AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ ಸಲ್ಮಾನ್ ಖಾನ್

Salman Khan: ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಆದರೆ ಸಲ್ಮಾನ್ ಖಾನ್ ತಮ್ಮ ಕೆಲ ಅಭಿಮಾನಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ ಸಲ್ಮಾನ್ ಖಾನ್
ಮಂಜುನಾಥ ಸಿ.
|

Updated on: Nov 24, 2023 | 5:51 PM

Share

ಸಲ್ಮಾನ್ ಖಾನ್ (Salman Khan) ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಭಾಯ್ ಎಂದು ಕರೆಯುತ್ತಾರೆ. ಸಖತ್ ಮಾಸ್ ಅಭಿಮಾನಿಗಳನ್ನು ಹೊಂದಿರುವ ಸಲ್ಮಾನ್ ಖಾನ್, ಪ್ರತಿ ಸಿನಿಮಾ ಆಯ್ಕೆ ಮಾಡಿಕೊಳ್ಳುವಾಗಲೂ ಅಭಿಮಾನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅಭಿಮಾನಿಗಳು ಸಹ ಸಲ್ಮಾನ್ ಖಾನ್ ಅನ್ನು ಕೈಬಿಟ್ಟಿರುವುದು ಕಡಿಮೆಯೇ, ಸತತವಾಗಿ ಕೆಟ್ಟ ಸಿನಿಮಾಗಳನ್ನು ಅಥವಾ ತೀರಾ ಸಾಧಾರಣ ಮಾದರಿಯ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದರೂ ಬಾಕ್ಸ್ ಆಫೀಸ್​ನಲ್ಲಿ ಸಲ್ಲು ಸಿನಿಮಾಗಳು ಫೇಲ್ ಆಗದಿರಲು ಅವರ ಅಭಿಮಾನಿಗಳೇ ಕಾರಣ. ಆದರೆ ಈಗ ಸಲ್ಲು, ತಮ್ಮ ಅಭಿಮಾನಿಗಳ ಮೇಲೆ ಬೇಸರಗೊಂಡಿದ್ದಾರೆ.

ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಸಲ್ಮಾನ್​ರ ಕಳೆದ ಕೆಲವು ಸಿನಿಗಳಿಗೆ ಎದುರಾಗಿದ್ದ ಹಿನ್ನಡೆಯನ್ನು ಮರೆಸುವಂತೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮುನ್ನುಗ್ಗುತ್ತಿದೆ. ವಿಶ್ವಕಪ್ ನಡುವೆಯೂ ‘ಟೈಗರ್ 3’ ಸಿನಿಮಾ ಸುಮಾರು 400 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್​ನಲ್ಲಿ ಕಲೆ ಹಾಕಿ ಮುನ್ನುಗ್ಗುತ್ತಿದೆ. ಸಿನಿಮಾ ಹಿಟ್ ಆಗಿದ್ದರೂ ಸಹ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳ ಬಗ್ಗೆ ಬೇಸರಗೊಂಡಿದ್ದಾರೆ.

‘ಟೈಗರ್ 3’ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರವೊಂದರಲ್ಲಿ ಸಲ್ಲು ಅಭಿಮಾನಿಗಳು ಪಟಾಕಿ ಹೊಡೆದಿದ್ದರು. ಪಟಾಕಿ ಹೊಡೆದಿದ್ದರಿಂದಾಗಿ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಎದ್ದು ಬಿದ್ದು ಓಡುವಂತಾಗಿ ಹಲವರಿಗೆ ಗಾಯಗಳಾಗಿದ್ದವು, ಚಿತ್ರಮಂದಿರಕ್ಕೂ ಇದರಿಂದ ಹಾನಿ ಆಗಿತ್ತು. ಸಲ್ಲು ಅಭಿಮಾನಿಗಳ ಈ ಅತಿರೇಕದ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಟೀಕೆಗೂ ಗುರಿಯಾಗಿತ್ತು.

ಇದನ್ನೂ ಓದಿ:ಸಲ್ಮಾನ್ ಖಾನ್​ಗೆ ಹೇಗಿದೆ ನೋಡಿ ಭದ್ರತೆ; ಸಲ್ಲು ಬಳಿ ಯಾರೂ ಸುಳಿಯುವ ಹಾಗಿಲ್ಲ..

ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಸಲ್ಮಾನ್ ಖಾನ್, ‘ಇದು ಬಹಳ ಕೆಟ್ಟ ನಡೆ. ಚಿತ್ರಮಂದಿರದಲ್ಲಿ ಪಟಾಕಿ ಹೊಡೆಯುವುದು ಬಹಳ ಅಪಾಯಕಾರಿ ಕೆಲಸ ಇಂಥಹಾ ಕೃತ್ಯ ಯಾರೂ ಸಹ ಮಾಡಬಾರದು’ ಎಂದಿದ್ದಾರೆ. ಮುಂದುವರೆದು, ತಮ್ಮ ಕಟೌಟ್​ಗೆ ಹಾಲಿನ ಅಭಿಷೇಕ ಮಾಡುವುದಕ್ಕೂ ವಿರೋಧ ವ್ಯಕ್ತಪಡಿಸಿರುವ ಸಲ್ಲು, ‘ನಾವು ಬೇಡದ್ದು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ, ಹೊಟ್ಟೆ ಕೆಡಿಸಿಕೊಳ್ಳುತ್ತೇವೆ ಹಾಗಿರುವಾಗ ಹೀಗೆ ಹಾಲನ್ನು ಸುರಿದು ವೇಸ್ಟ್ ಮಾಡುವುದು ದೊಡ್ಡ ತಪ್ಪು’ ಎಂದಿದ್ದಾರೆ.

‘ಟೈಗರ್ 3’ ಸಿನಿಮಾ ಇದೇ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಕತ್ರಿನಾ ಕೈಫ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ನಟಿಸಿದ್ದಾರೆ. ವಿಶೇಷ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ಸಹ ಇದ್ದಾರೆ. ಸಿನಿಮಾದಲ್ಲಿ ರಾ ಏಜೆಂಟ್ ಪಾತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. 2012 ರಲ್ಲಿ ಬಿಡುಗಡೆ ಆಗಿದ್ದ ‘ಏಕ್ ಥಾ ಟೈಗರ್’ ಸಿನಿಮಾ ಸರಣಿಯನ್ನು ನಿರ್ಮಾಣ ಸಂಸ್ಥೆಯಾದ ಯಶ್ ರಾಜ್ ಫಿಲಮ್ಸ್ ಮುಂದುವರೆಸಿಕೊಂಡು ಹೋಗುತ್ತಿದೆ. ಈಗ ‘ಟೈಗರ್ 3’ ಸಹ ಮೊದಲ ಎರಡು ಸಿನಿಮಾಗಳ ರೀತಿಯೇ ಸೂಪರ್ ಹಿಟ್ ಆಗಿದೆ. ‘ಟೈಗರ್ 4’ ಸಹ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ