುನಿಸಿಕೊಂಡಿರುವ ಪ್ರಬಲ ಲಿಂಗಾಯತ ಸಮುದಾಯದ ಮತದಾರರನ್ನು ಲೋಕ ಸಭೆ ಚುನಾವಣೆಗೆ ಮೊದಲು ಪುನಃ ಒಲಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ವಿಜಯೇಂದ್ರರಿಗೆ ಬಡ್ತಿ ನೀಡಿರುವುದು ನಿಜವಾದರೂ, ರವಿ, ರಮೇಶ್ ಜಿಗಜಿಣಿಗೆ, ಸೋಮಣ್ಣ, ಡಿವಿ ಸದಾನಂದ ಗೌಡ, ಬಸನಗೌಡ ಯತ್ನಾಳ್ ಮೊದಲಾದವರು ಹೈಕಮಾಂಡ್ ನಡೆಯಿಂದ ತೀವ್ರ ಅಸಮಾಧಾನಗೊಡಿರುವುದೂ ಸುಳ್ಳಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ