T20 World Cup 2024: 2024 ರ ಟಿ20 ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಒಮಾನ್ ಹಾಗೂ ನೇಪಾಳ
T20 World Cup 2024: ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯ ಜಂಟಿ ಆತಿಥ್ಯದಲ್ಲಿ 2024ರಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ನೇಪಾಳ ಹಾಗೂ ಒಮಾನ್ ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ. ಇಲ್ಲಿ ನೇಪಾಳ ತಂಡ ಬರೋಬ್ಬರಿ 10 ವರ್ಷಗಳ ಬಳಿಕ ಟಿ20 ವಿಶ್ವಕಪ್‌ಗೆ ಅರ್ಹತೆ ಸಂಪಾಧಿಸಿದ್ದರೆ, ಒಮಾನ್ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುವ ಅವಕಾಶ ಪಡೆದು ಇತಿಹಾಸ ನಿರ್ಮಿಸಿದೆ.
ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯ (West Indies and USA) ಜಂಟಿ ಆತಿಥ್ಯದಲ್ಲಿ 2024ರಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ (T20 World Cup 2024) ನೇಪಾಳ ಹಾಗೂ ಒಮಾನ್ (Nepal and Oman) ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ. ಇಲ್ಲಿ ನೇಪಾಳ ತಂಡ ಬರೋಬ್ಬರಿ 10 ವರ್ಷಗಳ ಬಳಿಕ ಟಿ20 ವಿಶ್ವಕಪ್‌ಗೆ ಅರ್ಹತೆ ಸಂಪಾಧಿಸಿದ್ದರೆ, ಒಮಾನ್ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುವ ಅವಕಾಶ ಪಡೆದು ಇತಿಹಾಸ ನಿರ್ಮಿಸಿದೆ. ಇದೀಗ ಈ ಎರಡು ತಂಡಗಳ ಆಗಮನದೊಂದಿಗೆ ಇದುವರೆಗೆ 18 ತಂಡಗಳು ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಂತ್ತಾಗಿದೆ. ಇನ್ನುಳಿದ ಎರಡು ತಂಡಗಳನ್ನು ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಆಫ್ರಿಕಾ ಕ್ವಾಲಿಫೈಯರ್‌ನಲ್ಲಿ ನಿರ್ಧರಿಸಲಾಗುತ್ತದೆ.
ಒಮಾನ್ಗೆ ಚೊಚ್ಚಲ ಅವಕಾಶ
ಏಷ್ಯಾ ಕ್ವಾಲಿಫೈಯರ್‌ನ ಮೊದಲ ಸೆಮಿಫೈನಲ್‌ನಲ್ಲಿ ಬಹ್ರೇನ್ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಒಮಾನ್ ಟಿ20 ವಿಶ್ವಕಪ್‌ಗೆ ತನ್ನ ಚೊಚ್ಚಲ ಟಿಕೆಟ್ ಅನ್ನು ಖಚಿತಪಡಿಸಿಕೊಂಡಿದೆ. ಒಮಾನ್ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವುದು ಇದೇ ಮೊದಲು. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಹ್ರೇನ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 106 ರನ್ ಕಲೆ ಹಾಕಿತು. ಒಮಾನ್ ಪರ ಅಕಿಬ್ ಇಲ್ಯಾಸ್ ನಾಲ್ಕು ಓವರ್‌ಗಳಲ್ಲಿ ಕೇವಲ 10 ರನ್ ನೀಡಿ 4 ವಿಕೆಟ್ ಪಡೆದರು. ಇದಲ್ಲದೇ ಶಕೀಲ್ ಅಹ್ಮದ್ 2 ವಿಕೆಟ್ ಪಡೆದರು. ಬಿಲಾಲ್ ಖಾನ್, ಫೈಜ್ ಭಟ್ ಮತ್ತು ಜೀಶಾನ್ ತಲಾ ಒಂದು ವಿಕೆಟ್ ಪಡೆದರು.
ಬಹ್ರೇನ್ ನೀಡಿದ 107 ರನ್‌ಗಳ ಗುರಿ ಬೆನ್ನತ್ತಿದ ಒಮಾನ್ ಸುಲಭವಾಗಿ ಜಯ ಸಾಧಿಸಿತು. ಗುರಿಯನ್ನು ಒಮಾನ್ 14.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಪೂರ್ಣಗೊಳಿಸಿತು. ಇನ್ನು 34 ಎಸೆತಗಳು ಬಾಕಿ ಇರುವಂತೆಯೇ ಕಶ್ಯಪ್ ಪ್ರಜಾಪತಿ ಹಾಗೂ ಪ್ರತೀಕ್ರಾ ತಂಡವನ್ನು ಗೆಲುವಿನ ದಡ ಸೇರಿಸಿದರು.
ಹತ್ತು ವರ್ಷಗಳ ನಂತರ ಅವಕಾಶ
ಓಮನ್ ಜೊತೆಗೆ ನೇಪಾಳ ತಂಡ ಕೂಡ ಟಿ20 ವಿಶ್ವಕಪ್‌ಗೆ ತನ್ನ ಟಿಕೆಟ್ ಖಚಿತಪಡಿಸಿಕೊಂಡಿದೆ. ಏಷ್ಯಾ ಕ್ವಾಲಿಫೈಯರ್‌ನ ಎರಡನೇ ಸೆಮಿಫೈನಲ್‌ನಲ್ಲಿ ನೇಪಾಳ ಎಂಟು ವಿಕೆಟ್‌ಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 134 ರನ್ ಕಲೆಹಾಕಿತು. ನೇಪಾಳ ಪರ ಕುಶಾಲ್ ಮಲ್ಲ 3 ವಿಕೆಟ್, ಸಂದೀಪ್ ಲಮಿಶಾನೆ 2 ವಿಕೆಟ್ ಪಡೆದರು. 135 ರನ್‌ಗಳ ಗುರಿ ಬೆನ್ನತ್ತಿದ ನೇಪಾಳ ಇನ್ನು 17 ಎಸೆತಗಳು ಬಾಕಿ ಇರುವಾಗಲೇ ಜಯ ಸಾಧಿಸಿತು. ತಂಡದ ಪರ ಆಸಿಫ್ ಶೇಖ್ 51 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಇದಲ್ಲದೇ 20 ಎಸೆತಗಳಲ್ಲಿ ಅಜೇಯ 34 ರನ್‌ಗಳ ಇನ್ನಿಂಗ್ಸ್ ಆಡಿದ ನೇಪಾಳ ನಾಯಕ ರೋಹಿತ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.
ಇದಕ್ಕೂ ಮುನ್ನ ನೇಪಾಳ ಕೊನೆಯ ಬಾರಿಗೆ 2014ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಆಡಿತ್ತು. ಇದೀಗ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಓಮನ್ ಮತ್ತು ನೇಪಾಳ ತಂಡಗಳು ನವೆಂಬರ್ 5 ರಂದು ಏಷ್ಯಾ ಕ್ವಾಲಿಫೈಯರ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ