ಶಾರುಖ್ ಖಾನ್ ಪುತ್ರಿಯ ಬಗ್ಗೆ ಕರಣ್ ಜೋಹರ್ ಮಾತು

The Archies: ಹೊಸ ತಲೆಮಾರಿನ ಸ್ಟಾರ್ ಕಿಡ್​ಗಳ ಸಿನಿಮಾ ‘ದಿ ಆರ್ಚೀಸ್’ ನ ವಿಶೇಷ ಶೋ ವೀಕ್ಷಿಸಿದ ಕರಣ್ ಜೋಹರ್, ಶಾರುಖ್ ಖಾನ್ ಪುತ್ರಿ ಸುಹಾನಾ ಬಗ್ಗೆ ಹೇಳಿದ್ದು ಹೀಗೆ.

ಶಾರುಖ್ ಖಾನ್ ಪುತ್ರಿಯ ಬಗ್ಗೆ ಕರಣ್ ಜೋಹರ್ ಮಾತು
ಸುಹಾನಾ-ಕರಣ್
Follow us
ಮಂಜುನಾಥ ಸಿ.
|

Updated on: Dec 06, 2023 | 4:10 PM

ಶಾರುಖ್ ಖಾನ್ (Shah Rukh Khan) ಪುತ್ರಿ ಸುಹಾನಾ ಖಾನ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸುಹಾನಾ ನಟಿಸಿರುವ ‘ದಿ ಆರ್ಚೀಸ್’ ಸಿನಿಮಾ ಡಿಸೆಂಬರ್ 7ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀಮಿಯರ್ ಶೋ ಡಿಸೆಂಬರ್ 5ರ ರಾತ್ರಿ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಪ್ರೀಮಿಯರ್​ ಶೋಗೆ ಶಾರುಖ್ ಖಾನ್ ಕುಟುಂಬ, ಅಮಿತಾಬ್ ಬಚ್ಚನ್ ಕುಟುಂಬ ಸೇರಿದಂತೆ ಇನ್ನೂ ಹಲವು ಬಾಲಿವುಡ್ ಗಣ್ಯರು ಭಾಗವಹಿಸಿದ್ದರು. ಪ್ರೀಮಿಯರ್​ನಲ್ಲಿ ಭಾಗವಹಿಸಿದ್ದ ಕರಣ್ ಜೋಹರ್ ಸಿನಿಮಾ ನೋಡಿ, ವಿಶೇಷವಾಗಿ ಸುಹಾನಾ ಖಾನ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

‘‘ಹವಾಮಾನ ಬದಲಾವಣೆ ಬಗ್ಗೆ ಅಲ್ಪಸಂಖ್ಯಾತರ ಬಗ್ಗೆ ದನಿ ಮತ್ತು ಅನ್ಯಾಯದ ವಿರುದ್ಧ ದಂಗೆ ಏಳುವ ವಿಷಯಗಳನ್ನು ಬಹಳ ಚೆನ್ನಾಗಿ ಆರ್ಚಿಸ್ ಸಿನಿಮಾದಲ್ಲಿ ತೋರಿಸಿದ್ದಾರೆ. ಸಿನಿಮಾದಲ್ಲಿ ಬಳಸಲಾಗಿರುವ ಜಾಜ್ ಮಾದರಿಯ ಸಂಗೀತವನ್ನು ಮೈ ಝುಮ್ಮೆನಿಸುತ್ತದೆ. ಸಿನಿಮಾ ನೋಡುತ್ತಾ-ನೋಡುತ್ತಾ ನಾನು ಚಿಕ್ಕವನಾದಂತೆ ಭಾಸವಾಯ್ತು, ಸಿನಿಮಾದ ಆ ಏಳು ಮಂದಿಯ ಜೊತೆಗೆ ಸ್ನೇಹ ಬೆಳೆಸಬೇಕು ಅನ್ನಿಸಿತು. ಸಿನಿಮಾ ನೋಡುತ್ತಾ ನೋಡುತ್ತಾ ನಾನು ಸಮಯದಲ್ಲಿ ಹಿಂದೆ ಹೋದಂತೆನಿಸಿತು. ನನ್ನ ಬಾಲ್ಯದ, ಯೌವ್ವನದ ದಿನಗಳು ನೆನಪಾದವು’’ ಎಂದರು.

ಸಿನಿಮಾದಲ್ಲಿ ನಟಿಸಿರುವ ಸ್ಟಾರ್ ಕಿಡ್​ಗಳ ಬಗ್ಗೆ ಮಾತನಾಡಿದ ಕರಣ್ ‘‘ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ ಅದ್ಭುತವಾಗಿ ನಟಿಸಿದ್ದಾರೆ. ಆತನನ್ನು ತೆರೆಯ ಮೇಲೆ ನೋಡಿದ ಕೂಡಲೇ ಇಷ್ಟವಾಗಿ ಹೋದ. ಸಂಕೀರ್ಣವಾದ ಪಾತ್ರದಲ್ಲಿ ಸಹ ಆತನ ನಟನೆ ಇಷ್ಟವಾಗುತ್ತದೆ. ಮಿಹಿರ್ ಅಹುಜಾ ಕಾಮಿಕ್ ಟೈಮಿಂಗ್ ಅತ್ಯದ್ಭುತ. ಖುಷಿ ಕಪೂರ್ ನಟನೆಯಂತೂ ನನ್ನ ಹೃದಯವನ್ನೇ ಒಡೆಯುವಂತೆ ಮಾಡಿತು’’ ಎಂದಿದ್ದಾರೆ.

ಇದನ್ನೂ ಓದಿ:‘ಡಂಕಿ’ ಎಂದರೇನು? ಅರ್ಥ ತಿಳಿಸಿದ ಶಾರುಖ್ ಖಾನ್

ಇನ್ನು ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್​ ಬಗ್ಗೆ ಮಾತನಾಡಿದ ಕರಣ್, ‘‘ವೆರೊನಿಕಾ ಪಾತ್ರದಲ್ಲಿ ನಟಿಸಿರುವ ಸುಹಾನಾ ನಟನೆ ಅತ್ಯದ್ಭುತ. ಹಲವು ಭಾವನೆಗಳನ್ನು ಅವರು ಸುಲಭವಾಗಿ ಹೊಮ್ಮಿಸಿದ್ದಾರೆ. ಅನುಭವಿ ನಟಿಯಂತೆ ಸುಹಾನಾ ನಟಿಸಿದ್ದಾರೆ. ಡ್ಯಾನ್ಸ್ ಇರಲಿ, ಕಾಮಿಡಿ, ಸ್ಟೈಲ್, ನಟನೆ, ಭಾವುಕ ಸನ್ನಿವೇಶ ಎಲ್ಲದರಲ್ಲೂ ಸುಹಾನಾ ಅದ್ಭುತವಾಗಿ ನಟಿಸಿದ್ದಾರೆ. ಆಕೆ ಬಾಲಿವುಡ್​ಗೆ ಬಂದಿರುವುದು ಸುಮ್ಮನೆ ಇರಲು ಅಲ್ಲ, ಬಾಲಿವುಡ್ ಅನ್ನು ಆಳಲು’’ ಎಂದಿದ್ದಾರೆ ಕರಣ್ ಜೋಹರ್.

‘ದಿ ಆರ್ಚೀಸ್’ ಸಿನಿಮಾವು ‘ಆರ್ಚೀಸ್’ ಕಾಮಿಕ್ ಪುಸ್ತಕವನ್ನು ಆಧರಿಸಿ ಮಾಡಿರುವ ಸಿನಿಮಾ ಆಗಿದೆ. ಸಿನಿಮಾವನ್ನು ಬಾಲಿವುಡ್​ನ ಪ್ರತಿಭಾವಂತ ನಿರ್ದೇಶಕಿ ಝೋಯಾ ಅಖ್ತರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್​ನ ಸ್ಟಾರ್ ನಟರ ಮಕ್ಕಳು, ಮೊಮ್ಮಕಳು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ, ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಬೋನಿ ಕಪೂರ್-ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 7ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ನೇರವಾಗಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್