AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

50 ದಿನಗಳ ಬಳಿಕ ಚೂರಾದ ಬಿಗ್ ಬಾಸ್ ಗ್ರೂಪ್​; ಇದಕ್ಕೆಲ್ಲ ಕಾರಣ ಯಾರು?

ಬಿಗ್ ಬಾಸ್​ನಲ್ಲಿ ಒಂದು ಗುಂಪು ಸೃಷ್ಟಿ ಆದರೆ ಅದು ಹೆಚ್ಚು ದಿನ ಉಳಿಯೋದಿಲ್ಲ. ಎಲ್ಲರಿಗೂ ಅವರದ್ದೇ ಆದ ಆಟವನ್ನು ತೋರಿಸಬೇಕಾದ ಅನಿವಾರ್ಯತೆ ಇರುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ನಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ.

50 ದಿನಗಳ ಬಳಿಕ ಚೂರಾದ ಬಿಗ್ ಬಾಸ್ ಗ್ರೂಪ್​; ಇದಕ್ಕೆಲ್ಲ ಕಾರಣ ಯಾರು?
ವಿನಯ್-ನಮ್ರತಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Nov 30, 2023 | 4:20 PM

ಬಿಗ್​ ಬಾಸ್​ನಲ್ಲಿ (Bigg Boss Kannada) ಗ್ರೂಪಿಸಂ ನಡೆಯೋದು ಸರ್ವೇ ಸಾಮಾನ್ಯ. ಆದರೆ, ಗುಂಪುಗಾರಿಕೆಯನ್ನು ಯಾರೂ ಓಪನ್ ಆಗಿ ಮಾಡೋ ಧೈರ್ಯ ಮಾಡುವುದಿಲ್ಲ. ವಿನಯ್ ಗೌಡ, ಸ್ನೇಹಿತ್ ಗೌಡ, ನಮ್ರತಾ ಗೌಡ (Namratha Gowda), ನೀತು ವನಜಾಕ್ಷಿ, ರಕ್ಷಕ್ ಹಾಗೂ ತುಕಾಲಿ ಸಂತೋಷ್ ಈ ಬಾರಿ ಬಿಗ್ ಬಾಸ್​ನಲ್ಲಿ ಓಪನ್ ಆಗಿ ಗ್ರೂಪಿಸಂ ಮಾಡಿದ್ದರು. ಇದು ಅವರಿಗೇ ಮುಳುವಾಗಿದೆ. ಈ ಗುಂಪು ಈಗ ಒಡೆದು ಚೂರಾಗಿದೆ. ಆನೆ ಎನಿಸಿಕೊಂಡ ವಿನಯ್ ಗೌಡ (Vinay Gowda) ಏಕಾಂಗಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಆಟ ಮತ್ತಷ್ಟು ಕಠಿಣ ಆಗಲಿದೆ.

ಬಿಗ್ ಬಾಸ್​ನಲ್ಲಿ ನಡೆಯುತ್ತಿರುವ ಗ್ರೂಪಿಸಂ ಬಗ್ಗೆ ಸುದೀಪ್ ಅಸಮಾಧಾನ ಹೊರಹಾಕಿದ್ದರು. ‘ವಿನಯ್ ಗುಂಪಿನಲ್ಲಿ ಇರುವ ಎಲ್ಲರೂ ಅವರನ್ನು ಗೆಲ್ಲಿಸಲು ಆಟ ಆಡುತ್ತಿದ್ದೀರಿ ಎಂದು ಅನಿಸುತ್ತಿದೆ’ ಎಂದು ಹೇಳಿದ್ದರು. ಆದಾಗ್ಯೂ ಇವರು ಬದಲಾಗಲೇ ಇಲ್ಲ. ಈ ಗುಂಪಿನಿಂದ ಮೊದಲು ಔಟ್ ಆಗಿದ್ದು ರಕ್ಷಕ್. ನಂತರ ನೀತುಗೆ ಬೇಸರ ಆಗಿ ಗುಂಪು ತೊರೆದರು. ಅವರು ಈಗ ಮನೆಯಿಂದಲೇ ಔಟ್ ಆಗಿದ್ದಾರೆ.

ಇದನ್ನೂ ಓದಿ: Kannada TV Serial TRP: ‘ಬಿಗ್ ಬಾಸ್’ ಹಾಗೂ ಧಾರಾವಾಹಿ ಟಿಆರ್​ಪಿಯಲ್ಲಿ ಏರಿಳಿತ; ಇಲ್ಲಿದೆ ವಿವರ

ತುಕಾಲಿ ಸಂತೋಷ್ ಹಾಗೂ ವಿನಯ್ ಮಧ್ಯೆ ಕಿರಿಕ್ ಆಗಿ ಸಂತೋಷ್ ಈ ಗುಂಪನ್ನು ಬಿಟ್ಟಿದ್ದಾರೆ. ಈಗ ಇವರ ಗುಂಪಿನಲ್ಲಿ ಉಳಿದುಕೊಂಡಿದ್ದು ವಿನಯ್, ನಮ್ರತಾ ಹಾಗೂ ಸ್ನೇಹಿತ್ ಮೂವರೇ ಆಗಿತ್ತು. ಅವರೂ ಈಗ ಒಂದೊಂದು ದಿಕ್ಕಾಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್​ನಿಂದ ಒಬ್ಬರನ್ನು ಹೊರಗಿಡಿ ಎಂಬ ಬಿಗ್ ಬಾಸ್ ಆದೇಶಕ್ಕೆ ತಲೆಬಾಗಿರುವ ನಮ್ರತಾ ಅವರು ವಿನಯ್​ನ ಹೊರಗೆ ಇಟ್ಟಿದ್ದಾರೆ. ನಮ್ರತಾ ನಿರ್ಧಾರದಿಂದ ಬಿಗ್ ಬಾಸ್ ಮನೆಯಲ್ಲಿರುವ ಗ್ರೂಪಿಸಂ ಕೊನೆ ಆಗುವ ಸೂಚನೆ ಸಿಕ್ಕಿದೆ.

ಬಿಗ್ ಬಾಸ್​ನಲ್ಲಿ ಗುಂಪು ಮಾಡಿಕೊಂಡರೆ ಹೆಚ್ಚು ದಿನ ಬರುವುದಿಲ್ಲ. ಸುದೀಪ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ‘ನಾಮಿನೇಷನ್ ವಿಚಾರ ಬಂದಾಗ ನಮ್ರತಾ ವಿನಯ್ ಹೆಸರು ತೆಗೆದುಕೊಳ್ಳಬೇಕು’ ಎಂದು ಈ ಮೊದಲೇ ಎಚ್ಚರಿಸಿದ್ದರು. ಅದು ಈಗ ನಿಜವಾಗಿದೆ. ಕ್ಯಾಪ್ಟನ್ಸಿ ಟಾಸ್ಕ್​ನಿಂದ ವಿನಯ್​ನ ನಮ್ರತಾ ಹೊರಗೆ ಇಟ್ಟಿದ್ದಾರೆ.

ಇದನ್ನೂ ಓದಿ: ‘ಈ ರೀತಿಯ ವ್ಯಕ್ತಿಗಳು ಗುಡ್ ಇನ್ ಬೆಡ್​​’; ಬಿಗ್ ಬಾಸ್ ಮನೆಯಲ್ಲಿ ಅಡಲ್ಟ್ ಟಾಕ್

ಯಾಕೀ ಬದಲಾವಣೆ?

‘ಬಿಗ್ ಬಾಸ್ ಕನ್ನಡ’ ಸೀಸನ್ 10ರ ಅರ್ಧ ಜರ್ನಿ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಪ್ರಯಾಣ ಮತ್ತಷ್ಟು ಕಠಿಣವಾಗಲಿದೆ. ಮತ್ತೊಂದು ಸ್ಪರ್ಧಿಯನ್ನು ಓಲೈಸುತ್ತಾ ಕುಳಿತರೆ ತಮ್ಮ ಜರ್ನಿಗೆ ತೊಂದರೆ ಆಗಲಿದೆ ಎಂಬುದು ಸ್ಪರ್ಧಿಗಳಿಗೆ ಖಚಿತವಾದಂತೆ ಇದೆ. ಹೀಗಾಗಿ, ಸ್ನೇಹಿತ್ ಅವರು ಪರಿಶ್ರಮ ಹಾಕಿ ಆಡುತ್ತಿದ್ದಾರೆ. ನಮ್ರತಾ ಕೂಡ ಬೇರೆಯವರ ನೆರಳಲ್ಲಿ ಗುರುತಿಸಿಕೊಳ್ಳದೆ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಕಾರಣದಿಂದ ನಮ್ರತಾ ಬದಲಾಗಿದ್ದಾರೆ. ಈ ವಾರದ ಟಾಸ್ಕ್​ನಲ್ಲಿ ಅವರು ವಿನಯ್ ಟೀಂ ಸೇರುವ ಬದಲು ಪ್ರತಾಪ್​ ಜೊತೆ ಕಾಣಿಸಿಕೊಂಡರು. ಈಗ ವಿನಯ್ ಗುಂಪು ಸಂಪೂರ್ಣವಾಗಿ ಒಡೆದು ಚೂರಾಗಿದೆ. ಮುಂದಿನ ದಿನಗಳಲ್ಲಿ ಇವರೆಲ್ಲ ಮತ್ತೆ ಒಂದಾಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್