ಬಿಗ್​ ಬಾಸ್​ನಲ್ಲಿ ಜೋಡಿ ಆಗಿದ್ದೂ ಇವರೇ, ಕೇಸ್​ ಹಾಕಿಸಿಕೊಂಡಿದ್ದೂ ಇವರೇ: ಎಂಥ ಕಾಕತಾಳೀಯ

ಬಿಗ್​ ಬಾಸ್​ ಮನೆಯಲ್ಲಿ ಕೆಲವರ ನಡುವೆ ಬಾಂಧವ್ಯ ಬೆಳೆಯುತ್ತದೆ. ಈ ಬಾರಿ ವರ್ತೂರು ಸಂತೋಷ್​ ಮತ್ತು ತನಿಷಾ ಕುಪ್ಪಂಡ ನಡುವೆ ಅಂತಹ ಒಂದು ಸ್ನೇಹ ಬೆಳೆದಿದೆ. ಅವರಿಬ್ಬರ ನಡುವೆ ದಿನದಿಂದ ದಿನಕ್ಕೆ ಆಪ್ತತೆ ಹೆಚ್ಚುತ್ತಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಕಾಕತಾಳೀಯ ಎಂದರೆ ಇವರಿಬ್ಬರು ವಿವಾದ ಮಾಡಿಕೊಂಡಿದ್ದಾರೆ.

ಬಿಗ್​ ಬಾಸ್​ನಲ್ಲಿ ಜೋಡಿ ಆಗಿದ್ದೂ ಇವರೇ, ಕೇಸ್​ ಹಾಕಿಸಿಕೊಂಡಿದ್ದೂ ಇವರೇ: ಎಂಥ ಕಾಕತಾಳೀಯ
ವರ್ತೂರು ಸಂತೋಷ್​, ತನಿಷಾ ಕುಪ್ಪಂಡ
Follow us
ಮದನ್​ ಕುಮಾರ್​
|

Updated on: Nov 15, 2023 | 6:23 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ರಿಯಾಲಿಟಿ ಶೋನಲ್ಲಿ ಕೆಲವು ಸ್ಪರ್ಧಿಗಳು ಸಖತ್​ ಸುದ್ದಿ ಆಗುತ್ತಿದ್ದಾರೆ. ಆಟದ ಕಾರಣಕ್ಕೆ ಸುದ್ದಿಯಾದರೆ ಪರವಾಗಿಲ್ಲ. ಆದರೆ ಹೊರ ಜಗತ್ತಿನ ವಿಚಾರಕ್ಕೆ ಕಿರಿಕ್​ ಮಾಡಿಕೊಂಡು ಸುದ್ದಿಯಾದರೆ ಸಂಕಷ್ಟ ಎದುರಾಗುತ್ತದೆ. ಸದ್ಯ ವರ್ತೂರು ಸಂತೋಷ್​ ಮತ್ತು ತನಿಷಾ ಕುಪ್ಪಂಡ (Tanisha Kuppanda) ಅವರು ಈ ರೀತಿ ಸುದ್ದಿ ಆಗಿದ್ದಾರೆ. ಕಾಕತಾಳೀಯ ಏನಂದರೆ, ಇವರಿಬ್ಬರು ಬಿಗ್​ ಬಾಸ್​ ಮನೆಯೊಳಗೆ ಜೋಡಿಯಾಗಿದ್ದಾರೆ. ದೊಡ್ಮನೆಯ ಹೊರಗೆ ಇವರ ಹೆಸರುಗಳು ವಿವಾದಕ್ಕೆ ಸಿಲುಕಿವೆ. ಜಾತಿ ನಿಂದನೆ ಮಾಡಿದ ಆರೋಪದಲ್ಲಿ ತನಿಷಾ ಕುಪ್ಪಂಡ ಅವರ ಮೇಲೆ ದೂರು ದಾಖಲಾಗಿದೆ. ಹುಲಿ ಉಗುರು ಹೊಂದಿದ್ದ ಆರೋಪದಲ್ಲಿ ವರ್ತೂರು ಸಂತೋಷ್ (Varthur Santhosh)​ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಕೆಲವರ ನಡುವೆ ಬಾಂಧವ್ಯ ಬೆಳೆಯುತ್ತದೆ. ಈ ಬಾರಿ ವರ್ತೂರು ಸಂತೋಷ್​ ಮತ್ತು ತನಿಷಾ ಕುಪ್ಪಂಡ ನಡುವೆ ಅಂತಹ ಒಂದು ಸ್ನೇಹ ಬೆಳೆದಿದೆ. ಕಾಕತಾಳೀಯ ಎಂದರೆ ಇವರಿಬ್ಬರು ವಿವಾದ ಮಾಡಿಕೊಂಡಿದ್ದಾರೆ. ಇಬ್ಬರಿಗೂ ಕಾನೂನಿನ ಸಂಕಷ್ಟ ಎದುರಾಗಿದೆ. ವರ್ತೂರು ಸಂತೋಷ್​ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಿಗ್​ ಬಾಸ್​ ಮನೆಗೆ ಮರುಪ್ರವೇಶ ಪಡೆದಿದ್ದರೆ, ತನಿಷಾ ಕುಪ್ಪಂಡ ಅವರು ಅರೆಸ್ಟ್​ ಆಗುವ ಸಾಧ್ಯತೆ ಇದೆ. ಯಾವ ಕ್ಷಣದಲ್ಲಾದರೂ ಇವರಿಬ್ಬರು ಬಿಗ್​ ಬಾಸ್​ ಮನೆಯಿಂದ ಹೊರಗೆ ಬರಬೇಕಾಗಬಹುದು.

ಇದನ್ನೂ ಓದಿ: ಜಾತಿ ನಿಂದನೆ ಮಾಡಿದ ಬಿಗ್​ ಬಾಸ್​ ಸ್ಪರ್ಧಿ ತನಿಷಾಗೆ ಕಾದಿದೆ ಸಂಕಷ್ಟ

ಒಮ್ಮೆ ಜೈಲಿಗೆ ಹೋಗಿ ಮತ್ತೊಮ್ಮೆ ಬಿಗ್​ ಬಾಸ್​ ಮನೆ ಪ್ರವೇಶಿಸಿದ ಬಳಿಕ ವರ್ತೂರು ಸಂತೋಷ್​ ಅವರು ಡಲ್​ ಆಗಿದ್ದರು. ಆಟವನ್ನು ಅರ್ಧಕ್ಕೆ ನಿಲ್ಲಿಸಲು ಅವರು ತೀರ್ಮಾನಿಸಿದ್ದರು. ಆದರೆ ನಿರೂಪಕ ಕಿಚ್ಚ ಸುದೀಪ್​, ಅತಿಥಿಯಾಗಿ ಬಂದಿದ್ದ ಸುಷ್ಮಾ ರಾವ್​ ಹಾಗು ಬಿಗ್​ ಬಾಸ್​ ಮನೆಯೊಳಗಿನ ಸ್ಪರ್ಧಿಗಳು ವರ್ತೂರು ಸಂತೋಷ್​ ಅವರ ಮನ ಒಲಿಸಲು ಪ್ರಯತ್ನಿಸಿದರು. ಅಂತಿಮವಾಗಿ ತಾಯಿಯೇ ಬಂದು ಧೈರ್ಯ ತುಂಬಿದ ಬಳಿಕ ವರ್ತೂರು ಸಂತೋಷ್​ ಅವರು ಬಿಗ್ ಬಾಸ್​ ಆಟದಲ್ಲಿ ಮುಂದುವರಿಯಲು ನಿರ್ಧರಿಸಿದರು. ತನಿಶಾ ಮತ್ತು ವರ್ತೂರು ಸಂತೋಷ್​ ನಡುವೆ ದಿನದಿಂದ ದಿನಕ್ಕೆ ಆಪ್ತತೆ ಹೆಚ್ಚುತ್ತಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ.

ಇದನ್ನೂ ಓದಿ: ತನಿಷಾ ಕುಪ್ಪಂಡ ವಿಚಾರಣೆ: ಬಿಗ್​ಬಾಸ್ ಮನೆಗೆ ಪೊಲೀಸರು?

ಇದು 10ನೇ ಸೀಸನ್​ ಆದ್ದರಿಂದ ಈ ಬಾರಿ ‘ಕನ್ನಡ ಬಿಗ್​ ಬಾಸ್​’ ಬಗ್ಗೆ ವೀಕ್ಷಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಟಿಆರ್​ಪಿ ಸಿಗುತ್ತಿದೆ. ಇದರಿಂದ ‘ಕಲರ್ಸ್​ ವಾಹಿನಿ’ ಕೂಡ ಖುಷಿಯಾಗಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಲೈವ್​ ನೋಡುವ ಅವಕಾಶ ಇದೆ. ವಿನಯ್​ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್​ ಮಹೇಶ್​, ಡ್ರೋನ್​ ಪ್ರತಾಪ್​ ಮುಂತಾದವರು ಸ್ಟ್ರಾಂಗ್​ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. 6ನೇ ವಾರದಲ್ಲಿ ಹಣಾಹಣಿ ಮುಂದುವರಿದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್