ವಿದ್ಯುತ್ ಕಳ್ಳ ಕುಮಾರಸ್ವಾಮಿ ಪೋಸ್ಟರ್; ಪ್ರಿಯಾಂಕ್ ಖರ್ಗೆ ಏನಂದ್ರು ಗೊತ್ತಾ?
ವಿದ್ಯುತ್ ಕಳ್ಳ ಕುಮಾರಸ್ವಾಮಿ(HD Kumaraswamy) ಎಂದು ಪೋಸ್ಟರ್ ಅಂಟಿಸಿದ ವಿಚಾರ ‘ಪೋಸ್ಟರ್ ಅಂಟಿಸಿದ್ದು ನಾವಲ್ಲ, ನಮಗೇ ಬೇರೆ ಕೆಲಸ ಇಲ್ಲವಾ ಎಂದು ಮಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಪ್ರಶ್ನಿಸಿದ್ದಾರೆ. ‘ನಾವು ಆಡಳಿತ ನಡೆಸುತ್ತಿದ್ದೇವೆ, ಮಾಡಬೇಕಂದ್ರೆ ಬಹಿರಂಗವಾಗಿ ಮಾಡುತ್ತೇವೆ, ಪೇಸಿಎಂ ಕ್ಯಾಂಪೇನ್ ಮಾಡಿಲ್ವಾ?, ಅದೇನು ರಾತ್ರೋರಾತ್ರಿ ಹಾಕಿದ್ದಾ, ಎದೆ ತಟ್ಟಿ ಮುಂದೆ ಬಂದು ಭ್ರಷ್ಟಾಚಾರ ಮಾಡ್ತಿದ್ದೀರಿ ಎಂದು ಹೇಳಿದ್ದೇವೆ ಎಂದರು.
ದಕ್ಷಿಣ ಕನ್ನಡ, ನ.15: ವಿದ್ಯುತ್ ಕಳ್ಳ ಕುಮಾರಸ್ವಾಮಿ(HD Kumaraswamy) ಎಂದು ಪೋಸ್ಟರ್ ಅಂಟಿಸಿದ ವಿಚಾರ ‘ಪೋಸ್ಟರ್ ಅಂಟಿಸಿದ್ದು ನಾವಲ್ಲ, ನಮಗೇ ಬೇರೆ ಕೆಲಸ ಇಲ್ಲವಾ ಎಂದು ಮಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಪ್ರಶ್ನಿಸಿದ್ದಾರೆ. ‘ನಾವು ಆಡಳಿತ ನಡೆಸುತ್ತಿದ್ದೇವೆ, ಮಾಡಬೇಕಂದ್ರೆ ಬಹಿರಂಗವಾಗಿ ಮಾಡುತ್ತೇವೆ, ಪೇಸಿಎಂ ಕ್ಯಾಂಪೇನ್ ಮಾಡಿಲ್ವಾ?, ಅದೇನು ರಾತ್ರೋರಾತ್ರಿ ಹಾಕಿದ್ದಾ, ಎದೆ ತಟ್ಟಿ ಮುಂದೆ ಬಂದು ಭ್ರಷ್ಟಾಚಾರ ಮಾಡ್ತಿದ್ದೀರಿ ಎಂದು ಹೇಳಿದ್ದೇವೆ. ನಿರಾಧಾರವಾಗಿ ನಾವು ಯಾವುದನ್ನೂ ಮಾಡಿಲ್ಲ. ಹೆಚ್‌ಡಿಕೆ ಮನೆಯಲ್ಲಿ ಏನು ಅಚಾತುರ್ಯ ನಡೆದಿದೆಯೆಂದು ಗೊತ್ತಿಲ್ಲ. ಪ್ರಕರಣ ಸಂಬಂಧ ಕಾನೂನಿನಂತೆ ಕ್ರಮ ತಗೊಳ್ಳಿ ಎಂದು ಹೇಳಿದ್ದಾರೆ. ಆದ್ರೆ, ಹೆಚ್.ಡಿ.ಕುಮಾರಸ್ವಾಮಿ ಅವರು ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದ್ದರು. ಎಲ್ಲರನ್ನೂ ಕತ್ತಲಲ್ಲಿ ಇರಿಸ್ತೀರೆಂದು ಹೆಚ್ಚು ಬೆಳಕು ತಗೊಳೋದು ಎಷ್ಟು ಸರಿ ಎಂದು ಮಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ