AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗೀತಾಗೂ ಸ್ನೇಹಿತ್​ಗೂ ಮದುವೆ! ಕಾರ್ತಿಕ್ ಕತೆಯೇನು?

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಪರಸ್ಪರ ಆತ್ಮೀಯರಾಗಿದ್ದಾರೆ. ಕಾರ್ತಿಕ್ ಆಗಾಗ್ಗೆ ಸಂಗೀತಾ ತನ್ನ ಗರ್ಲ್​ಫ್ರೆಂಡ್ ಎಂದು ಕಾಲೆಳೆಯುವುದೂ ಉಂಟು. ಆದರೆ ಅಚಾನಕ್ಕಾಗಿ ಸಂಗೀತಾ ಹಾಗೂ ಸ್ನೇಹಿತ್​ಗೂ ಮದುವೆಯಾಗಿದೆ. ಹಾಗಿದ್ದರೆ ಕಾರ್ತಿಕ್ ಗತಿಯೇನು?

ಸಂಗೀತಾಗೂ ಸ್ನೇಹಿತ್​ಗೂ ಮದುವೆ! ಕಾರ್ತಿಕ್ ಕತೆಯೇನು?
ಸ್ನೇಹಿತ್-ಸಂಗೀತಾ
ಮಂಜುನಾಥ ಸಿ.
|

Updated on: Nov 10, 2023 | 11:43 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಆಪ್ತತೆ ಹೆಚ್ಚಿದೆ. ಇಬ್ಬರೂ ತಾವು ಸ್ನೇಹಿತರು ಎಂದು ಹೇಳುತ್ತಿರುತ್ತಾರೆ. ಕಾರ್ತಿಕ್, ಸಂಗೀತಾ ಬಗ್ಗೆ ಆಗಾಗ್ಗೆ ಕಾಲೆಳೆದರೂ ಸಹ ಸಂಗೀತಾ ಅಂತೂ ಈ ವಿಷಯದಲ್ಲಿ ಸ್ಪಷ್ಟವಾಗಿದ್ದಾರೆ. ತಮ್ಮಿಬ್ಬರ ಆತ್ಮೀಯತೆಯನ್ನು ಇತರರು ಪ್ರೇಮ ಎಂದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಪರಸ್ಪರರಿಂದ ದೂರ ಇರುವ ನಿರ್ಣಯ ಮಾಡಿದ್ದರು ಸಂಗೀತಾ, ಆದರೆ ಅದು ಹಾಗಾಗಿಲ್ಲ, ಇಬ್ಬರೂ ಮತ್ತೆ ಹತ್ತಿರವಾಗಿದ್ದಾರೆ. ಆದರೆ ಈ ನಡುವೆ ಸಂಗೀತಾಗೂ ಬಿಗ್​ಬಾಸ್ ಮನೆಯ ಮತ್ತೊಬ್ಬ ಹ್ಯಾಂಡ್ಸಮ್ ಯುವಕ ಸ್ನೇಹಿತ್​ಗೂ ಮದುವೆ ಆಗಿದೆ!

ಸಂಗೀತಾ ಶುಕ್ರವಾರದ ಎಪಿಸೋಡ್​ನಲ್ಲಿ ಅಪರೂಪಕ್ಕೆ ವಿನಯ್ ಜೊತೆ ಮಾತಿಗೆ ಕೂತಿದ್ದರು. ಬಹಳ ಖುಷಿ-ಖುಷಿಯಾಗಿ ಇಬ್ಬರೂ ಮಾತನಾಡುತ್ತಿದ್ದರು, ಈ ಸಂದರ್ಭದಲ್ಲಿ ಸಂಗೀತಾ ತಮಗೆ ಬಂದಿದ್ದ ಕನಸಿನ ಬಗ್ಗೆ ವಿನಯ್ ಬಳಿ ಹೇಳಿಕೊಂಡರು. ಸಂಗೀತಾ ಹೇಳಿದಂತೆ, ಅವರಿಗೆ ಒಂದು ವಿಚಿತ್ರ ಕನಸು ಬಂತಂತೆ, ಕನಸಿನಲ್ಲಿ ಸಂಗೀತಾರ ಮನೆಯವರು ಸ್ನೇಹಿತ್ ಜೊತೆಗೆ ಸಂಗೀತಾರ ಮದುವೆ ಮಾಡಿಸುತ್ತಿದ್ದರಂತೆ.

ಸಂಗೀತಾ, ಬೇಡ, ಸ್ನೇಹಿತ್ ಸರಿಯಿಲ್ಲ ಬೇಡ ಎಂದರೆ, ಸಂಗೀತಾ ಮನೆಯವರು ‘ಇಲ್ಲ ಅವನು ಬಹಳ ಶ್ರೀಮಂತ ಮದುವೆ ಮಾಡಿಕೋ’ ಎನ್ನುತ್ತಿದ್ದರಂತೆ. ಸಂಗೀತಾರ ಕನಸು ಕೇಳಿ ವಿನಯ್ ಬಿದ್ದು ಬಿದ್ದು ನಗುತ್ತಿದ್ದರು. ಕನಸಿನ ಕತೆ ಮುಂದುವರೆಸಿದ ಸಂಗೀತಾ, ‘ನಾನು ಸ್ನೇಹಿತ್ ಜೊತೆ ಮದುವೆಯಾಗಲ್ಲ, ಅವನಿಗಿಂತಲೂ ಕಾರ್ತಿಕ್ ಬೆಟರ್ ಎಂದು ತನ್ನ ಮನೆಯವರನ್ನು ಒಪ್ಪಿಸಲು ಯತ್ನಿಸಿದರಂತೆ. ಸಂಗೀತಾ ಸ್ನೇಹಿತ್ ಬಳಿಯೂ ಹೋಗಿ, ನೀನಾದರೂ ನಿಮ್ಮ ಮನೆಯವರಿಗೆ ಹೇಳುವುದಲ್ಲವಾ, ಸಂಗೀತಾ ಬೇಡ, ಆಕೆ ಆರೊಗೆಂಟ್ ಎಂದು ಸಹ ಹೇಳಿದರಂತೆ. ಆದರೆ ಸ್ನೇಹಿತ್​ಗೆ ನಾನು ಬೇಡ ಅನ್ನಲ್ಲ, ಯಾರಾದರೂ ಆಗಲಿ ನನಗೆ ಮದುವೆ ಆದರೆ ಸಾಕು ಅಂದರಂತೆ.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ ಸೀಸನ್ 10 ಗೆಲ್ತಾರಾ ನಮ್ರತಾ: ಆರ್ಯವರ್ಧನ್ ಹೇಳಿದ್ದೇನು?

ತಮ್ಮ ಈ ಕನಸನ್ನು ‘ಕೆಟ್ಟ ಕನಸು’ ಎಂದು ಸಂಗೀತಾ ಬಣ್ಣಿಸಿದರು. ಆದರೆ ವಿನಯ್, ಯಾರಿಗೆ ಗೊತ್ತು ಇದು ಒಳ್ಳೆಯ ಕನಸೂ ಆಗಿರಬಹುದು, ಕನಸು ನಿಜವೂ ಆಗಬಹುದು ಎಂದರು. ಅದಾದ ಬಳಿಕ ಸಂಗೀತಾ ಹಾಗೂ ಕಾರ್ತಿಕ್ ಚೆನ್ನಾಗಿಯೇ ಮಾತನಾಡಿಕೊಂಡಿದ್ದರು. ಬಳಿಕ ಬಿಗ್​ಬಾಸ್ ಆದೇಶದಂತೆ ಮನೆಯ ಸದಸ್ಯರು ಹೊರಗಡೆ ಏರಿಯಾದಲ್ಲಿ ಬಜ್ಜಿ ತಯಾರು ಮಾಡಿದರು. ಆಗ ಕಾರ್ತಿಕ್, ಸಹಜವಾಗಿಯೇ ಸಂಗೀತಾರಿಗೆ ಕ್ಯಾಮೆರಾಗೆ ಅಡ್ಡ ಬರುತ್ತಿದ್ದೀಯ ದೂರ ಹೋಗು ಎಂದರು. ಬಳಿಕ ಸಂಗೀತಾ ದೂರ ಹೋಗಿ ವರ್ತೂರು ಸಂತೋಷ್ ಜೊತೆ ಕುಳಿತುಕೊಂಡರು.

ಬಳಿಕ ಕಾರ್ತಿಕ್, ಸಂಗೀತಾ ಬಳಿ ಬಂದು ಅವರಿಗೆ ಬಜ್ಜಿ ಕೊಟ್ಟು, ಬಜ್ಜಿ ಮಾಡುವಲ್ಲಿಗೆ ಕರೆದರು, ಆದರೆ ಸಂಗೀತಾ, ಕಾರ್ತಿಕ್ ಬಳಿ ಜಗಳ ಪ್ರಾರಂಭಿಸಿ, ನಾನು ಸಹಾಯ ಮಾಡಲು ಬಂದಿದ್ದೆ ಆದರೆ ನೀನು ಹೇಗೆ ನನ್ನನ್ನು ದೂರ ಹೋಗು ಎಂದು ಹೇಳಿದೆ. ನೀವೆಲ್ಲ ಅಡುಗೆ ಮಾಡುತ್ತಾ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತೀರ, ನನಗೆ ಅಡುಗೆ ಮಾಡಲು ಬರಲ್ಲ, ಕನಿಷ್ಟ ಸಹಾಯ ಮಾಡೋಣ ಅಂತ ಬಂದೆ ಆದರೆ ನೀನು ನನ್ನನ್ನು ದೂರ ಹೋಗು ಎಂದೆ ಎಂದರು.

ಕಾರ್ತಿಕ್, ತಾನು ಕ್ಯಾಮೆರಾಗೆ ಅಡ್ಡ ಬರಬೇಡ ಎಂದಷ್ಟೆ ಹೇಳಿದೆ ಎಂದು ಹೇಳಿದರು. ಆದರೂ ಸಂಗೀತಾ ಆ ಮಾತನ್ನು ಒಪ್ಪಿಕೊಳ್ಳಲಿಲ್ಲ, ಕೂಡಲೇ ಕೋಪಗೊಂಡ ಕಾರ್ತಿಕ್, ಕೈಯಲ್ಲಿದ್ದ ಬಜ್ಜಿಯನ್ನು ಅಲ್ಲಿಯೇ ನೆಲದ ಮೇಲೆ ಎಸೆದು ಸಿಟ್ಟಿನಿಂದ ಅಲ್ಲಿಂದ ತೆರಳಿದರು. ಈ ವಾರ ಕಾರ್ತಿಕ್-ಸಂಗೀತಾ ಬಹಳ ಜಗಳವಾಡಿದ್ದಾರೆ. ಶುಕ್ರವಾರದ ಎಪಿಸೋಡ್​ನಲ್ಲಿ ನಡೆದಿದ್ದು ಬಹುಷಃ ನಾಲ್ಕನೇ ಜಗಳವೇನೋ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ