ಕುಳಿತುಕೊಳ್ಳಲು ಆಸನವಿಲ್ಲ: ನಿಂತುಕೊಂಡೆ ಇಡೀ ಪಂದ್ಯ ವೀಕ್ಷಿಸಿದ ನೇಪಾಳ ಫ್ಯಾನ್ಸ್
Nepal Cricket Fans: ನೇಪಾಳ ತಂಡ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸುವ ಮೂಲಕ ಬರೋಬ್ಬರಿ 10 ವರ್ಷಗಳ ಬಳಿಕ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯ ವೀಕ್ಷಣೆಗೆ ಮೈದಾನದಲ್ಲಿ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಹಾಜರಿದ್ದರು. ಆದರೆ, ಇವರಿಗೆ ಸರಿಯಾಗಿ ಪಂದ್ಯ ವೀಕ್ಷಣೆ ಮಾಡಲು ಆಸನದ ವ್ಯವಸ್ಥೆ ಇರಲಿಲ್ಲ.
ಮುಂದಿನ ವರ್ಷ 2024 ರಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆಯೋಜಿಸಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ನೇಪಾಳ ತಂಡ (Nepal Cricket Team) ಅರ್ಹತೆ ಪಡೆದುಕೊಂಡಿದೆ. ಏಷ್ಯಾ ಕ್ವಾಲಿಫೈಯರ್‌ನ ಎರಡನೇ ಸೆಮಿಫೈನಲ್‌ನಲ್ಲಿ ನೇಪಾಳ ತಂಡ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸುವ ಮೂಲಕ ಬರೋಬ್ಬರಿ 10 ವರ್ಷಗಳ ಬಳಿಕ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡ ಸಾಧನೆ ಮಾಡಿದೆ. ಯುನೈಟೆಡ್ ಅರಬ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 134 ರನ್ ಕಲೆಹಾಕಿತು. ನೇಪಾಳ ಇನ್ನು 17 ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತು. ಈ ಪಂದ್ಯ ವೀಕ್ಷಣೆಗೆ ಮೈದಾನದಲ್ಲಿ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಹಾಜರಿದ್ದರು. ಆದರೆ, ಇವರಿಗೆ ಸರಿಯಾಗಿ ಪಂದ್ಯ ವೀಕ್ಷಣೆ ಮಾಡಲು ಆಸನದ ವ್ಯವಸ್ಥೆ ಇರಲಿಲ್ಲ. ಹೀಗಿದ್ದರೂ ನೇಪಾಳ ಫ್ಯಾನ್ಸ್ ನಿಂತುಕೊಂಡೆ ಪಂದ್ಯವನ್ನು ವೀಕ್ಷಿಸಿ ತಮ್ಮ ದೇಶದ ಗೆಲುವನ್ನು ಸಂಭ್ರಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ