‘ನಿಮ್ಮ ಮೇಲೆ ಪ್ರೀತಿ ಇಲ್ಲ’: ನೇರವಾಗಿ ಹೇಳಿದ ಸಂಗೀತಾ; ಕೂಗಾಡಿ, ರಂಪಾಟ ಮಾಡಿದ ಕಾರ್ತಿಕ್​

ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ಅವರ ನಡುವೆ ಈಗ ಸಂಬಂಧ ಮೊದಲಿನಂತಿಲ್ಲ. ಇಬ್ಬರ ನಡುವೆ ಮನಸ್ತಾಪ ಮೂಡಿದೆ. ಕಾರ್ತಿಕ್​ ಅವರ ಕೆಲವು ಮಾತುಗಳು ಸಂಗೀತಾಗೆ ಇಷ್ಟ ಆಗಿಲ್ಲ. ಗಾರ್ಡನ್​ ಏರಿಯಾದಲ್ಲಿ ಸಂಗೀತಾ ಕುಳಿತಿದ್ದಾಗ ಕಾರ್ತಿಕ್​ ಮಾತನಾಡಿಸಲು ಬಂದರು. ಆಗ ಅವರಿಬ್ಬರ ನಡುವೆ ಜಗಳ ನಡೆಯಿತು.

‘ನಿಮ್ಮ ಮೇಲೆ ಪ್ರೀತಿ ಇಲ್ಲ’: ನೇರವಾಗಿ ಹೇಳಿದ ಸಂಗೀತಾ; ಕೂಗಾಡಿ, ರಂಪಾಟ ಮಾಡಿದ ಕಾರ್ತಿಕ್​
ಸಂಗೀತಾ ಶೃಂಗೇರಿ, ಕಾರ್ತಿಕ್​ ಮಹೇಶ್​
Follow us
ಮದನ್​ ಕುಮಾರ್​
|

Updated on: Nov 11, 2023 | 2:31 PM

ಬಿಗ್​ ಬಾಸ್​ನ (Bigg Boss Kannada) ಪ್ರತಿ ಸೀಸನ್​ನಲ್ಲೂ ಕೆಲವರ ಮಧ್ಯೆ ಪ್ರೀತಿ ಚಿಗುರುತ್ತದೆ. ಈ ಬಾರಿ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ (Karthik Mahesh) ಅವರು ಹೆಚ್ಚು ಆಪ್ತವಾಗಿದ್ದಾರೆ. ಈ ಸಂಬಂಧಕ್ಕೆ ಏನು ಹೇಳಬೇಕು ಎಂಬ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಇಬ್ಬರ ಜೋಡಿ ಚೆನ್ನಾಗಿದೆ ಎಂಬುದು ವೀಕ್ಷಕರ ಅಭಿಪ್ರಾಯ. ದೊಡ್ಮನೆಯೊಳಗೆ ಇರುವ ಸ್ಪರ್ಧಿಗಳ ಪೈಕಿ ಕೆಲವರು ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆ. ಆದರೆ ತಮ್ಮ ಮನಸ್ಸಿನಲ್ಲಿ ರೀತಿ ಯಾವುದೇ ಭಾವನೆ ಇಲ್ಲ ಎಂದು ಸಂಗೀತಾ ಶೃಂಗೇರಿ (Sangeetha Sringeri) ಅವರು ನೇರವಾಗಿ ಹೇಳಿದ್ದಾರೆ. ಇದರಿಂದ ಕಾರ್ತಿಕ್​ ಮಹೇಶ್​ ಅವರಿಗೆ ಬೇಸರ ಆದಂತಿದೆ. ಈ ಘಟನೆ ನಡೆದು ಸ್ವಲ್ಪ ಹೊತ್ತಿನ ಬಳಿಕ ಅವರು ಕೂಗಾಡಿ, ಕಿರುಚಾಡಿ ರಂಪಾಟ ಮಾಡಿದ್ದಾರೆ. ಇದರಿಂದ ಸಂಗೀತಾ ಶೃಂಗೇರಿ ಅವರಿಗೆ ಶಾಕ್​ ಆಗಿದೆ.

ಸಂಗೀತಾ ಶೃಂಗೇರಿ ನೇರನುಡಿ:

ನವೆಂಬರ್​ 10ರ ಸಂಚಿಕೆಯಲ್ಲಿ ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್​, ಕಾರ್ತಿಕ್​ ಮಹೇಶ್​ ಒಂದೆಡೆ ಕುಳಿತಿದ್ದರು. ‘ನಮ್ಮಿಬ್ಬರ ಜೋಡಿ ಹೇಗಿದೆ? ಚೆನ್ನಾಗಿದೆಯಾ’ ಎಂದು ಕಾರ್ತಿಕ್​ ಮಹೇಶ್​ ಕೇಳಿದರು. ‘ನೀವು ಹೀಗೆ ಮಾಡಿದ್ದರಿಂದಲೇ ಜನರು ಆ ರೀತಿ ಅಂದುಕೊಂಡಿರುವುದು. ಜೋಡಿ ಹೇಗಿದೆ ಎಂದೆಲ್ಲ ಕೇಳಿದ ಮೇಲೆ ನಾವಿಬ್ಬರು ಫ್ರೆಂಡ್ಸ್​ ಎಂದರೆ ಬೇರೆಯವರು ಹೇಗೆ ನಂಬುತ್ತಾರೆ’ ಎಂದು ಸಂಗೀತಾ ತುಸು ಗರಂ ಆಗಿ ಕೇಳಿದರು. ‘ಇಷ್ಟು ದಿನ ನಾವೆಲ್ಲರೂ ನಿಮ್ಮನ್ನು ನೋಡಿದ್ದು ಪ್ರೇಮಿಗಳ ರೀತಿಯಲ್ಲಿ. 5 ವಾರದಲ್ಲಿ ನನಗೆ ಕಾಣಿಸಿದ್ದು ಅದೇ ರೀತಿ’ ಎಂದು ತುಕಾಲಿ ಸಂತೋಷ್​ ಹೇಳಿದಾಗ ಕಾರ್ತಿಕ್​ ಮಹೇಶ್​ಗೆ ಖುಷಿ ಆಯಿತು. ಆದರೆ ಸಂಗೀತಾಗೆ ಅದು ಸರಿ ಎನಿಸಲಿಲ್ಲ. ‘ನಾಚಿಕೊಳ್ಳುತ್ತಿದ್ದಾರೆ. ಆದರೆ ನನಗೆ ಹಂಗೇನೂ ಇಲ್ಲ. ಇವರದ್ದು ಒನ್​ ಸೈಡೆಡ್​​. ಹಿಂಗೇ ಮಾಡಿದರೆ ಒದೆ ಬೀಳುತ್ತದೆ’ ಎಂದು ಸಂಗೀತಾ ನೇರವಾಗಿಯೇ ಹೇಳಿದರು.

ಇದನ್ನೂ ಓದಿ: ಸಂಗೀತಾಗೂ ಸ್ನೇಹಿತ್​ಗೂ ಮದುವೆ! ಕಾರ್ತಿಕ್ ಕತೆಯೇನು?

ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ಅವರ ನಡುವೆ ಈ ಸಂಬಂಧ ಮೊದಲಿನಂತಿಲ್ಲ. ಇಬ್ಬರ ನಡುವೆ ಮನಸ್ತಾಪ ಮೂಡಿದೆ. ಕಾರ್ತಿಕ್​ ಅವರ ಕೆಲವು ಮಾತುಗಳು ಸಂಗೀತಾಗೆ ಇಷ್ಟ ಆಗಿಲ್ಲ. ಗಾರ್ಡನ್​ ಏರಿಯಾದಲ್ಲಿ ಸಂಗೀತಾ ಕುಳಿತಿದ್ದಾಗ ಕಾರ್ತಿಕ್​ ಮಾತನಾಡಿಸಲು ಬಂದರು. ಆಗ ಅವರಿಬ್ಬರ ನಡುವೆ ಜಗಳ ನಡೆಯಿತು. ‘ನಾನು ಕೂಡ ಇಲ್ಲಿ ಕಂಟೆಂಟ್​ ಕೊಡೋಕೆ ಬಂದಿದ್ದೇನೆ. ನೀವು ಬಂದು ಸೈಡಿಗೆ ಹೋಗು ಎಂದು ಪದೇ ಪದೇ ಹೇಳಿದರೆ ಅದು ಸರಿ ಎನಿಸುವುದಿಲ್ಲ’ ಎಂದರು ಸಂಗೀತಾ. ‘ನಾನು ನಿನಗೆ ಹೇಳಿದ್ದಲ್ಲ’ ಎಂದು ಕಾರ್ತಿಕ್​ ವಾದ ಮಾಡಿದರು. ಅದನ್ನು ಸಂಗೀತಾ ಒಪ್ಪಲಿಲ್ಲ.

ಇದನ್ನೂ ಓದಿ: ಎಲ್ಲರೂ ಇಟ್ಟಿದ್ದ ನಂಬಿಕೆ ಉಳಿಸಿಕೊಳ್ಳಲಿಲ್ಲ ಸಂಗೀತಾ ಶೃಂಗೇರಿ; ಕಣ್ಣೀರು ಹಾಕಿದ ನಟಿ

ಸಂಗೀತಾ ಅವರು ಹೇಳಿದ ಮಾತಿಗೆ ಕಾರ್ತಿಕ್​ ಬೇಸರ ಮಾಡಿಕೊಂಡರು. ಕೈಯಲ್ಲಿದ್ದ ಆಹಾರವನ್ನು ನೆಲಕ್ಕೆ ಎಸೆದು ಅಲ್ಲಿಂದ ಹೊರಟುಹೋದರು. ‘ಒಂದ ಸಲ, ಎರಡು ಸಲ ಅಲ್ಲ. ಬರೀ ಇದೇ ಆಯ್ತು. ನಾನು ನೋಡುತ್ತಲೇ ಇದ್ದೇನೆ ಗುರೂ’ ಎಂದು ಹೇಳುತ್ತಾ ಬೆಡ್​ ರೂಮ್​ಗೆ ತೆರಳಿದ್ದರು. ಗಾಜಿನ ಬಾಗಿಲನ್ನು ಜೋರಾಗಿ ತೆಗೆದು ಸದ್ದು ಮಾಡಿದರು. ಎಲ್ಲರ ಎದುರು ಅವರು ವಿಪರೀತ ಕೋಪ ತೋರಿಸಿದರು. ಕಾರ್ತಿಕ್​ ಊಟ ಎಸೆದಿದ್ದು ಸಂಗೀತಾಗೆ ಸರಿ ಎನಿಸಲಿಲ್ಲ. ಇನ್ನೊಂದಡೆ ವಿನಯ್​ ಜೊತೆಗಿನ ಸಂಗೀತಾ ಅವರ ಕಿರಿಕ್​ ಕಡಿಮೆ ಆಗಿದೆ. ಎಲ್ಲರ ಜೊತೆಗೂ ಅವರು ಬೆರೆಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?