AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್- ಕಿವೀಸ್​ ವಿಶ್ವಕಪ್ ಫೈಟ್; ಬೆಂಗಳೂರು ಪಿಚ್​ ಯಾರಿಗೆ ಸಹಕಾರಿ? ಪಂದ್ಯಕ್ಕೆ ಮಳೆಯ ಆತಂಕ..!

NZ vs PAK, World Cup 2023: ಈ ವಿಶ್ವಕಪ್​ನಲ್ಲಿ ಸತತ ಗೆಲುವುಗಳ ಮೂಲಕ ಉತ್ತಮ ಆರಂಭ ಪಡೆದುಕೊಂಡಿದ್ದ ನ್ಯೂಜಿಲೆಂಡ್ ಸೋಲಿನ ಸುಳಿಗೆ ಸಿಲುಕಿದೆ. ಇತ್ತ ಪಾಕಿಸ್ತಾನ ತಂಡ ಕೂಡ 4 ಪಂದ್ಯಗಳಲ್ಲಿ ಸೋತು ಸೆಮಿಫೈನಲ್‌ನ ರೇಸ್‌ನಿಂದ ಹೊರಗುಳಿಯುವ ಆತಂಕದಲ್ಲಿದೆ. ನ್ಯೂಜಿಲೆಂಡ್ ತಂಡ ಆಡಿರುವ 7 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದ್ದರೆ, ಪಾಕಿಸ್ತಾನ ತಂಡ 7 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ನಾಳಿನ ಪಂದ್ಯ ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯದಂತ್ತಾಗಿದೆ.

ಪಾಕ್- ಕಿವೀಸ್​ ವಿಶ್ವಕಪ್ ಫೈಟ್; ಬೆಂಗಳೂರು ಪಿಚ್​ ಯಾರಿಗೆ ಸಹಕಾರಿ? ಪಂದ್ಯಕ್ಕೆ ಮಳೆಯ ಆತಂಕ..!
ನ್ಯೂಜಿಲೆಂಡ್- ಪಾಕಿಸ್ತಾನ
ಪೃಥ್ವಿಶಂಕರ
|

Updated on: Nov 03, 2023 | 8:32 PM

Share

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium, Bengaluru) ನಾಳೆ ಅಂದರೆ, ನವೆಂಬರ್ 4 ರ ಶನಿವಾರದಂದು ವಿಶ್ವಕಪ್ 2023 ರ (ICC World Cup 2023) 35 ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ (Pakistan vs New Zealand) ತಂಡಗಳು ಮುಖಾಮುಖಿಯಾಗಲಿವೆ. ಈ ವಿಶ್ವಕಪ್​ನಲ್ಲಿ ಸತತ ಗೆಲುವುಗಳ ಮೂಲಕ ಉತ್ತಮ ಆರಂಭ ಪಡೆದುಕೊಂಡಿದ್ದ ನ್ಯೂಜಿಲೆಂಡ್ ಸೋಲಿನ ಸುಳಿಗೆ ಸಿಲುಕಿದೆ. ಇತ್ತ ಪಾಕಿಸ್ತಾನ ತಂಡ ಕೂಡ 4 ಪಂದ್ಯಗಳಲ್ಲಿ ಸೋತು ಸೆಮಿಫೈನಲ್‌ನ ರೇಸ್‌ನಿಂದ ಹೊರಗುಳಿಯುವ ಆತಂಕದಲ್ಲಿದೆ. ನ್ಯೂಜಿಲೆಂಡ್ ತಂಡ ಆಡಿರುವ 7 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದ್ದರೆ, ಪಾಕಿಸ್ತಾನ ತಂಡ 7 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ನಾಳಿನ ಪಂದ್ಯ ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯದಂತ್ತಾಗಿದೆ.

ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದ ನ್ಯೂಜಿಲೆಂಡ್, ಇಂಗ್ಲೆಂಡ್, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿತ್ತು. ಆದರೆ ಇದರ ನಂತರ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಸೋಲು ಸೇರಿದಂತೆ ಸತತ ಮೂರು ಸೋಲುಗಳನ್ನು ಅನುಭವಿಸಿದೆ.

ಪಾಕಿಸ್ತಾನ ತಂಡ ಕೂಡ ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾವನ್ನು ಸೋಲಿಸುವ ಮೂಲಕ ಉತ್ತಮ ಆರಂಭವನ್ನು ಮಾಡಿತು. ಆದರೆ ಇದರ ನಂತರ ಅದು ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಎದುರು ಸತತ ನಾಲ್ಕು ಸೋಲುಗಳನ್ನು ಅನುಭವಿಸಿತು. ಆದರೂ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಪಾಕ್ ತಂಡ ತನ್ನ ಮೂರನೇ ಜಯವನ್ನು ದಾಖಲಿಸಿದೆ.

ಬೆಂಗಳೂರಿನಲ್ಲಿ ಪಾಕ್- ಕಿವೀಸ್ ಮುಖಾಮುಖಿ! ಗೆದ್ದವರಿಗೆ ಸೆಮಿಸ್ ಕನಸು ಜೀವಂತ; ಪಂದ್ಯ ಎಷ್ಟು ಗಂಟೆಗೆ ಆರಂಭ?

ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ?

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ವಿಶ್ವದ ಅತ್ಯುತ್ತಮ ಬ್ಯಾಟಿಂಗ್ ವಿಕೆಟ್‌ಗಳಲ್ಲಿ ಒಂದಾಗಿದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ರನ್ ಗಳಿಸುತ್ತಾರೆ. ಕ್ರಿಸ್ ಗೇಲ್ ಈ ಮೈದಾನದಲ್ಲಿ ಟಿ20ಯಲ್ಲಿ 175 ರನ್ ಗಳಿಸಿದ್ದರು. ರೋಹಿತ್ ಶರ್ಮಾ ಕೂಡ ಇಲ್ಲಿ ಚೊಚ್ಚಲ ದ್ವಿಶತಕ ದಾಖಲಿಸಿದ್ದರು. ಇಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 672 ರನ್​ಗಳು ದಾಖಲಾಗಿದ್ದವು. ಹೀಗಾಗಿ ನಾಳಿನ ಪಂದ್ಯ ಕೂಡ ಒಂದು ಬಿಗ್ ಸ್ಕೋರ್ ಪಂದ್ಯವಾಗುವ ಸಾಧ್ಯತೆಗಳಿವೆ.

ಹವಾಮಾನ ವರದಿ

ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ ಇಬ್ಬನಿ ಯಾವುದೇ ಪಾತ್ರವನ್ನು ಬೀರುವುದಿಲ್ಲ. ಆದರೆ, ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಶನಿವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಶೇ.90ಕ್ಕಿಂತ ಹೆಚ್ಚಿದೆ. ಆದರೆ, ಇಲ್ಲಿನ ಒಳಚರಂಡಿ ವ್ಯವಸ್ಥೆಯೇ ಅತ್ಯುತ್ತಮ ಎಂದು ಪರಿಗಣಿಸಲಾಗಿದ್ದು, ಮಳೆ ನಿಂತ ಕೂಡಲೇ ಪಂದ್ಯ ಮತ್ತೆ ಆರಂಭವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಉಭಯ ತಂಡಗಳು

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ವಿಲ್ ಯಂಗ್ , ಕೈಲ್ ಜಾಮಿಸನ್.

ಪಾಕಿಸ್ತಾನ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮುಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಆಗಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಮೊಹಮ್ಮದ್ ಅಫ್ರಿದಿ, ಮೊಹಮ್ಮದ್ ವಾಸಿಂ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ