ಹಲವು ಮೊದಲುಗಳಿಗೆ ಸಾಕ್ಷಿಯಾದ ‘ಬಿಗ್ ಬಾಸ್ ಕನ್ನಡ ಸೀಸನ್ 10’; ಇಲ್ಲಿದೆ ವಿವರ

Bigg Boss Kannada: ಈ ಬಾರಿಯ ಬಿಗ್ ಬಾಸ್ ಗಮನ ಸೆಳೆಯುತ್ತಿದೆ. ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ನಡೆಯದೇ ಇರುವ ಅನೇಕ ಘಟನೆಗಳು ಈ ಸೀಸನ್​​ನಲ್ಲಿ ನಡೆದಿವೆ. ಅದೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಹಲವು ಮೊದಲುಗಳಿಗೆ ಸಾಕ್ಷಿಯಾದ ‘ಬಿಗ್ ಬಾಸ್ ಕನ್ನಡ ಸೀಸನ್ 10’; ಇಲ್ಲಿದೆ ವಿವರ
ಹಲವು ಮೊದಲುಗಳಿಗೆ ಸಾಕ್ಷಿಯಾದ ‘ಬಿಗ್ ಬಾಸ್ ಕನ್ನಡ ಸೀಸನ್ 10’
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 01, 2023 | 8:09 AM

‘ಬಿಗ್ ಬಾಸ್ ಕನ್ನಡ’ ಈಗಾಗಲೇ ಒಂಭತ್ತು ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈಗ 10ನೇ ಸೀಸನ್ ಕೂಡ ಒಳ್ಳೆಯ ಟಿಆರ್​ಪಿ ಪಡೆದು ಮುನ್ನುಗ್ಗುತ್ತಿದೆ. ಎಲ್ಲಾ ಸ್ಪರ್ಧಿಗಳು ಉತ್ತಮ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಬಿಗ್ ಬಾಸ್ ಕನ್ನಡ (Bigg Boss Kannada) ಇತಿಹಾಸದಲ್ಲಿ ನಡೆಯದೇ ಇರುವ ಅನೇಕ ಘಟನೆಗಳು ಈ ಸೀಸನ್​​ನಲ್ಲಿ ನಡೆದಿವೆ. ಅದೇನು ಎನ್ನುವ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.

ವಸ್ತುವಿಗೆ ಚಪ್ಪಾಳೆ

ಪ್ರತಿ ವಾರ ಸುದೀಪ್ ಅವರು ‘ಕಿಚ್ಚನ ಚಪ್ಪಾಳೆ’ ನೀಡುತ್ತಾರೆ. ಆ ವಾರದಲ್ಲಿ ಯಾರು ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡುತ್ತಾರೋ ಅವರಿಗೆ ಈ ಚಪ್ಪಾಳೆ ನೀಡಲಾಗುತ್ತದೆ. ಇದನ್ನು ಪಡೆಯಬೇಕು ಎಂದು ಅನೇಕರು ಪ್ರಯತ್ನಿಸುತ್ತಾರೆ. ಆದರೆ, ಇದನ್ನು ಪಡೆಯೋದು ಅಷ್ಟು ಸುಲಭ ಅಲ್ಲವೇ ಅಲ್ಲ. ಈ ಚಪ್ಪಾಳೆ ಈ ಬಾರಿ ಒಂದು ವಸ್ತುವಿಗೆ ಹೋಗಿತ್ತು. ಮಹಿಳೆಯರು ಸ್ಟ್ರಾಂಗ್ ಅಲ್ಲ ಎಂಬರ್ಥದಲ್ಲಿ ವಿನಯ್ ಮಾತನಾಡಿದ್ದಾಗ ಬಳೆಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. ವಸ್ತುವಿಗೆ ಚಪ್ಪಾಳೆ ಸಿಕ್ಕಿದ್ದು ಅದೇ ಮೊದಲು.

ಬದಲಾದ ಉತ್ತಮ

ಪ್ರತಿ ವಾರ ಉತ್ತಮ ಹಾಗೂ ಕಳಪೆಯನ್ನು ಒಬ್ಬರಿಗೆ ನೀಡಲಾಗುತ್ತದೆ. ಕೆಲ ವಾರಗಳ ಹಿಂದೆ ಕೆಲವು ಸ್ಪರ್ಧಿಗಳು ವಿನಯ್ ಅವರನ್ನು ಆರಾಧಿಸಲು ಆರಂಭಿಸಿಬಿಟ್ಟಿದ್ದರು. ಒಂದು ವಾರ ವಿನಯ್ ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡದೇ ಇದ್ದ ಹೊರತಾಗಿಯೂ ಅವರಿಗೆ ಉತ್ತಮ ನೀಡಿದ್ದರು. ವೀಕೆಂಡ್​ನಲ್ಲಿ ಸುದೀಪ್ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಆ ಬಳಿಕ ವಿನಯ್ ಅವರಿಂದ ಉತ್ತಮ ಪಟ್ಟ ಸ್ನೇಹಿತ್​ಗೆ ವರ್ಗಾವಣೆ ಆಯಿತು.

ಜೈಲಿನಿಂದ ಎಸ್ಕೇಪ್

ಕಳೆದ 9 ಸೀಸನ್​ಗಳಲ್ಲಿ ಹಲವರು ಬಿಗ್ ಬಾಸ್ ಜೈಲಿಗೆ ಹೋಗಿದ್ದಾರೆ. ಈ ಸೀಸನ್​ನಲ್ಲೂ ಅದು ಮುಂದುವರಿಯುತ್ತಿದೆ. ಆದರೆ, ಇದೇ ಮೊದಲ ಬಾರಿಗೆ ಬಿಗ್ ಬಾಸ್ ಜೈಲಿನಿಂದ ಒಬ್ಬರು ಎಸ್ಕೇಪ್ ಆಗಿದ್ದರು! ಅದುವೇ ವರ್ತೂರು ಸಂತೋಷ್. ಅಗಲವಾದ ಜೈಲಿನ ಕಂಬಿಯಿಂದ ಸಂತೋಷ್ ಹೊರ ಬಂದಿದ್ದರು. ಈ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದರು.

ಕ್ಯಾಪ್ಟನ್ ಔಟ್!

ಕ್ಯಾಪ್ಟನ್ ಆದ ವಾರ ಇಮ್ಯೂನಿಟಿ ಸಿಗುವುದಿಲ್ಲ. ಅದು ಸಿಗೋದು ಮುಂದಿನವಾರಕ್ಕೆ. ಕ್ಯಾಪ್ಟನ್ ಆದ ಮರುವಾರ ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ. ಕ್ಯಾಪ್ಟನ್ ಆದ ವಾರ ಅವರು ನಾಮಿನೇಟ್ ಆಗಿದ್ದರೆ ಅದು ರದ್ದಾಗುವುದಿಲ್ಲ. ಈವರೆಗೆ  ಕ್ಯಾಪ್ಟನ್ ಆದ ಯಾರೊಬ್ಬರೂ ಬಿಗ್ ಬಾಸ್ ಮನೆಯಿಂದ ಔಟ್ ಆಗಿರಲಿಲ್ಲ. ಕಳೆದ ವಾರ ಅಂಥಹ ಘಟನೆ ನಡೆಯಿತು. ನೀತು ವನಜಾಕ್ಷಿ ಅವರು ಕ್ಯಾಪ್ಟನ್ ಆದ ಹೊರತಾಗಿಯೂ ಎಲಿಮಿನೇಟ್ ಆದರು.

ಜೈಲಿಗೆ ಹೋದ್ರು..

ಬಿಗ್ ಬಾಸ್​ನಲ್ಲಿ ಇರುವಾಗಲೇ ಸ್ಪರ್ಧಿಯನ್ನು ಹೊರಗೆ ಕರೆತಂದು ಜೈಲಿಗೆ ಕರೆದುಕೊಂಡು ಹೋಗಲಾಯಿತು. ವರ್ತೂರು ಸಂತೋಷ್ ಅವರು ಬಿಗ್ ಬಾಸ್​ಗೆ ತೆರಳಿದ್ದಾಗ ಹುಲಿ ಉಗುರು ಹಾಕಿದ್ದು ಕಂಡು ಬಂತು. ಈ ಪ್ರಕರಣದಲ್ಲಿ ಅವರು ಅರೆಸ್ಟ್ ಆದರು. ಈಗ ಮರಳಿ ದೊಡ್ಮನೆಗೆ ಬಂದಿದ್ದಾರೆ.

ಇದನ್ನೂ ಓದಿ: 50 ದಿನಗಳ ಬಳಿಕ ಚೂರಾದ ಬಿಗ್ ಬಾಸ್ ಗ್ರೂಪ್​; ಇದಕ್ಕೆಲ್ಲ ಕಾರಣ ಯಾರು?

ಎಲಿಮಿನೇಷನ್ ರದ್ದು

ಬಿಗ್ ಬಾಸ್​ನಲ್ಲಿ ಅನೇಕ ಬಾರಿ ಎಲಿಮಿನೇಷನ್ ರದ್ದಾದ ಉದಾಹರಣೆ ಇದೆ. ಇತ್ತೀಚೆಗೆ ಹಾಗೆಯೇ ಆಗಿತ್ತು. ಆದರೆ, ಅದು ಬೇರೆ ರೀತಿಯಲ್ಲಿ. ನಾಮಿನೇಷನ್​ನಿಂದ ಸೇವ್ ಆದ ಹೊರತಾಗಿಯೂ ವರ್ತೂರು ಸಂತೋಷ್ ಅವರು ತಾವು ಬಿಗ್ ಬಾಸ್​ನಿಂದ ಹೊರ ಹೋಗುತ್ತೇನೆ ಎಂದು ಹಠ ಹಿಡಿದರು. ಇದಕ್ಕೆ ಸುದೀಪ್ ಒಪ್ಪಲಿಲ್ಲ. ಹೀಗಾಗಿ, ಶೋನಿಂದ ಹೊರ ನಡೆದರು.

ಚಾರ್ಲಿ ಒಂದು ಮಿಸ್

ಇದೇ ಮೊದಲ ಬಾರಿಗೆ ಬಿಗ್ ಬಾಸ್​ ಇತಿಹಾಸದಲ್ಲಿ ಶ್ವಾನ ದೊಡ್ಮನೆಗೆ ಬರಲಿದೆ ಎನ್ನಲಾಗಿತ್ತು. ‘777 ಚಾರ್ಲಿ’ ಶ್ವಾನ ಚಾರ್ಲಿ ಬಿಗ್ ಬಾಸ್​ಗೆ ಬರಬೇಕಿತ್ತು. ಆದರೆ, ಸಿನಿಮಾ ತಂಡದವರು ನಾಯಿಯನ್ನು ಕಳಿಸದಿರಲು ನಿರ್ಧರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:09 am, Fri, 1 December 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?