ಬೆಂಗಳೂರು: ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರ ಪ್ರತಿಭಟನೆ, ವಿಷ ಸೇವಿಸಲು ಯತ್ನ
ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರು ಶಾಂತಿನಗರದ ಟಿಟಿಎಂಸಿ 2ನೇ ಮಹಡಿಯಲ್ಲಿರುವ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಸಂಗಪ್ಪ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಾಕಿ ಉಳಿಸಿಕೊಂಡಿರುವ 150 ಕೋಟಿ ಹಣವನ್ನು ಕೂಡಲೇ ಬಿಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಪ್ರತಿಭಟನಾ ನಿರತ ಗುತ್ತಿಗೆದಾರರೊಬ್ಬರು ವಿಷ ಸೇವಿಸಲು ಯತ್ನಿಸಿದರು.
ಬೆಂಗಳೂರು, ನ.4: ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರು ಶಾಂತಿನಗರದ ಟಿಟಿಎಂಸಿ 2ನೇ ಮಹಡಿಯಲ್ಲಿರುವ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಸಂಗಪ್ಪ ಕಚೇರಿ ಮುಂದೆ ಪ್ರತಿಭಟನೆ (Protest) ನಡೆಸಿದರು. ಬಾಕಿ ಉಳಿಸಿಕೊಂಡಿರುವ 150 ಕೋಟಿ ಹಣವನ್ನು ಕೂಡಲೇ ಬಿಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಪ್ರತಿಭಟನಾ ನಿರತ ಗುತ್ತಿಗೆದಾರರೊಬ್ಬರು ವಿಷ ಸೇವಿಸಲು ಯತ್ನಿಸಿದರು.
ಕಿಯೋನಿಕ್ಸ್ ಸಂಸ್ಥೆಯು ಎಂಟು ತಿಂಗಳಿಂದ ಗುತ್ತಿಗೆದಾರರ ಹಣವನ್ನು ಬಾಕಿ (150 ಕೋಟಿ ರೂ.) ಇರಿಸಿದೆ. ಇದರಿಂದಾಗಿ ಕಿಯೋನಿಕ್ಸ್ ನಿರ್ದೇಶಕರ ವಿರುದ್ಧ ಸಿಡಿದೆದ್ದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಗುತ್ತಿಗೆದಾರರು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬಾಕಿ ಹಣ ಬಿಡುಗಡೆ ಮಾಡಬೇಕು ಮತ್ತು ಟೆಂಡರ್ ಮುಂದುವರಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಬಾಗಲಕೋಟೆ: ವೇತನ ಕೊಡದ ಟೋಲ್ ನಾಕಾ, ಲೇಬರ್ ಗುತ್ತಿಗೆದಾರ ಆತ್ಮಹತ್ಯೆ
ಅಧಿಕಾರಿಗಳ ಜೊತೆ ಸಚಿವ ಪ್ರಿಯಾಂಕ್ ಖರ್ಗೆ ಸಭೆ
ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಳಂಬ ಹಿನ್ನೆಲೆ ಸಚಿವ ಪ್ರಿಯಾಂಕಾ ಖರ್ಗೆ ಅವರು ಅಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಕಿಯೋನಿಕ್ಸ್ ಎಂಡಿ ಸಂಗಪ್ಪ ಭಾಗಿಯಾಗಿದ್ದಾರೆ. ಪ್ರತಿಭಟನಾಕಾರರಿಗೆ ಸಭೆ ಮುಗಿಸಿ ಬರುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಗುತ್ತಿಗೆದಾರರು ಗೋ ಬ್ಯಾಕ್ ಸಂಗಪ್ಪ, ಗೋ ಬ್ಯಾಕ್ ಸಂಗಪ್ಪ ಎಂದು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಷ ಸೇವಿಸಲು ಯತ್ನ ಗುತ್ತಿಗೆದಾರ
ಬಾಕಿ ಬಿಲ್ ಬಿಡುಗಡೆಗೆ ಒತ್ತಾಯಿಸಿ ಗುತ್ತಿಗೆದಾರರು ವಿಷತ ಬಾಟಲ್ ಸಹಿತ ಸಂಗಪ್ಪ ಕಚೇರಿ ಮುಂದೆ ಆಗಮಿಸಿದ್ದಾರೆ. ನಮ್ಮ ಬೇಡಿಕೆ ಈಡೇರದೇ ಹೋದರೆ ಎಂಡಿ ಸಂಗಪ್ಪನ ಮುಂದೆ ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿದ ಸೈಯದ್, ವಿಷ ಕುಡಿಯಲು ಯತ್ನಿಸಿದರು ಕೂಡಲೇ ಎಚ್ಚೆತ್ತ ಇತರೆ ಗುತ್ತಿಗೆದಾರರು ತಡೆದರು. ಸಂಗಪ್ಪ ಬರುವವರೆಗೆ ಯಾವುದೇ ನಿರ್ಣಯ ಕೈಗೊಳ್ಳುವುದು ಬೇಡ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ