Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA, ICC World Cup: ಭಾರತ-ಆಫ್ರಿಕಾ ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗುತ್ತಿದೆ ಈಡನ್ ಗಾರ್ಡನ್ಸ್ ಸ್ಟೇಡಿಯಂ: ವಿಡಿಯೋ

IND vs SA, ICC World Cup: ಭಾರತ-ಆಫ್ರಿಕಾ ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗುತ್ತಿದೆ ಈಡನ್ ಗಾರ್ಡನ್ಸ್ ಸ್ಟೇಡಿಯಂ: ವಿಡಿಯೋ

Vinay Bhat
|

Updated on: Nov 04, 2023 | 11:47 AM

Eden Gardens Stadium, India vs South Africa: ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭಾನುವಾರ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಇದಕ್ಕಾಗಿ ಈಡನ್ ಗಾರ್ಡನ್ಸ್ ಸ್ಟೇಡಿಯಂ ಭರ್ಜರಿ ಆಗಿ ತಯಾರಾಗುತ್ತಿದೆ. ಸ್ಟೇಡಿಯಂನ ಹೊರಗಡೆ ಭಾರತ ಕ್ರಿಕೆಟ್ ಇತಿಹಾಸದಲ್ಲಿ ನಡೆದ ಮರೆಯಲಾಗದ ಕ್ಷಣ ಬ್ಯಾನರ್ ಮೂಲಕ ರಾರಾಜಿಸುತ್ತಿದೆ.

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭಾನುವಾರ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತೆಂಬ ಬವುಮಾ ಅವರ ದಕ್ಷಿಣ ಆಫ್ರಿಕಾವನ್ನು (India vs South Africa) ಎದುರಿಸಲಿದೆ. ಈ ಮಹತ್ವದ ಪಂದ್ಯ ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಉಭಯ ತಂಡಗಳ ಆಟಗಾರರು ಕೋಲ್ಕತ್ತಾ ಬಂದಿದ್ದು, ಇಂದು ಅಭ್ಯಾಸ ನಡೆಸಲಿದ್ದಾರೆ. ಅಲ್ಲದೆ ನ. 5 ರಂದು ವಿರಾಟ್ ಕೊಹ್ಲಿ ಹುಟ್ಟುಹಬ್ಬ ಆಗಿರುವ ಕಾರಣ ದೊಡ್ಡ ಸಂಭ್ರಮಾಚರಣೆ ನಿರೀಕ್ಷಿಸಬಹುದು. ಇದಕ್ಕಾಗಿ ಈಡನ್ ಗಾರ್ಡನ್ಸ್ ಸ್ಟೇಡಿಯಂ ಭರ್ಜರಿ ಆಗಿ ತಯಾರಾಗುತ್ತಿದೆ. ಸ್ಟೇಡಿಯಂನ ಹೊರಗಡೆ ಭಾರತ ಕ್ರಿಕೆಟ್ ಇತಿಹಾಸದಲ್ಲಿ ನಡೆದ ಮರೆಯಲಾಗದ ಕ್ಷಣ ಬ್ಯಾನರ್ ಮೂಲಕ ರಾರಾಜಿಸುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ