ಬಿಗ್​ಬಾಸ್ ಮನೆಯ ರಾಜ-ರಾಣಿ-ಗುಲಾಮ-ಜೋಕರ್ ಯಾರು?

Bigg Boss 10: ಬಿಗ್​ಬಾಸ್​ನ ಮನೆಯಲ್ಲಿ ಹಲವು ಸ್ಪರ್ಧಿಗಳು ಆಡುತ್ತಿದ್ದಾರೆ. ಆದರೆ ಆ ಸ್ಪರ್ಧಿಗಳಲ್ಲಿ ರಾಜ ಯಾರು, ರಾಣಿ ಯಾರು? ಗುಲಾಮ, ಜೋಕರ್ ಹಾಗೂ ಎಕ್ಕ ಯಾರು? ಎಂದು ಮನೆಯ ಸದಸ್ಯರೇ ಆರಿಸಿದ್ದಾರೆ.

ಬಿಗ್​ಬಾಸ್ ಮನೆಯ ರಾಜ-ರಾಣಿ-ಗುಲಾಮ-ಜೋಕರ್ ಯಾರು?
Follow us
ಮಂಜುನಾಥ ಸಿ.
|

Updated on:Nov 14, 2023 | 11:23 PM

ಬಿಗ್​ಬಾಸ್ (Bigg Boss) ಮನೆಯ ಕೆಲವು ಸದಸ್ಯರು ಮನೆಯ ಹೊರಗೆ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ತನಿಷಾ ಕುಪ್ಪಂಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವರ್ತೂರು ಸಂತೋಷ್ ಅವರ ಮದುವೆಯ ಚಿತ್ರಗಳು ವೈರಲ್ ಆಗಿದ್ದು, ಸಂತೋಷ್ ಅವರ ಮಾವ, ಸಂತೋಷ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಇದ್ಯಾವುದರ ಪರಿವೆ ಇಲ್ಲದೆ ಬಿಗ್​ಬಾಸ್ ಮನೆಯ ಒಳಗೆ ಸ್ಪರ್ಧಿಗಳು ಆರಾಮವಾಗಿ ಬಿಗ್​ಬಾಸ್ ನೀಡಿದ ಟಾಸ್ಕ್​ಗಳನ್ನು ಆಡುತ್ತಿದ್ದಾರೆ.

ಮಂಗಳವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್ ಒಂದನ್ನು ನೀಡಲಾಯ್ತು. ಈ ಮನೆಯ ರಾಜ, ರಾಣಿ, ಗುಲಾಮ, ಜೋಕರ್ ಹಾಗೂ ಎಕ್ಕ ಯಾರು ಎಂಬುದನ್ನು ಸ್ಪರ್ಧಿಗಳು ಹೇಳುವಂತೆ ಬಿಗ್​ಬಾಸ್ ಆದೇಶಿಸಿದರು. ಜೊತೆಗೆ ಆಯ್ಕೆಗೆ ಸೂಕ್ತ ಕಾರಣವನ್ನು ಸಹ ಮನೆಯ ಸದಸ್ಯರು ನೀಡಬೇಕಿತ್ತು.

ಅಂತೆಯೇ ಮನೆಯ ಸದಸ್ಯರು ಮೊದಲಿಗೆ ಭಾಗ್ಯಶ್ರೀ ಅವರಿಗೆ ಜೋಕರ್ ಪಟ್ಟ ನೀಡಿದರು. ಭಾಗ್ಯಶ್ರೀ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಒಮ್ಮೊಮ್ಮೆ ಏನೋ ಮಾತನಾಡಲು ಹೋಗಿ ಇನ್ನೇನೊ ಮಾತನಾಡಿ ತಾವೇ ತಪ್ಪಿಗೆ ಸಿಲುಕಿಕೊಂಡು ಅಪಹಾಸ್ಯಕ್ಕೆ ಗುರಿಯಾಗುತ್ತಾರೆ ಎಂದು ಹಲವರು ಹೇಳಿದರು. ಮನೆಯವರು ಕೊಟ್ಟ ಜೋಕರ್ ಬಿರುದನ್ನು ಆರೋಗ್ಯಕರವಾಗಿ ತೆಗೆದುಕೊಳ್ಳುವುದಾಗಿ ಭಾಗ್ಯಶ್ರೀ ಹೇಳಿದರು.

ಇದನ್ನೂ ಓದಿ:ಮೋಸಗಾರ, ವ್ಯಸನಿ, ಮಗಳಿಗೆ ಅನ್ಯಾಯ ಮಾಡಿದ್ದಾನೆ: ವರ್ತೂರು ಸಂತೋಷ್ ವಿರುದ್ಧ ಮಾವ ಆರೋಪ

ಅದಾದ ಬಳಿಕ ತನಿಷಾರನ್ನು ಮನೆಯ ರಾಣಿಯನ್ನಾಗಿ ಸದಸ್ಯರು ಆರಿಸಿದರು. ಸಿರಿ ಅವರ ಹೆಸರನ್ನು ಸಹ ಕೆಲವರು ಹೇಳಿದರು. ತನಿಷಾರ ಎದುರಾಳಿ ತಂಡದ ವಿನಯ್, ನಮ್ರತಾ ಸಹ ತನಿಷಾರನ್ನೇ ಮನೆಯ ರಾಣಿಯನ್ನಾಗಿ ಆಯ್ಕೆ ಮಾಡಿದರು. ತನಿಷಾರ ಖುಷಿಗೆ ಪಾರವೇ ಇರಲಿಲ್ಲ. ಬಳಿಕ ಮನೆಯ ಗುಲಾಮ ಯಾರು ಎಂದು ಆಯ್ಕೆ ಮಾಡುವಾಗ ಮನೆಯ ಹಲವು ಸದಸ್ಯರು ಆಯ್ಕೆ ಮಾಡಿದ್ದು ಇಶಾನಿಯನ್ನು. ವಿನಯ್, ಮೈಖಲ್ ಸಹ ಇಶಾನಿಯನ್ನೇ ಗುಲಾಮ ಎಂದರು. ಇಶಾನಿ ಸಹ ಅದನ್ನು ಖುಷಿಯಿಂದಲೇ ಸ್ವೀಕರಿಸಿದರು.

ಬಳಿಕ ರಾಜನ ಆಯ್ಕೆ ನಡೆಯಿತು. ಮನೆಯ ಹಲವು ಸದಸ್ಯರು ವಿನಯ್​ರ ಹೆಸರನ್ನು ಸೂಚಿಸಿದರು. ಕೆಲವರು ಕಾರ್ತಿಕ್ ಹೆಸರನ್ನು ಸಹ ಹೇಳಿದರು. ಅಂತಿಮವಾಗಿ ವಿನಯ್ ಅವರೇ ಮನೆಯ ರಾಜ ಎನಿಸಿಕೊಂಡರು. ಇದರಿಂದ ಕಾಂಪಿಟೇಷನ್ ಹೆಚ್ಚುತ್ತದೆ, ಒಬ್ಬ ರಾಜನನ್ನು ಇಳಿಸಿಯೇ ಇನ್ನೊಬ್ಬ ರಾಜ ಆಗಬೇಕು, ಮನೆಯ ಎಲ್ಲ ಸದಸ್ಯರು ನನ್ನನ್ನು ಇಳಿಸಲು ಕಾಯುತ್ತಿರಬಹುದು ಎಂದರು ವಿನಯ್.

ಕೊನೆಯಲ್ಲಿ ಎಕ್ಕ ಯಾರೆಂದು ಆಯ್ಕೆ ಮಾಡಲಾಯ್ತು. ಯಾರ ನಡೆಯನ್ನು ಊಹಿಸಲಾಗುವುದಿಲ್ಲ, ತಮ್ಮ ವರ್ತನೆಯಿಂದ, ಪ್ರದರ್ಶನದಿಂದ ಸರ್ಪ್ರೈಸ್ ಕೊಡುತ್ತಿರುತ್ತಾರೋ ಅವರನ್ನು ಎಕ್ಕ ಎಂದು ಆರಿಸಬೇಕಿತ್ತು. ಮನೆಯ ಬಹುತೇಕ ಸದಸ್ಯರು ಸ್ನೇಹಿತ್ ಅನ್ನು ಎಕ್ಕ ಎಂದು ಆರಿಸಿದರು. ಸ್ನೇಹಿತ್ ಹೆಸರನ್ನೂ ಸಹ ಕೆಲವರು ಹೇಳಿದರು. ಆದರೆ ಅಂತಿಮವಾಗಿ ಪ್ರತಾಪ್ ಅವರೇ ಎಕ್ಕ ಆದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:21 pm, Tue, 14 November 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್