‘ಈ ರೀತಿಯ ವ್ಯಕ್ತಿಗಳು ಗುಡ್ ಇನ್ ಬೆಡ್​​’; ಬಿಗ್ ಬಾಸ್ ಮನೆಯಲ್ಲಿ ಅಡಲ್ಟ್ ಟಾಕ್

ಈ ಮೊದಲು ಬಿಗ್ ಬಾಸ್ ಮನೆಯಲ್ಲಿ ಅಡಲ್ಟ್ ಟಾಕ್​ಗಳು ನಡೆದಿವೆ. ಮಾತು ಲಿಮಿಟ್​ನಲ್ಲಿದ್ದರೆ ಯಾರೂ ಪ್ರಶ್ನೆ ಮಾಡುವುದಿಲ್ಲ. ಕೆಲವೊಮ್ಮೆ ಇದು ಮಿತಿ ಮೀರಿ ಹೋಗುತ್ತದೆ.

‘ಈ ರೀತಿಯ ವ್ಯಕ್ತಿಗಳು ಗುಡ್ ಇನ್ ಬೆಡ್​​’; ಬಿಗ್ ಬಾಸ್ ಮನೆಯಲ್ಲಿ ಅಡಲ್ಟ್ ಟಾಕ್
ನಮ್ರತಾ ಆ್ಯಂಡ್ ಟೀಂ
Follow us
ರಾಜೇಶ್ ದುಗ್ಗುಮನೆ
|

Updated on:Nov 30, 2023 | 8:09 AM

ಬಿಗ್ ಬಾಸ್​ನಲ್ಲಿ (Bigg Boss) ನೂರಾರು ಕ್ಯಾಮೆರಾಗಳು ಸ್ಪರ್ಧಿಗಳನ್ನು ನೋಡುತ್ತಲೇ ಇರುತ್ತವೆ. ಎಷ್ಟೇ ಸಣ್ಣ ಧ್ವನಿಯಲ್ಲಿ ಮಾತನಾಡಿದರೂ ಮೈಕ್ ಮೂಲಕ ಕೇಳುತ್ತದೆ. ಹೀಗಾಗಿ, ಯಾವ ವಿಚಾರಗಳನ್ನೂ ಇಲ್ಲಿ ಮುಚ್ಚಿಡೋಕೆ ಸಾಧ್ಯವೇ ಇಲ್ಲ. ಹೀಗಾಗಿ, ಸ್ಪರ್ಧಿಗಳು ಮಾತಿನ ಬಗ್ಗೆ, ತಮ್ಮ ಆ್ಯಕ್ಷನ್ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಲ್ಲವಾದಲ್ಲಿ ಟ್ರೋಲ್ ಆಗಬೇಕಾಗುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಅಡಲ್ಟ್ ಟಾಕ್ ನಡೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

ವಿನಯ್, ಕಾರ್ತಿಕ್, ನಮ್ರತಾ ಹಾಗೂ ಅವಿನಾಶ್  ಅಡುಗೆ ಮನೆಯ ಕಟ್ಟೆಯ​ ಮೇಲೆ ಕುಳಿತಿದ್ದರು. ಈ ವೇಳೆ ಊಟದ ಬಗ್ಗೆ ಚರ್ಚೆ ಬಂತು. ‘ಮಶ್ರೂಮ್ ಘೀ ರೋಸ್ಟ್ ಚೆನ್ನಾಗಿರುತ್ತದೆ’ ಎಂದರು ಕಾರ್ತಿಕ್. ಇದನ್ನು ಕೇಳಿ ನಮ್ರತಾ ಬಾಯಿ ಚಪ್ಪರಿಸಿದರು. ‘ಯಾವುದಾದರೂ ತಿಂಡಿಯ ಹೆಸರು ಹೇಳಿದರೆ ನಮ್ರತಾ ಎಕ್ಸ್​ಪ್ರೆಶನ್ ಬಹಳ ವಿಚಿತ್ರವಾಗಿ ಇರುತ್ತದೆ. ನಮ್ರತಾ ನೀವು ಹೋಗಿ ಬಿಡಿ’ ಎಂದರು ಕಾರ್ತಿಕ್. ಈ ಮಾತನ್ನು ಕೇಳಿ ನಮ್ರತಾ ಸಿಟ್ಟಾದರು.

ನಮ್ರತಾ ಅವರನ್ನು ಸಮಾಧಾನ ಮಾಡೋಕೆ ಬಂದರು ಕಾರ್ತಿಕ್. ಆಗ ನಮ್ರತಾ ಅವರು ಕಾರ್ತಿಕ್​ಗೆ ಕಚಗುಳಿ ಇಡೋಕೆ ಪ್ರಯತ್ನಿಸಿದರು. ಆದರೆ, ಅವರಿಗೆ ಕಚಗುಳಿ ಆಗಲೇ ಇಲ್ಲ. ‘ಕಚಗುಳಿ ಆಗುತ್ತದೆ ಎಂದರೆ ಅವರು ಗುಡ್ ಇನ್​_ _. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ’ ಎಂದರು ವಿನಯ್. ‘ಗುಡ್ ಇನ್ ವಾಟ್..’ ಎಂದರು ಪವಿ. ಇದಕ್ಕೆ ನಮ್ರತಾ, ‘ಗುಡ್ ಇನ್ ಬೆಡ್’ ಎಂದರು. ಆಗ ಕಾರ್ತಿಕ್ ಅವರು, ‘ನನಗೆ ತುಂಬಾನೇ ಕಚಗುಳಿ ಆಗುತ್ತದೆ’ ಎಂದು ನಕ್ಕರು.

ಇದನ್ನೂ ಓದಿ: ಕಿಸ್ ಕೊಟ್ಟು ನಾಚಿಕೆ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ

ಈ ರೀತಿಯ ಅಡಲ್ಟ್ ಟಾಕ್​ಗಳು ಈ ಮೊದಲು ಕೂಡ ನಡೆದಿವೆ. ಈ ರೀತಿ ಲಿಮಿಟ್​ನಲ್ಲಿದ್ದು ಮಾತನಾಡಿದರೆ ಯಾರೂ ಪ್ರಶ್ನೆ ಮಾಡುವುದಿಲ್ಲ. ಕೆಲವೊಮ್ಮೆ ಇದು ಮಿತಿ ಮೀರಿ ಹೋಗುತ್ತದೆ. ಆಗ ಪ್ರಶ್ನೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲಾಗುತ್ತದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:08 am, Thu, 30 November 23