ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ವಿಳಂಬ; ಸಚಿವ ಪ್ರಿಯಾಂಕ್ ಖರ್ಗೆ ಆಸ್ತಿ ವಿಚಾರ ಕೆದಕಿದ ಕಿಯೋನಿಕ್ಸ್ ಸಂಘದ ಅಧ್ಯಕ್ಷ ವಸಂತ್ ಬಂಗೇರ

ಕಿಯೋನಿಕ್ಸ್ ಸಂಬಂಧ ಸಚಿವ ಪ್ರಿಯಾಂಕ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಒಂದು ತಿಂಗಳಿನಿಂದ ಮಾಧ್ಯಮದಲ್ಲಿ ಕಿಯೋನಿಕ್ಸ್ ವಿಚಾರ ಬರುತ್ತಿದೆ. ಕಳೆದ ಎಂಟು ತಿಂಗಳಿನಿಂದ ನಮಗೆ ಸಮಸ್ಯೆ ಇದ್ದು, ಇವತ್ತು ಮಿನಿಸ್ಟರ್ ಒಂದು ಮಾತು ಹೇಳಿದ್ರು, ‘ನಾವು ಯಾವುದೇ ಕಾರಣಕ್ಕೂ ರಾಜಕಾರಣಿಗಳು ಅಲ್ಲ, ಅವರಿಗೆ ತಕ್ಕನಾಗೇ ವಿರೋಧ ಪಕ್ಷದ ಮುಖಂಡರು ಮಾತನಾಡಿದ್ದಾರೆ ಎಂದರು.

ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ವಿಳಂಬ; ಸಚಿವ ಪ್ರಿಯಾಂಕ್ ಖರ್ಗೆ ಆಸ್ತಿ ವಿಚಾರ ಕೆದಕಿದ ಕಿಯೋನಿಕ್ಸ್ ಸಂಘದ ಅಧ್ಯಕ್ಷ ವಸಂತ್ ಬಂಗೇರ
ವಸಂತ್​ ಬಂಗೇರ
Follow us
Kiran Surya
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 09, 2023 | 7:21 PM

ಬೆಂಗಳೂರು, ನ.09: ಕಿಯೋನಿಕ್ಸ್ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ವಿಳಂಬ ವಿಚಾರ ‘ ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಅವರ ಆಸ್ತಿ ವಿಚಾರವನ್ನು ಕಿಯೋನಿಕ್ಸ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಸಂತ್ ಬಂಗೇರ (Vasantha Bangera) ಅವರು ಕೆದಕಿದ್ದಾರೆ. ಹೌದು, ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ ಸಚಿವರಿಗೆ ಸದಾಶಿವನಗರದಲ್ಲಿ 7 ರಿಂದ 8 ಬಂಗಲೆ, ಜಮೀನು, ಕಾರು ಎಲ್ಲಿಂದ ಬರುತ್ತೆ. 2013 ರಿಂದ 2018ರವರೆಗೆ ದಾಖಲಾತಿ ತೆಗೆದರೆ ಎಲ್ಲಾ ಬಯಲಿಗೆ ಬರುತ್ತೆ ಎಂದು ವಸಂತ್ ಬಂಗೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿಯೋನಿಕ್ಸ್ ಎಂಡಿ ಸಂಗಪ್ಪ ವಿರುದ್ಧವೂ ವಸಂತ್ ಬಂಗೇರ ಆಕ್ರೋಶ

ಇನ್ನು ಇದೇ ವೇಳೆ ಕಿಯೋನಿಕ್ಸ್  ಎಂಡಿ ಸಂಗಪ್ಪ ವಿರುದ್ದವೂ ಆಕ್ರೋಶ ಹೊರಹಾಕಿದ್ದು, ‘ಅಂಗವಿಕಲರ ಹಣವನ್ನ ಇಟ್ಟುಕೊಂಡು ಆಟ ಆಡಿಸುತ್ತಿದ್ದ. ಇದನ್ನು ಬಯಲಿಗೆಳೆದ ಮೇಲೆ ಸರ್ಕಾರವೇ ಅಮಾನತು ಮಾಡಿತ್ತು. ಇಂಥವನನ್ನು ಕಿಯೋನಿಕ್ಸ್ ಎಂಡಿ ಹುದ್ದೆಯಲ್ಲಿ ಕೂರಿಸಿದ್ದೀರೆಂದು ಕಿಡಿ ಕಾರಿದ್ದಾರೆ. ಹೌದು, ಇನ್ನು 8ನೇ ತಾರೀಕೂ ಸಂಗಪ್ಪರನ್ನ ಕಡ್ಡಾಯ ರಜೆ ಮೇಲೆ ಕಳಿಸಿದ್ದಾರೆ. ನಿನ್ನೆ ಅವರು ರಜೆಯಲ್ಲಿರುವ ಅಧಿಕಾರಿ ಫೈಲ್​ಗಳನ್ನು ತರಿಸಿಕೊಂಡಿದ್ದಾರೆ. ನಿಶ್ಚಿತ್ ಎನ್ನುವ ಅಧಿಕಾರಿಯನ್ನ ಅವರೇ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಈ ಹಿಂದೆ ಸಂಗಪ್ಪ ಕೆಲಸ ಮಾಡಿರುವ ಕಡೆಯಲ್ಲ, ನಿಶ್ಚಿತ್ ಕೆಲಸ ಮಾಡಿದ್ದಾರೆ. ಕೊಳ್ಳೆ ಹೊಡೆಯಲು ಬೇಕಾದ ರೀತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ:ಬೆಂಗಳೂರು: ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರ ಪ್ರತಿಭಟನೆ, ವಿಷ ಸೇವಿಸಲು ಯತ್ನ

ಕಳೆದ 8 ತಿಂಗಳಿನಿಂದ ಆಗುತ್ತಿದೆ ಕಿಯೋನಿಕ್ಸ್ ಗುತ್ತಿಗೆದಾರರಿಗೆ ಸಮಸ್ಯೆ

ಕಿಯೋನಿಕ್ಸ್ ಸಂಬಂಧ ಸಚಿವ ಪ್ರಿಯಾಂಕ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಒಂದು ತಿಂಗಳಿನಿಂದ ಮಾಧ್ಯಮದಲ್ಲಿ ಕಿಯೋನಿಕ್ಸ್ ವಿಚಾರ ಬರುತ್ತಿದೆ. ಕಳೆದ ಎಂಟು ತಿಂಗಳಿನಿಂದ ನಮಗೆ ಸಮಸ್ಯೆ ಇದ್ದು, ಇವತ್ತು ಮಿನಿಸ್ಟರ್ ಒಂದು ಮಾತು ಹೇಳಿದ್ರು, ‘ನಾವು ಯಾವುದೇ ಕಾರಣಕ್ಕೂ ರಾಜಕಾರಣಿಗಳು ಅಲ್ಲ, ಅವರಿಗೆ ತಕ್ಕನಾಗೇ ವಿರೋಧ ಪಕ್ಷದ ಮುಖಂಡರು ಮಾತನಾಡಿದ್ದಾರೆ ಎಂದರು. ಇದರಲ್ಲಿ ನಾವು ರಾಜಕೀಯ ಬೇರಿಸಿಲ್ಲ, ನಾವು ಯಾವುದೇ ಸರ್ಕಾರ ಬಂದರೂ ಸರ್ಕಾರದ ಅಂಗಾಂಗಳು ನಮ್ಮನ್ನ ಆಡಿಸ್ತಾ ಇಲ್ಲ. ನಮ್ಮ ನೋವು ಹೇಳಿಕೊಳ್ಳುತ್ತಾ ಇದ್ದೀವಿ. ನಾವು ನಿಮ್ಮ ಹತ್ರ ಬಂದಾಗ ಬಿಲ್ ಕ್ಲಿಯರ್ ಮಾಡಿ ಎಂದು ಹೇಳಿದ್ದೀರಿ ಎಂದರು.

ನಾವು ಕಿಯೋನಿಕ್ಸ್ ಸಂಸ್ಥೆಯಲ್ಲಿ ಅನ್ನ ತಿಂದಿದ್ದೇವೆ. ನೀವು ಬಂದಾಗ ಅವರದ್ದು ಹುಡುಕುವುದು, ಅವರು ಬಂದಾಗ ನಿಮ್ಮದು ಹುಡುಕುವುದು. ಉತ್ತರ ಕರ್ನಾಟಕದ ‌ತಾಂಡ ಅಭಿವೃದ್ಧಿ ನಿಗಮದಿಂದ ಶುದ್ಧ ನೀರು ಕುಡಿಯುವ ಮಿಷನ್​ನ್ನು 2019 ರಲ್ಲಿ ಹಾಕಿ, 5 ಕೋಟಿ 50 ಲಕ್ಷ ಹಣವನ್ನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಬರೋಬ್ಬರಿ ಒಂದು ಲಕ್ಷ ಹಣ ವ್ಯತ್ಯಾಸ ಇದೆ. ನಮ್ಮನ್ನ ಕಳ್ಳರಂತೆ ಬಿಂಬಿಸಲಾಗುತ್ತಿದೆ. ಪ್ರತಿ ವರ್ಷ ಅಡಿಟ್ ಆಗುತ್ತೆ. ಯಾವುದೇ ಇಲಾಖೆಯಲ್ಲಿ ಹೋದರೂ, ನ್ಯೂನತೆಗಳನ್ನ ಬರೆದು ಬರುತ್ತಾರೆ. ಯಾರೋ ನಾಲ್ಕು ಜನ ಕಳ್ಳರು ಮಾಡಿರಬಹುದು, ಅವರನ್ನ ಬ್ಲಾಕ್ ಲಿಸ್ಟ್​ಗೆ ಹಾಕಿ, ಅವರ ಮೇಲೆ ನೀವು ಕ್ರಮ‌ಕೈಗೊಳ್ಳಿ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Thu, 9 November 23