ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆ ಸನ್ನಿಧಿಯಲ್ಲಿ ಜೆಡಿಎಸ್ ಶಾಸಕ ಪ್ರತಿಭಟನೆ, ಕಾರಣವೇನು?
ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ಹಾಸನ ಜಿಲ್ಲಾಡಳಿತದ ವಿರುದ್ಧ ಸಿಡಿದೆದ್ದಿದ್ದಾರೆ. ಹಾಸನಾಂಬೆ ಉತ್ಸವದಲ್ಲಿ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಡಿಸಿಗೆ ಪ್ರಶ್ನೆ ಗಳ ಸುರಿಮಳೆಗೈದಿದ್ದಾರೆ.
ಹಾಸನ (ನ.4): ಹಾಸನಾಂಬೆಯ (Hassanamba) ಸಾರ್ವಜನಿಕ ದರ್ಶನೊತ್ಸವ ಇಂದಿನಿಂದ ಆರಂಭವಾಗಿದೆ. ನಿನ್ನೆ(ನವೆಂಬರ್ 03) ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಭಕ್ತರು ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಮೊದಲ ದಿನವೇ ಮಾಜಿ ಪ್ರದಾನಿ ಹೆಚ್ ಡಿ ದೇವೇಗೌಡ ( HD Devegowda) ಅವರು ಪತ್ನಿ ಚನ್ನಮ್ಮ ಹಾಗೂ ಪುತ್ರಿಯರ ಜೊತೆ ಶುಕ್ರವಾರ ಹಾಸನಾಂಬೆ ದರ್ಶನ ಪಡೆದರು. ಇನ್ನು ಜಿಲ್ಲಾಡಳಿತದ ವ್ಯವಸ್ಥೆಗೆ ದೇವೇಗೌಡರು ಫಿದಾ ಆಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹಾಗು ಜಿಲ್ಲಾಡಳಿತದ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ, ಇಂದು ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ಜಿಲ್ಲಾಡಳಿತದ ವಿರುದ್ಧ ಸಿಡಿದೆದ್ದಿದ್ದಾರೆ. ಹಾಸನಾಂಬೆ ಉತ್ಸವದಲ್ಲಿ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಡಿಸಿಗೆ ಪ್ರಶ್ನೆ ಗಳ ಸುರಿಮಳೆಗೈದಿದ್ದಾರೆ.
ದೇಗುಲಕ್ಕೆ ಕಳಶ ಪ್ರತಿಷ್ಠಾಪನೆ ಮಾಡಲಾಗಿದೆ. ಸ್ಥಳೀಯ ಶಾಸಕನಾದ ನನ್ನನ್ನ ಯಾಕೆ ಕರೆದಿಲ್ಲ ನಾನೇನು ದನಾ ಕಾಯೋಕೆ ಇದೀನಾ ಎಂದು ಡಿಸಿಗೆ ಹಾಸನಾಂಬೆ ಆವರಣದಲ್ಲೇ ಜಿಲ್ಲಾಧಿಕಾರಿಗೆ ಕ್ಲಾಸ್ ತೆಗೆದುಕೊಂಡರು. ಅಲ್ಲದೇ ಹೆಲಿಟೂರಿಸಂಗೆ ಚಾಲನೆ ನೀಡಿದ್ದೀರಿ. ಅದಕ್ಕೂ ನಮ್ಮನ್ನ ಕಡೆಗಣಿಸಿದ್ದೀರಿ. ನೀವು ನಿಮ್ಮ ಪತಿ ಕೂತುಕೊಂಡು ಹೇಗೆ ಹೋಮ ಮಾಡಿದ್ರಿ ಎಂದು ಪ್ರಶ್ನಿಸಿದರು.