AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಖಲ್ ನಿಜಬಣ್ಣ ತಂಡದ ಮುಂದೆ ಬಯಲು, ಅತ್ತು ಕೈಮುಗಿದ ಇಶಾನಿ

Bigg Boss 10: ತಮ್ಮ ‘ಗಂದಧ ಗುಡಿ’ ತಂಡ ಗೆದ್ದಿದ್ದರೂ ಸಹ ಇಶಾನಿಯ ಒತ್ತಡಕ್ಕೆ ಮಣಿದು ಆಟ ಡ್ರಾ ಆಗಿದೆ ಎಂದು ಮೈಖಲ್ ಘೋಷಣೆ ಮಾಡಿದರು. ಇದು ಗಂಧದ ಗುಡಿ ತಂಡಕ್ಕೆ ಬೇಸರ ತರಿಸಿತ್ತು. ಆದರೆ ಮೈಖಲ್​ ಆಡಿದ್ದ ಪೂರ್ಣ ಆಟ ತಂಡದ ಸದಸ್ಯರಿಗೆ ಗೊತ್ತಿರಲಿಲ್ಲ, ಆದರೆ ಅದು ಬಯಲು ಮಾಡಿದ್ದು ಸುದೀಪ್.

ಮೈಖಲ್ ನಿಜಬಣ್ಣ ತಂಡದ ಮುಂದೆ ಬಯಲು, ಅತ್ತು ಕೈಮುಗಿದ ಇಶಾನಿ
ಮೈಖಲ್-ಇಶಾನಿ
ಮಂಜುನಾಥ ಸಿ.
|

Updated on:Nov 12, 2023 | 12:16 AM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ಮೈಖಲ್ ಒಳ್ಳೆಯ ಜಂಟಲ್​ಮ್ಯಾನ್ ಸ್ಪರ್ಧಿ ಎಂದು ಹೆಸರು ಪಡೆದುಕೊಂಡಿದ್ದರು. ಆದರೆ ಕಳೆದ ವಾರದ ಅಂತಿಮ ಟಾಸ್ಕ್​ನಲ್ಲಿ ಅವರು ಆಡಿದ ರೀತಿ ಅವರ ತಂಡಕ್ಕೆ ಬೇಸರ ತರಿಸಿತ್ತು. ತಮ್ಮ ‘ಗಂದಧ ಗುಡಿ’ ತಂಡ ಗೆದ್ದಿದ್ದರೂ ಸಹ ಇಶಾನಿಯ ಒತ್ತಡಕ್ಕೆ ಮಣಿದು ಆಟ ಡ್ರಾ ಆಗಿದೆ ಎಂದು ಮೈಖಲ್ ಘೋಷಣೆ ಮಾಡಿದರು. ಇದು ಗಂಧದ ಗುಡಿ ತಂಡಕ್ಕೆ ಬೇಸರ ತರಿಸಿತ್ತು. ಆದರೆ ಮೈಖಲ್​ ಆಡಿದ್ದ ಪೂರ್ಣ ಆಟ ತಂಡದ ಸದಸ್ಯರಿಗೆ ಗೊತ್ತಿರಲಿಲ್ಲ, ಆದರೆ ಅದು ಬಯಲು ಮಾಡಿದ್ದು ಸುದೀಪ್.

ಮೈಖಲ್, ತಮ್ಮ ಎದುರಾಳಿ ತಂಡವಾದ ವಜ್ರಕಾಯ ತಂಡದ ಬಳಿ ಹೋಗಿ ತಮ್ಮ ಕೆಲವು ಸ್ಟ್ರಾಟಜಿಗಳನ್ನು ನೀಡಿದ್ದು ಮಾತ್ರವೇ ಅಲ್ಲದೆ ಮೋಸದಿಂದ ಗೆಲ್ಲುವಂತೆಯೂ ಸಲಹೆ ನೀಡಿದ್ದರು. ಇದು ಗಂಧದ ಗುಡಿ ತಂಡಕ್ಕೆ ಗೊತ್ತಿರಲಿಲ್ಲ, ಆದರೆ ಸುದೀಪ್ ಇಂದು ಎಲ್ಲ ಸದಸ್ಯರ ಮುಂದೆ ವಿಡಿಯೋ ಪ್ಲೇ ಮಾಡಿ ತೋರಿಸಿದರು. ಆಗ ಮೈಖಲ್ ಹೌದು ನಾನು ತಪ್ಪು ಮಾಡಿದೆ, ಅವರು ಗೆದ್ದರೆ ಇಶಾನಿ ಉಳಿದುಕೊಳ್ಳುತ್ತಾಳೆ ಎಂಬ ಕಾರಣಕ್ಕೆ ಹಾಗೆ ಮಾಡಿದೆ ಎಂದರು.

ಮೈಖಲ್​ರ ವರ್ತನೆಯನ್ನು ಟೀಕಿಸಿದ ಸುದೀಪ್, ಒಂದು ತಂಡ ನಿಮ್ಮನ್ನು ನಂಬಿ ಜವಾಬ್ದಾರಿ ನೀಡಿದಾಗ ಅದನ್ನು ಸ್ವೀಕರಿಸಿ ಅವರ ಪರವಾಗಿ ಹೋರಾಡಬೇಕು, ಇಲ್ಲವಾದರೆ ಸುಮ್ಮನಾದರೂ ಇರಬೇಕೆ ವಿನಃ ಎದುರಾಳಿ ತಂಡದ ಜೊತೆ ಕೈ ಜೋಡಿಸಬಾರದು. ನಿಮ್ಮ ಆಟ ನೀವು ಆಡಿ ಇಶಾನಿಯನ್ನು ಉಳಿಸುವುದು ನಿಮ್ಮ ಜವಾಬ್ದಾರಿ ಅಲ್ಲ ಎಂದು ನೇರವಾಗಿ ಹೇಳಿದರು.

ಇದನ್ನೂ ಓದಿ:ಮೈಖಲ್ ನಿಜಬಣ್ಣ ತಂಡದ ಮುಂದೆ ಬಯಲು, ಇಶಾನಿ ವರ್ತನೆ ಬಗ್ಗೆ ಅಸಮಾಧಾನ

ಇಶಾನಿಯನ್ನು ತರಾಟೆಗೆ ತೆಗೆದುಕೊಂಡ ಸುದೀಪ್, ನೀವು ಸಿಕ್ಕಿ ಒಂದು ತಿಂಗಳಷ್ಟೆ ಆಗಿದೆ, ಬಾಯ್​ಫ್ರೆಂಡ್ ಅಂದ್ರೆ ಹೇಗಿರಬೇಕು ಎಂಬ ಎನ್​ಸೈಕ್ಲೋಪೀಡಿಯಾ ನಿಮ್ಮ ಬಳಿ ಇದೆ. ನೀವು ಮೈಖಲ್ ಅನ್ನು ಕಂಟ್ರೋಲ್ ಮಾಡಿಲ್ಲ ಎನ್ನುತ್ತೀರಿ, ಆದರೆ ನೀವು ಮಾಡಿದ್ದನ್ನು ಕಂಟ್ರೋಲಿಂಗ್ ಅನ್ನದೆ ಬೇರೇನು ಹೇಳಲಾಗದು. ಜೈಲಿನ ಮುಂದೆ ಕುಳಿತುಕೊ, ಬೆಡ್​ರೂಂಗೆ ಹೋಗಬೇಡ, ಹೀಗೆ ಮಾಡು, ಹಾಗೆ ಮಾಡು ಎನ್ನುತ್ತೀರಿ. ನಿಮ್ಮನ್ನು ಪ್ರೀತಿಸುವ ವ್ಯಕ್ತಿಗೆ ಗೌರವವನ್ನು ಕೊಡುವುದಾದರೂ ಕಲಿತುಕೊಳ್ಳಿ ಎಂದು ತುಸು ಖಾರವಾಗಿಯೇ ಹೇಳಿದರು. ಅಲ್ಲದೆ ಮೈಖಲ್ ಅನ್ನು ಉದ್ದೇಶಿಸಿ, ಇದು ಕಬ್ಬನ್ ಪಾರ್ಕ್ ಅಲ್ಲ, ಬಿಗ್​ಬಾಸ್ ಮನೆ ಎಂದರು.

ಒಂದು ತಂಡ ನಿಮ್ಮನ್ನು ನಂಬಿ ಜವಾಬ್ದಾರಿ ನೀಡಿದಾಗ ಅದನ್ನು ಸ್ವೀಕರಿಸಿ ಅವರ ಪರವಾಗಿ ಹೋರಾಡಬೇಕು, ಇಲ್ಲವಾದರೆ ಸುಮ್ಮನಾದರೂ ಇರಬೇಕೆ ವಿನಃ ಎದುರಾಳಿ ತಂಡದ ಜೊತೆ ಕೈ ಜೋಡಿಸಬಾರದು. ನಿಮ್ಮ ಆಟ ನೀವು ಆಡಿ ಇಶಾನಿಯನ್ನು ಉಳಿಸುವುದು ನಿಮ್ಮ ಜವಾಬ್ದಾರಿ ಅಲ್ಲ ಎಂದು ನೇರವಾಗಿ ಹೇಳಿದರು.

ಇಶಾನಿಯನ್ನು ತರಾಟೆಗೆ ತೆಗೆದುಕೊಂಡ ಸುದೀಪ್, ನೀವು ಸಿಕ್ಕಿ ಒಂದು ತಿಂಗಳಷ್ಟೆ ಆಗಿದೆ, ಬಾಯ್​ಫ್ರೆಂಡ್ ಅಂದ್ರೆ ಹೇಗಿರಬೇಕು ಎಂಬ ಎನ್​ಸೈಕ್ಲೋಪೀಡಿಯಾ ನಿಮ್ಮ ಬಳಿ ಇದೆ. ನೀವು ಮೈಖಲ್ ಅನ್ನು ಕಂಟ್ರೋಲ್ ಮಾಡಿಲ್ಲ ಎನ್ನುತ್ತೀರಿ, ಆದರೆ ನೀವು ಮಾಡಿದ್ದನ್ನು ಕಂಟ್ರೋಲಿಂಗ್ ಅನ್ನದೆ ಬೇರೇನು ಹೇಳಲಾಗದು. ಜೈಲಿನ ಮುಂದೆ ಕುಳಿತುಕೊ, ಬೆಡ್​ರೂಂಗೆ ಹೋಗಬೇಡ, ಹೀಗೆ ಮಾಡು, ಹಾಗೆ ಮಾಡು ಎನ್ನುತ್ತೀರಿ. ನಿಮ್ಮನ್ನು ಪ್ರೀತಿಸುವ ವ್ಯಕ್ತಿಗೆ ಗೌರವವನ್ನು ಕೊಡುವುದಾದರೂ ಕಲಿತುಕೊಳ್ಳಿ ಎಂದು ತುಸು ಖಾರವಾಗಿಯೇ ಹೇಳಿದರು. ಅಲ್ಲದೆ ಮೈಖಲ್ ಅನ್ನು ಉದ್ದೇಶಿಸಿ, ಇದು ಕಬ್ಬನ್ ಪಾರ್ಕ್ ಅಲ್ಲ, ಬಿಗ್​ಬಾಸ್ ಮನೆ ಎಂದರು.

ಆ ಸಂಭಾಷಣೆ ಬಳಿಕ ದೊರೆತ ಬ್ರೇಕ್​ನಲ್ಲಿ ಇಶಾನಿ ಹೋಗಿ ಮೈಖಲ್ ಬಳಿ ಕ್ಷಮೆ ಕೇಳಿದರು. ಆಗ ಮೈಖಲ್, ಇಶಾನಿ ವರ್ತನೆ ಬಗ್ಗೆ ಕೆಲವು ಕಟು ಸತ್ಯಗಳನ್ನು ಹೇಳಿದರು. ಅದನ್ನು ಕೇಳಿಸಿಕೊಂಡ ಇಶಾನಿ ಒಮ್ಮೆಲೆ ಅಳಲು ಆರಂಭಿಸಿದರು. ನಾನು ಕೆಟ್ಟವಳಲ್ಲ, ಮೈಖಲ್ ನನ್ನನ್ನು ಕೆಟ್ಟವಳು ಅಂದ ಎಂದರು. ಬಳಿಕ ಸುದೀಪ್ ಜೊತೆಗಿನ ಸಂವಾದದಲ್ಲಿಯೂ ಅಳುತ್ತಲೇ ಮಾತನಾಡಿ, ನಾನು ಈಗಿನ್ನೂ ಕಲಿಯುತ್ತಿದ್ದೀನಿ, ನಾನು ಯಾರಿಗೂ ಕೇಡು ಬಯಸಿಲ್ಲ, ನಾನು ಕಂಟ್ರೋಲ್ ಮಾಡುವಳಲ್ಲ, ನಾನು ಅಂಥಹಾ ಹುಡುಗಿ ಅಲ್ಲ ಎಂದು ಅಳುತ್ತಾ ಕೈ ಮುಗಿದು ಕ್ಷಮೆ ಕೇಳಿದರು. ಇಶಾನಿಗೆ ತುಸು ಸ್ಪೂರ್ತಿ ತುಂಬುವ ಮಾತನ್ನಾಡಿದ ನಟ ಸುದೀಪ್, ಇಬ್ಬರೂ ಗೆಳೆಯರಾಗಿರಿ, ಮುನಿಸು ಬೇಡ ಎಂದು ಸಂಧಾನ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:54 pm, Sat, 11 November 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ