Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಂಕಿ’ ಎಂದರೇನು? ಅರ್ಥ ತಿಳಿಸಿದ ಶಾರುಖ್ ಖಾನ್

Dunki: ಈ ವರ್ಷ ಈಗಾಗಲೇ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಶಾರುಖ್ ಖಾನ್ ‘ಡಂಕಿ’ ಸಿನಿಮಾ ಮೂಲಕ ಮತ್ತೊಂದು ಬ್ಲಾಕ್​ ಬಸ್ಟರ್ ಸಿನಿಮಾ ನೀಡಲು ತಯಾರಾಗಿದ್ದಾರೆ. ಅಂದಹಾಗೆ ‘ಡಂಕಿ’ ಎಂದರೆ ಅರ್ಥವೇನು ಎಂದು ಅವರೇ ವಿವರಿಸಿದ್ದಾರೆ.

‘ಡಂಕಿ’ ಎಂದರೇನು? ಅರ್ಥ ತಿಳಿಸಿದ ಶಾರುಖ್ ಖಾನ್
ಡಂಕಿ ಸಿನಿಮಾ
Follow us
ಮಂಜುನಾಥ ಸಿ.
|

Updated on: Nov 24, 2023 | 10:02 PM

ಶಾರುಖ್ ಖಾನ್ (Shah Rukh Khan) ಈ ವರ್ಷದಲ್ಲಿ ಈಗಾಗಲೇ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ವರ್ಷಾರಂಭದಲ್ಲಿ ಬಿಡುಗಡೆ ಆದ ‘ಪಠಾಣ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ 1000 ಕೋಟಿಗೂ ಹೆಚ್ಚು ಗಳಿಸಿದೆ. ಅದರ ಬಳಿಕ ಬಿಡುಗಡೆ ಆದ ‘ಜವಾನ್’ ಸಿನಿಮಾ ಸಹ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಶಾರುಖ್ ನಟನೆಯ ಮತ್ತೊಂದು ಸಿನಿಮಾ ‘ಡಂಕಿ’ ಇದೇ ವರ್ಷ ಬಿಡುಗಡೆಗೆ ಸಜ್ಜಾಗಿದ್ದು ಆ ಸಿನಿಮಾ ಸಹ ಬ್ಲಾಕ್ ಬಸ್ಟರ್ ಆಗಲಿದೆ ಎಂದು ಭವಿಷ್ಯ ನುಡಿಯಲಾಗುತ್ತಿದೆ. ಅಂದಹಾಗೆ ‘ಡಂಕಿ’ ಎಂದರೇನು ಎಂದು ಸ್ವತಃ ಶಾರುಖ್ ಖಾನ್ ವಿವರಿಸಿದ್ದಾರೆ.

ಶಾರುಖ್ ಖಾನ್ ತಮಗೆ ಸಮಯ ಸಿಕ್ಕಾಗ ಅವರು ಟ್ವಿಟ್ಟರ್​ನಲ್ಲಿ #AskSRK ಹ್ಯಾಷ್​ಟ್ಯಾಗ್ ಬಳಸಿ ತಮ್ಮ ಅಭಿಮಾನಿಗಳೊಟ್ಟಿಗೆ ಸಂವಾದ ನಡೆಸುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಾರೆ. ಇತ್ತೀಚೆಗೆ ಶಾರುಖ್ ಖಾನ್ ಇದೇ ರೀತಿ ಪ್ರಶ್ನೋತ್ತರ ನಡೆಸಿದ್ದರು ಆಗ ಹಲವರು ಅವರ ಮುಂದಿನ ಸಿನಿಮಾ ‘ಡಂಕಿ’ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಅಭಿಮಾನಿಯೊಬ್ಬ ‘ಡಂಕಿ’ ಅರ್ಥ ಏನೆಂದು ಕೇಳಿದ್ದ. ಇದಕ್ಕೆ ಶಾರುಖ್ ಖಾನ್ ಕಾನೂನು ಬಾಹಿರವಾಗಿ ಯಾವುದೇ ಗಡಿ ಪ್ರವೇಶ ಮಾಡುವುದಕ್ಕೆ ಡಂಕಿ ಎಂದು ಕರೆಯಲಾಗುತ್ತದೆ. ಅದನ್ನು ಡಂಕಿ ಎಂದೇ ಉಚ್ಛರಿಸಲಾಗುತ್ತದೆ. ಆದರೆ ಫಂಕಿ, ಹಂಕಿ, ಅಥವಾ ಮಂಕಿ ಎಂದು ಸಹ ಕೆಲವರು ಉಚ್ಚರಿಸುತ್ತಾರೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.

‘ಡಂಕಿ’ ಸಿನಿಮಾ ಡಿಸೆಂಬರ್ 22ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸೀ ಪನ್ನು, ವಿಕ್ಕಿ ಕೌಶಲ್ ಇನ್ನೂ ಕೆಲವರು ನಟಿಸಿದ್ದಾರೆ. ನಾಲ್ಕು ಜನರ ಗೆಳೆಯರ ಗುಂಪು ಕಾನೂನು ಬಾಹಿರವಾಗಿ ವಿದೇಶಕ್ಕೆ ಹೋಗುವ ಪ್ರಯತ್ನದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಟೀಸರ್ ಹಾಗೂ ಹಾಡು ಈಗಾಗಲೇ ಬಿಡುಗಡೆ ಆಗಿದ್ದು ಗಮನ ಸೆಳೆದಿವೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾ ಹಿಟ್ ಆದ ಬಳಿಕ ‘ಡಂಕಿ’ ಚಿತ್ರದ ಬಗ್ಗೆ ಇರುವ ನಿರೀಕ್ಷೆ ದುಪ್ಪಟ್ಟಾಗಿದೆ.

ಇದನ್ನೂ ಓದಿ:‘ಏಕೆ ಟಾಮ್​ ಕ್ರೂಸ್ ರೀತಿ ಬೈಕ್ ಸ್ಟಂಟ್ಸ್ ಪ್ರಯತ್ನಿಸಬಾರದು?’; ಶಾರುಖ್ ಖಾನ್ ಕೊಟ್ರು ಉತ್ತರ

ಈ ಸಿನಿಮಾಕ್ಕೆ ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದಾರೆ. ‘ಮುನ್ನಾಭಾಯಿ ಎಂಬಿಬಿಎಸ್’, ‘ಲಗೆ ರಹೋ ಮುನ್ನಾಭಾಯಿ’, ‘3 ಇಡಿಯಟ್ಸ್’, ‘ಪಿಕೆ’, ‘ಸಂಜು’ ಅಂಥಹಾ ಐಕಾನಿಕ್ ಸಿನಿಮಾಗಳನ್ನು ನಿರ್ದೇಶಿಸಿರುವುದು ಇದೇ ರಾಜ್​ಕುಮಾರ್ ಹಿರಾನಿ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ. ಸಿನಿಮಾವು ಕ್ರಿಸ್​ಮಸ್ ಹಬ್ಬಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ