Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್​ ದತ್​ಗೆ ಇತ್ತು ಎನ್​ಕೌಂಟರ್ ಭಯ; ಸಿನಿಮೀಯ ಶೈಲಿಯಲ್ಲೇ ಕೊಲ್ಲುತ್ತಾರೆ ಎಂದುಕೊಂಡಿದ್ರು..

ಸಂಜಯ್​ ದತ್​ಗೆ ಮನೆಯ ಊಟ ಸಿಗುತ್ತಿತ್ತು ಎನ್ನುವ ಆರೋಪವನ್ನು ಕೆಲವರು ಮಾಡಿದ್ದರು. ಈ ಬಗ್ಗೆ ಮೀರನ್ ಮಾತನಾಡಿದ್ದಾರೆ. ‘ಇದು ವಿವಾದವಲ್ಲ, ಸತ್ಯ. ಸಂಜಯ್ ದತ್ ಆರ್ಥರ್ ರೋಡ್ ಜೈಲಿನಲ್ಲಿದ್ದಾಗ ಮನೆಯ ಆಹಾರ ನೀಡುವುದನ್ನು ಅನುಮತಿಸಲಾಯಿತು. ಯರವಾಡ ಜೈಲಿಗೆ ಸ್ಥಳಾಂತರಿಸಿದ ಬಳಿಕ ಜೈಲಿನ ಊಟವನ್ನೇ ನೀಡಲಾಯಿತು’ ಎಂದು ಅವರು ಹೇಳಿದ್ದಾರೆ.

ಸಂಜಯ್​ ದತ್​ಗೆ ಇತ್ತು ಎನ್​ಕೌಂಟರ್ ಭಯ; ಸಿನಿಮೀಯ ಶೈಲಿಯಲ್ಲೇ ಕೊಲ್ಲುತ್ತಾರೆ ಎಂದುಕೊಂಡಿದ್ರು..
ಸಂಜಯ್​ ದತ್​
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Nov 24, 2023 | 4:58 PM

ಕ್ರೂರ ಅಪರಾಧ ಮಾಡಿದವರನ್ನು ಎನ್​ಕೌಂಟರ್ (Encounter) ಮಾಡಿ ಹತ್ಯೆ ಮಾಡಿದ ಅನೇಕ ಘಟನೆಗಳು ನಡೆದಿವೆ. ಸಿನಿಮಾಗಳಲ್ಲಿಯೂ ಇದನ್ನು ತೋರಿಸಲಾಗಿದೆ. ನಟ ಸಂಜಯ್ ದತ್ (Sanjay Dutt) ಅವರಿಗೂ ಇದೇ ರೀತಿಯ ಭಯ ಇತ್ತಂತೆ. 1993ರಲ್ಲಿ ನಡೆದ ಮುಂಬೈ ಬ್ಲಾಸ್ಟ್ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಸಂಜಯ್ ದತ್ ಜೈಲು ಸೇರಿದ್ದರು. ಈ ವೇಳೆ ಅವರ ಮನಸ್ಸು ಸಾಕಷ್ಟು ತುಮುಲಗಳನ್ನು ಹೊಂದಿತ್ತು. ಈ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಒಬ್ಬರು ಮಾತನಾಡಿದ್ದಾರೆ. ಸಂಜಯ್ ದತ್ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಮೀರನ್ ಚಡ್ಡಾ ಬೋರ್ವಂಕರ್ ಅವರು ಜೈಲಿನ (Arthur Road Jail) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಆಗಿದ್ದರು. ಅವರು ಸಂಜಯ್ ದತ್​ ಅವರನ್ನು ಜೈಲಿನಲ್ಲಿ ಹಲವು ಬಾರಿ ಭೇಟಿ ಮಾಡಿದ್ದರು. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ನಾನು ಪಂಜಾಬ್‌ನಿಂದ ಬಂದವಳು ಎಂದು ಕಂಡುಹಿಡಿಯಲು ಸಂಜಯ್ ದತ್ ತಮ್ಮ ಮೂಲಗಳನ್ನು ಬಳಸಿದ್ದರು. ನಾವು ಅವರಿಗೆ ಜೈಲಿನಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದೇವೆ ಎಂದು ಮಾಧ್ಯಮಗಳು ಆರೋಪಿಸಿದ್ದವು. ಆದರೆ ನಾವು ಹಾಗೆ ಮಾಡಿರಲಿಲ್ಲ. ಅವರ ನಡುವಳಿಕೆ ಜೈಲಿನಲ್ಲಿ ಉತ್ತಮವಾಗಿತ್ತು. ಅವರು ಹಾಗೆ ಇಲ್ಲದೇ ಇದ್ದಿದ್ದರೆ ನಾವು ಅವರಿಗೆ ಪರೋಲ್​ ನೀಡುತ್ತಿರಲಿಲ್ಲ’ ಎಂದಿದ್ದಾರೆ ಮೀರನ್.

ಇದನ್ನೂ ಓದಿ: ಸಂಜಯ್​ ದತ್​ ಹೊಸ ಸಿನಿಮಾ ‘ಮಾಸ್ಟರ್​ ಬ್ಲಾಸರ್​’; ಸಾಥ್​ ನೀಡಿದ ಟೈಗರ್​ ಶ್ರಾಫ್​

ಸಂಜಯ್​ ದತ್​ಗೆ ಮನೆಯ ಊಟ ಸಿಗುತ್ತಿತ್ತು ಎನ್ನುವ ಆರೋಪವನ್ನು ಕೆಲವರು ಮಾಡಿದ್ದರು. ಈ ಬಗ್ಗೆ ಮೀರನ್ ಅವರು ಮಾತನಾಡಿದ್ದಾರೆ. ‘ಇದು ವಿವಾದವಲ್ಲ, ಸತ್ಯ. ದೊಡ್ಡ ರಾಜಕಾರಣಿಗಳು, ಬಾಲಿವುಡ್ ಹೀರೋಗಳು ಮತ್ತು ಹೀರೋಯಿನ್‌ಗಳು ಜೈಲು ಸೇರಿದಾಗ ಅವರನ್ನು ವಿಐಪಿಗಳು ಎಂದು ಭಾವಿಸಲಾಗುತ್ತದೆ. ಕಾನೂನಿನ ಬಗ್ಗೆ ಅವರಿಗೆ ಜ್ಞಾನ ಇರುವುದಿಲ್ಲ. ಸಂಜಯ್ ದತ್ ಆರ್ಥರ್ ರೋಡ್ ಜೈಲಿನಲ್ಲಿದ್ದಾಗ ಮನೆಯ ಆಹಾರವನ್ನು ನೀಡುವುದನ್ನು ಅನುಮತಿಸಲಾಯಿತು. ಅವರು ಅಪರಾಧಿ ಎಂದು ಆದೇಶ ಬಂದ ಬಳಿಕ ಯರವಾಡ ಜೈಲಿಗೆ ಸ್ಥಳಾಂತರಿಸಿದೆವು. ಆ ಬಳಿಕ ಅವರಿಗೆ ಜೈಲಿನ ಊಟವನ್ನೇ ನೀಡಲಾಯಿತು’ ಎಂದು ಮೀರನ್ ಹೇಳಿದ್ದಾರೆ.

ಇದನ್ನೂ ಓದಿ: ವಿದೇಶಕ್ಕೆ ತೆರಳಿದ್ದ ಸಂಜಯ್ ದತ್​ಗೆ ಗಾಯ? ಅಭಿಮಾನಿಗಳಲ್ಲಿ ಮೂಡಿದೆ ಆತಂಕ

ಸಂಜಯ್ ದತ್ ಅವರನ್ನು ಆರ್ಥರ್ ಜೈಲಿನಿಂದ ಯೆರವಾಡ ಜೈಲ್​ಗೆ ಸ್ಥಳಾಂತರಿಸಬೇಕಿತ್ತು. ಈ ವೇಳೆ ತಮ್ಮನ್ನು ಎನ್​ಕೌಂಟರ್ ಮಾಡುವ ಭಯ ಅವರಿಗೆ ಕಾಡುತ್ತಿತ್ತು. ‘ಕರೆದುಕೊಂಡು ಹೋಗುವ ದಾರಿಯಲ್ಲಿ ಎನ್‌ಕೌಂಟರ್‌ ಮಾಡಿ ತಮ್ಮನ್ನು ಸಾಯಿಸಬಹುದು ಎಂದು ಸಂಜಯ್ ದತ್ ಹೆದರಿದ್ದರು. ಅವರ ಭಯ ಎಷ್ಟು ನಿಜವಾಗಿತ್ತು ಎಂದರೆ ಅವರು ಬೆವರಲು ಪ್ರಾರಂಭಿಸಿದರು. ಜ್ವರ ಬಂತು ಎಂದು ದೂರಿದರು. ಸಂಜಯ್ ದತ್ ಆರ್ಥರ್ ರೋಡ್ ಜೈಲಿನಿಂದ ಸ್ಥಳಾಂತರಗೊಳ್ಳುವ ಸುದ್ದಿ ಸೋರಿಕೆಯಾಯಿತು. ಜೈಲಿನ ಹೊರಗೆ ಜನ ನೆರೆದರು. ನಾವು ವರ್ಗಾವಣೆಯನ್ನು ಮುಂದೂಡಲು ನಿರ್ಧರಿಸಿದ್ದೆವು. ಅವರಿಗೆ ಎನ್​ ಕೌಂಟರ್ ಬಗ್ಗೆ ಇದ್ದ ತಪ್ಪು ಕಲ್ಪನೆಯನ್ನು ದೂರ ಮಾಡಿದೆವು. ನಂತರವೇ ನಾವು ಅವರನ್ನು ಸದ್ದಿಲ್ಲದೆ ಮತ್ತು ಯಶಸ್ವಿಯಾಗಿ ಸ್ಥಳಾಂತರಿಸಲು ಸಾಧ್ಯವಾಯಿತು’ ಎಂದಿದ್ದಾರೆ ಮೀರನ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್