Namratha Gowda: ಕಿಸ್ ಕೊಟ್ಟು ನಾಚಿಕೆ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ

‘ಬಿಗ್ ಬಾಸ್ ಕನ್ನಡ ಸೀಸನ್ 10’ ಸಾಕಷ್ಟು ಗಮನ ಸೆಳೆಯುತ್ತಿದೆ. ನಮ್ರತಾ ಗೌಡ ಆಟದ ಮೂಲಕ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ನಮ್ರತಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಕಿಸ್ ಕೊಟ್ಟಿದ್ದಾರೆ. ಅದು ಯಾರಿಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

Namratha Gowda: ಕಿಸ್ ಕೊಟ್ಟು ನಾಚಿಕೆ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ
ನಮ್ರತಾ ಗೌಡ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 30, 2023 | 8:00 AM

ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್​ನಲ್ಲಿ ಈ ವಾರ ಎಲ್ಲರ ಗಮನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ವಿನಯ್ ಹಾಗೂ ಸ್ನೇಹಿತ್​ನಿಂದ ಅವರು ದೂರ ಉಳಿದು ತಮ್ನನ್ನು ತಾವು ಸಾಬೀತು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ವಾರ ಅವರು ನಾಮಿನೇಟ್ ಆಗಿದ್ದು, ಇದರಿಂದ ಬಚಾವ್ ಆಗಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಈಗ ನಮ್ರತಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಕಿಸ್ ಕೊಟ್ಟಿದ್ದಾರೆ. ಅದು ಯಾರಿಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್​ನಲ್ಲಿ ಈ ವಾರ ನಮ್ರತಾ ಗೌಡ ಅವರು ಕ್ಯಾಪ್ಟನ್ಸಿ ಟಾಸ್ಕ್​​ನಿಂದ ಹೊರಗೆ ಇರಬೇಕು ಎನ್ನುವ ನಿರ್ಧಾರವನ್ನು ಡ್ರೋನ್ ಪ್ರತಾಪ್ ಘೋಷಿಸಿದರು. ಇದಾದ ಬಳಿಕ ನಮ್ರತಾ ಸಾಕಷ್ಟು ಅತ್ತರು. ‘ಪ್ರತಾಪ್ ಮೋಸ ಮಾಡಿದ್ದಾನೆ’ ಎಂದು ಕಣ್ಣೀರು ಹಾಕಿದರು. ಮರುದಿನ ನಮ್ರತಾ ಗೌಡ ಹಳೆಯದನ್ನು ಮರೆತಿದ್ದಾರೆ. ಎಲ್ಲರ ಜೊತೆ ಬೆರೆಯಲು ಪ್ರಯತ್ನಿಸುತ್ತಿದ್ದಾರೆ.

ನಮ್ರತಾ ಕ್ಯಾಮೆರಾ ಬಳಿ ಹೋದರು. ಆಗ ಕ್ಯಾಮೆರಾ ಹಿಂದೆ ತಿರುಗಿತ್ತು. ‘ಇಲ್ಲಿ ನೋಡು. ನಾನು ಇನ್ನು ಅಳೋದಿಲ್ಲ’ ಎಂದು ನಮ್ರತಾ ಕ್ಯಾಮೆರಾಗೆ ಹೇಳಿದರು. ಆದರೆ, ಕ್ಯಾಮೆರಾ ಹಿಂದಿರುಗಲೇ ಇಲ್ಲ. ಆ ಬಳಿಕ ಕ್ಯಾಮೆರಾ ಹಿಂಭಾಗಕ್ಕೆ ಕಿಸ್ ಕೊಟ್ಟರು. ತಕ್ಷಣ ಕ್ಯಾಮೆರಾ ಹಿಂದಕ್ಕೆ ತಿರುಗಿತು. ‘ಅಯ್ಯೋ ನನಗೆ ನಾಚಿಕೆ ಆಗೋಯ್ತು’ ಎಂದರು ನಮ್ರತಾ ಓಡಿ ಹೋದರು. ಆ ಬಳಿಕ ಕ್ಯಾಮೆರಾ ಲೆನ್ಸ್​​ಗೂ ಕಿಸ್ ಕೊಟ್ಟರು.

ಈ ವಾರ ನಮ್ರತಾ ಗೌಡ ಅವರು ಪ್ರತಾಪ್ ಟೀಂ ಸೇರಿದ್ದಾರೆ. ಅವರು ಉತ್ತಮವಾಗಿ ಆಟ ಆಡಬೇಕಾದ ಅನಿವಾರ್ಯತೆ ಇದೆ. ಈ ವಾರ ನಾಮಿನೇಟ್ ಆದವರ ಸಾಲಿನಲ್ಲಿ ನಮ್ರತಾ ಕೂಡ ಇದ್ದಾರೆ. ಸ್ನೇಹಿತ್ ಅಥವಾ ನಮ್ರತಾ ಈ ವಾರ ಎಲಿಮಿನೇಟ್ ಆಗಬಹುದು ಎಂದು ಅನೇಕರು ಊಹಿಸಿದ್ದಾರೆ. ಯಾರು ಉಳಿದುಕೊಳ್ಳುತ್ತಾರೆ, ಯಾರು ಔಟ್ ಆಗುತ್ತಾರೆ ಎನ್ನುವುದಕ್ಕೆ ವೀಕೆಂಡ್​ವರೆಗೆ ಕಾಯಬೇಕು.

ಇದನ್ನೂ ಓದಿ: ಅವಳಿ ಮಕ್ಕಳು ಹೊಟ್ಟೆಯಲ್ಲಿ ಇರುವಾಗಲೇ ಅಪಘಾತ; ಕರಾಳ ಘಟನೆ ನೆನೆದ ಬಿಗ್ ಬಾಸ್ ವಿನ್ನರ್

ಬಿಗ್ ಬಾಸ್ ಕನ್ನಡ 10ನೇ ಸೀಸನ್​ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:43 am, Thu, 30 November 23

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ