‘ಅತ್ತವರ ಸಮಾಧಾನ ಮಾಡೋಕೆ ನಾವಿಲ್ಲ’; ವಿನಯ್ ಗುಂಪಲ್ಲಿ ಸಂಗೀತಾ ಹೊರಗಿನವರೇ..
ವಿನಯ್, ನಮ್ರತಾ ಹಾಗೂ ಸ್ನೇಹಿತ್ ಗೆಳೆತನ ಗ್ಯಾಂಗ್ ಆಗಿ ಬದಲಾಗಿದೆ. ಈ ಗ್ಯಾಂಗ್ಗೆ ಬಂದು ಸೇರ್ಪಡೆ ಆಗಿದ್ದು ಸಂಗೀತಾ. ಅವರನ್ನು ಇವರು ಹೊರಗಿನವರ ರೀತಿಯೇ ನೋಡುತ್ತಿದ್ದಾರೆ. ಆದರೆ, ಸಂಗೀತಾಗೆ ಈ ಬಗ್ಗೆ ತಿಳಿಯುತ್ತಿಲ್ಲ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಬಿಗ್ ಬಾಸ್’ (Bigg Boss) ಶೋನಲ್ಲಿ ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಆದರೆ, ಅದು ಮುರಿದುಬಿದ್ದಿದೆ. ಈ ಕಾರಣಕ್ಕೆ ಸಂಗೀತಾ ಬೇರೆ ದಾರಿ ಕಾಣದೆ ವಿನಯ್ ಗ್ಯಾಂಗ್ ಸೇರಿಕೊಂಡಿದ್ದಾರೆ. ಅವರಿಗೆ ಅಲ್ಲಿ ಕಾಳಜಿ ಸಿಗುತ್ತಿದೆ ಎಂದು ಅವರು ಅಂದುಕೊಂಡಿದ್ದಾರೆ. ಆದರೆ, ನಿಜವಾಗಿಯೂ ಅಲ್ಲಿ ಅವರಿಗೆ ಕೇರ್ ಸಿಗುತ್ತಿಲ್ಲ. ಸಂಗೀತಾ ಇಲ್ಲದ ಸಂದರ್ಭದಲ್ಲಿ ವಿನಯ್ ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಗುಂಪಿನಲ್ಲಿ ಸಂಗೀತಾ ಹೊರಗಿನವರೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ವಿನಯ್, ನಮ್ರತಾ ಹಾಗೂ ಸ್ನೇಹಿತ್ ಗೆಳೆತನ ಗ್ಯಾಂಗ್ ಆಗಿ ಬದಲಾಗಿದೆ. ಈ ಗ್ಯಾಂಗ್ಗೆ ಬಂದು ಸೇರ್ಪಡೆ ಆಗಿದ್ದು ಸಂಗೀತಾ. ಅವರನ್ನು ಇವರು ಹೊರಗಿನವರ ರೀತಿಯೇ ನೋಡುತ್ತಿದ್ದಾರೆ. ಆದರೆ, ಸಂಗೀತಾಗೆ ಈ ಬಗ್ಗೆ ತಿಳಿಯುತ್ತಿಲ್ಲ. ಕಾರ್ತಿಕ್ ಹಾಗೂ ತನಿಷಾಗೆ ಬೈಯುತ್ತಾ ಕಾಲ ಕಳೆಯುತ್ತಿದ್ದಾರೆ.
‘ಸಂಗೀತಾಗೆ ಮತ್ತೆ ಆ ಗುಂಪು ಸೇರಿಕೊಳ್ಳಬೇಕು ಎಂದಿದೆ. ಕಾರ್ತಿಕ್ ಇದಾನೆ ಎನ್ನುವ ಕಾರಣಕ್ಕೆ ಆಕೆ ಅಡುಗೆ ಮಾಡಲು ಒಪ್ಪಿದರು. ಅಳುವವರನ್ನು ಕನ್ಸೋಲ್ ಮಾಡೋಕೆ ನಾವಿಲ್ಲ. ನಮಗೆ ನಮ್ಮದೇ ಆದ ಬದುಕಿದೆ, ಆಟ ಇದೆ. ತನಿಷಾ ಹಾಗೂ ಕಾರ್ತಿಕ್ ಖುಷಿಯಾಗಿ ಇರೋದನ್ನು ಅವರ ಬಳಿ ತಡೆದುಕೊಳ್ಳೋಕೆ ಆಗುತ್ತಿಲ್ಲ’ ಎಂದಿದ್ದಾರೆ ವಿನಯ್. ಈ ಮೂಲಕ ತಮ್ಮ ಗುಂಪಿನಲ್ಲಿ ಅವರು ಹೊರಗಿನವರು ಎಂದು ನೇರವಾಗಿ ಹೇಳಿದ್ದಾರೆ.
ಸಂಗೀತಾ ನಡೆಯಿಂದ ಅವರು ಹಿಂಬಾಲಕರನ್ನು ಕಳೆದುಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರಿಗೆ ಈ ಬಗ್ಗೆ ತಿಳಿಯುತ್ತಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಈಗಾಗಲೇ ಅವರು 14 ಸಾವಿರ ಹಿಂಬಾಲಕರನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಫಾಲೋರ್ಸ್ ಸಂಖ್ಯೆ ದಿನ ಕಳೆದಂತೆ ಕಡಿಮೆ ಆಗುತ್ತಲೇ ಇದೆ.
ಇದನ್ನೂ ಓದಿ: ಪ್ರತಾಪ್ ಬಗ್ಗೆಯೇ ಚುಚ್ಚು ಮಾತು; ವಿನಯ್ ಚಮಚ ಆಗಿ ಬದಲಾಗೋದ್ರಾ ಸಂಗೀತಾ?
ವೀಕೆಂಡ್ ಬಂದಿದೆ. ಸಂಗೀತಾ ಅವರು ನಡೆದುಕೊಳ್ಳುತ್ತಿರುವ ರೀತಿಯನ್ನು ಸುದೀಪ್ ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಈ ವಾರ ಸ್ನೇಹಿತ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತೆ ಇದೆ. ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಶೋನ 24 ಗಂಟೆ ಲೈವ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:08 am, Sat, 25 November 23