ಮದುವೆ, ಪತ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ ವರ್ತೂರು ಸಂತೋಷ್

Bigg Boss: ವರ್ತೂರು ಸಂತೋಷ್​ರ ಮದುವೆ ವಿಷಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಇದೀಗ ಬಿಗ್​ಬಾಸ್​ ಮನೆಯಲ್ಲಿ ಕೊನೆಗೂ ತಮ್ಮ ಮದುವೆ ಬಗ್ಗೆ ವರ್ತೂರು ಸಂತೋಷ್ ಮಾತನಾಡಿದ್ದಾರೆ.

ಮದುವೆ, ಪತ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ ವರ್ತೂರು ಸಂತೋಷ್
Follow us
ಮಂಜುನಾಥ ಸಿ.
|

Updated on:Nov 30, 2023 | 11:25 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳ ದೈಹಿಕ, ಮಾನಸಿಕ ಕ್ಷಮತೆಯ ಪರೀಕ್ಷೆ ನಡೆಯುತ್ತದೆ. ಟಾಸ್ಕ್​ಗಳಲ್ಲಿ ಗೆಲ್ಲಲು ಸ್ಪರ್ಧಿಗಳು ಒಬ್ಬರ ಮೇಲೊಬ್ಬರು ಯುದ್ಧಕ್ಕೆ ಇಳಿದಂತೆ ವರ್ತಿಸುತ್ತಾರೆ, ಕೆಲವೊಮ್ಮೆ ನೈತಿಕತೆಯ ಎಲ್ಲಯನ್ನೂ ಮೀರುತ್ತಾರೆ. ಆದರೆ ಇದೆಲ್ಲದರ ಜೊತೆಗೆ ಬಿಗ್​ಬಾಸ್ ಮನೆ ಸ್ಪರ್ಧಿಗಳ ನೋವು-ನಲಿವುಗಳಿಗೂ ಕನ್ನಡಿ ಹಿಡಿಯುತ್ತದೆ. ಅವರ ಜೀವನದ ನೋವು-ನಲಿವುಗಳನ್ನು ಹೇಳಿಕೊಳ್ಳಲು, ಹೇಳಿ ಹಗುರಾಗಲು ಅವಕಾಶ ಒದಗಿಸುತ್ತದೆ. ಅಂಥಹದ್ದೇ ಅವಕಾಶವನ್ನು ಗುರುವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್, ಸ್ಪರ್ಧಿಗಳಿಗೆ ನೀಡಿದ್ದರು.

ಸ್ಪರ್ಧಿಗಳೆಲ್ಲರೂ ತಮ್ಮ ಜೀವನದಲ್ಲಿ ನಡೆದ ನೋವಿನ ಸಂಗತಿಯನ್ನು ಹಂಚಿಕೊಳ್ಳಬೇಕಿತ್ತು, ಸಂಗೀತಾ, ಸ್ನೇಹಿತ್, ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್, ವರ್ತೂರು ಸಂತೋಶ್ ಅವರುಗಳು ತಮ್ಮ-ತಮ್ಮ ನೋವಿನ ಕತೆಗಳನ್ನು ಹಂಚಿಕೊಂಡರು. ವರ್ತೂರು ಸಂತೋಷ್ ಮೊದಲ ಬಾರಿಗೆ ಬಿಗ್​ಬಾಸ್ ಮನೆಯಲ್ಲಿ ತಮ್ಮ ಖಾಸಗಿ ಜೀವನದ ಬಗ್ಗೆ ವಿಶೇಷವಾಗಿ ತಮ್ಮ ಮದುವೆಯ ಬಗ್ಗೆ ಮಾತನಾಡಿದರು.

‘‘ನಮ್ಮದು ಕೂಡು ಕುಟುಂಬ ನಾಲ್ಕು ವರ್ಷ ವಯಸ್ಸಿನಲ್ಲಿಯೇ ನಾನು ತಂದೆ ಕಳೆದುಕೊಂಡೆ, ಆದರೆ ನನ್ನ ದೊಡ್ಡಪ್ಪಂದಿರು ಯಾವುದಕ್ಕೂ ಕೊರತೆ ಮಾಡದೆ ನನ್ನನ್ನು ಬೆಳೆಸಿದರು. ಡಿಗ್ರಿ ಓದುತ್ತಿರುವಾಗಲೇ ನನಗೆ ಮನೆ ಜವಾಬ್ದಾರಿ ಬಂತು. ನನಗೆ ಮದುವೆ ಮಾಡುವ ವಯಸ್ಸು ಬಂದಾಗ ನನ್ನ ದೊಡ್ಡಪ್ಪನಿಗೆ ಮಾತು ಕೊಟ್ಟೆ, ನೀವು ತೋರಿಸಿದ ಹುಡುಗಿಗೆ ತಾಳಿ ಕಟ್ಟುತ್ತೇನೆಂದು’’ ಎಂದರು ವರ್ತೂರು ಸಂತೋಷ್.

ಇದನ್ನೂ ಓದಿ:ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್

‘‘ಒಂದು ಕಡೆ ಹೆಣ್ಣು ನೋಡಲು ಹೋದರು ಅವರು ಬಣ್ಣದ ಮಾತುಗಳಿಂದ ಮರಳು ಮಾಡಿದರು. ಒಳಗೆ ಝೀರೋ ಆದರೆ ಮರಳು ಮಾಡಿದರು. ಯಾರೂ ಸಹ ಹೆಣ್ಣು ನೋಡುವಾಗ ಅಕ್ಕ-ಪಕ್ಕದ ಮನೆಯವರನ್ನು ವಿಚಾರಿಸಿ. ದೊಡ್ಡಪ್ಪನಿಗೆ ಕೊಟ್ಟ ಮಾತಿನಂತೆ ಆ ಹುಡುಗಿಯನ್ನು ಮದುವೆಯಾದೆ. ಆದರೆ ಆಕೆ ನನ್ನ ತಾಯಿಯನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದರು, ನಾನು ಕಷ್ಟ ಪಟ್ಟು ಸಂಪಾದಿಸಿದ ಜನರನ್ನು ಬಿಟ್ಟು ಬರಬೇಕು ಎಂದಳು ಆದರೆ ಅದು ನನ್ನಿಂದ ಸಾಧ್ಯವಿಲ್ಲ’’ ಎಂದರು ವರ್ತೂರು ಸಂತೋಷ್.

‘‘ಒಮ್ಮೆ ಅವರ ಮನೆಗೆ ಹೋದೆ ಅವರ ಅಪ್ಪ ಇರಲಿಲ್ಲ, ನಾನು ಹೇಳಿದ ಷರತ್ತುಗಳಿಗೆ ಒಪ್ಪಿ ಬರುವುದಾದರೆ ನಿನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ ಎಂದೆ ಆದರೆ ಆಕೆ ಅವರಪ್ಪ ಬರಲಿ ಎಂದರು. ಅವರಪ್ಪ ಬಂದು ಮನೆಯಿಂದ ಹೊರಗೆ ಹೋಗು ಎಂದರು, ನನಗೆ ಅಂದು ಅವಮಾನ ಮಾಡಿದರು’’ ಎಂದ ವರ್ತೂರು ಸಂತೋಷ್, ತಾವು ಈಗ ಮತ್ತೊಬ್ಬರೊಟ್ಟಿಗೆ ಸಂಪರ್ಕದಲ್ಲಿರುವುದಾಗಿಯೂ ಸಣ್ಣದಾಗಿ ಸೂಚನೆ ನೀಡಿದರು. ನಾನು ಈಗ ಮಾತನಾಡುತ್ತಿರುವುದನ್ನು ಆ ‘ಝೀರೋ’ ಕುಟುಂಬವೂ ನೋಡುತ್ತಿರುತ್ತದೆ, ನೋಡಲಿ ನಾನು ಅವರಿಗೆ ಉತ್ತರ ಕೊಡುತ್ತೇನೆ ಎಂದರು.

Published On - 11:23 pm, Thu, 30 November 23