AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳಪೆ ಆಟವಾಡಿ ಕೂಲ್​ ಆಗಿರುವ ತನಿಷಾ ಕುಪ್ಪಂಡ; ಇದನ್ನೆಲ್ಲ ನೋಡಿ ಗರಂ ಆದ ವಿನಯ್​ ಗೌಡ

ಕಳಪೆ ಆಟವಾಡಿ ಕೂಲ್​ ಆಗಿರುವ ತನಿಷಾ ಕುಪ್ಪಂಡ; ಇದನ್ನೆಲ್ಲ ನೋಡಿ ಗರಂ ಆದ ವಿನಯ್​ ಗೌಡ

ಮದನ್​ ಕುಮಾರ್​
|

Updated on: Nov 15, 2023 | 6:57 PM

Share

ತನಿಷಾ ಕುಪ್ಪಂಡ ಅವರು ಆಟದಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಟಾಸ್ಕ್​ನ ಗಂಭೀರತೆಯನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ವಿನಯ್​ ಗೌಡ ಗರಂ ಆಗಿದ್ದಾರೆ. ಇಬ್ಬರ ನಡುವೆ ಕ್ಲ್ಯಾಶ್​ ಏರ್ಪಡುವ ಸಾಧ್ಯತೆ ಇದೆ. ಈ ಮೊದಲು ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ ಅವರು ಕಿತ್ತಾಡಿಕೊಂಡಿದ್ದರು.

ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ 6ನೇ ವಾರದಲ್ಲಿ ಆಟ ಆಡುತ್ತಿರುವ ಸ್ಪರ್ಧಿಗಳಿಗೆ ಕುಟುಂಬದವರ ನೆನಪು ಕಾಡುತ್ತಿದೆ. ಈಗ ಎಲ್ಲರ ಮನೆಯಿಂದಲೂ ಪತ್ರಗಳು ಬಂದಿವೆ. ಆದರೆ ಆ ಲೆಟರ್​ ಪಡೆದುಕೊಳ್ಳಲು ಟಾಸ್ಕ್​ ಗೆಲ್ಲಬೇಕು. ತನಿಷಾ ಕುಪ್ಪಂಡ (Tanisha Kuppanda) ಅವರು ಆಟದಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಅವರಿಂದಾಗಿ ಇತರರಿಗೆ ಪತ್ರ ಮಿಸ್​ ಆಗುವ ಸಾಧ್ಯತೆ ಇದೆ. ಟಾಸ್ಕ್​ನ ಗಂಭೀರತೆಯನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ವಿನಯ್​ ಗೌಡ (Vinay Gowda) ಗರಂ ಆಗಿದ್ದಾರೆ. ಈ ಸಂಚಿಕೆ ನವೆಂಬರ್​ 15ರಂದು ರಾತ್ರಿ 9.30ಕ್ಕೆ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ದಿನ 24 ಗಂಟೆಯೂ ಲೈವ್​ ನೋಡಲು ಅವಕಾಶ ಇದೆ. ತನಿಷಾ ಕುಪ್ಪಂಡ ಅವರು ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರ ಆಟಕ್ಕೆ ಇದು ಕೂಡ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More