AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್​ ದತ್​ ಹೊಸ ಸಿನಿಮಾ ‘ಮಾಸ್ಟರ್​ ಬ್ಲಾಸರ್​’; ಸಾಥ್​ ನೀಡಿದ ಟೈಗರ್​ ಶ್ರಾಫ್​

ಬಾಲಿವುಡ್​ನಲ್ಲಿ ಸಂಜಯ್​ ದತ್​ ಮತ್ತು ಟೈಗರ್​ ಶ್ರಾಫ್​ ಅವರು ಆ್ಯಕ್ಷನ್​ ಹೀರೋಗಳಾಗಿ ಗುರುತಿಸಿಕೊಂಡಿದ್ದಾರೆ. ಬೇರೆ ಬೇರೆ ತಲೆಮಾರಿಗೆ ಸೇರಿದ ಈ ನಟರು ತಮ್ಮದೇ ರೀತಿಯ ಛಾಪು ಮೂಡಿಸಿದ್ದಾರೆ. ಈಗ ಇವರಿಬ್ಬರು ‘ಮಾಸ್ಟರ್​ ಬ್ಲಾಸ್ಟರ್​’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಸೃಷ್ಟಿಯಾಗಿದೆ.

ಸಂಜಯ್​ ದತ್​ ಹೊಸ ಸಿನಿಮಾ ‘ಮಾಸ್ಟರ್​ ಬ್ಲಾಸರ್​’; ಸಾಥ್​ ನೀಡಿದ ಟೈಗರ್​ ಶ್ರಾಫ್​
ಸಂಜಯ್​ ದತ್​, ಟೈಗರ್​ ಶ್ರಾಫ್​
Follow us
ಮದನ್​ ಕುಮಾರ್​
|

Updated on:Sep 22, 2023 | 7:43 PM

ನಟ ಸಂಜಯ್​ ದತ್​ (Sanjay Dutt) ಅವರಿಗೆ ಬೇಡಿಕೆ ಹೆಚ್ಚಿದೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ವಿಲನ್​ ಪಾತ್ರ ಮಾಡಿದ ಬಳಿಕ ಅವರ ಸೆಕೆಂಡ್​ ಇನ್ನಿಂಗ್ಸ್​ ಶುರುವಾಯಿತು ಎಂದೇ ಹೇಳಬಹುದು. ಈಗಂತೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅವರಿಗೆ ಒಳ್ಳೊಳ್ಳೆಯ ಪಾತ್ರಗಳನ್ನು ನೀಡಲಾಗುತ್ತಿದೆ. ಮುಖ್ಯವಾಗಿ ವಿಲನ್​ ಪಾತ್ರಗಳಿಗೆ ಸಂಜಯ್ ದತ್​ ಅವರನ್ನು ಬೆಸ್ಟ್​ ಆಯ್ಕೆ ಎಂದು ಪರಿಗಣಿಸಲಾಗುತ್ತಿದೆ. ದಳಪತಿ ವಿಜಯ್​ ನಟನೆಯ ‘ಲಿಯೋ’, ಕನ್ನಡದ ‘ಕೆಡಿ’ ಮುಂತಾದ ಸಿನಿಮಾಗಳಲ್ಲಿ ಅವರು ಖಳನಾಯಕನ ಪಾತ್ರ ಮಾಡುತ್ತಿದ್ದಾರೆ. ಇದರ ಜೊತೆಗೆ ಬಾಲಿವುಡ್​ನಲ್ಲಿ ಅವರು ಹೀರೋ ಆಗಿ ಅನೇಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಸಂಜಯ್​ ದತ್​ ನಟನೆಯ ಹೊಸ ಹಿಂದಿ ಸಿನಿಮಾ ಅನೌನ್ಸ್​ ಆಗಿದೆ. ‘ಮಾಸ್ಟರ್​ ಬ್ಲಾಸ್ಟರ್​’ (Master Blaster) ಎಂಬುದು ಈ ಸಿನಿಮಾದ ಶೀರ್ಷಿಕೆ. ಈ ಚಿತ್ರದಲ್ಲಿ ಸಂಜಯ್​ ದತ್​ ಜೊತೆಗೆ ಟೈಗರ್​ ಶ್ರಾಫ್​ (Tiger Shroff) ಕೂಡ ನಟಿಸಲಿದ್ದಾರೆ ಎಂಬುದು ವಿಶೇಷ.

ಬಾಲಿವುಡ್​ನಲ್ಲಿ ಸಂಜಯ್​ ದತ್​ ಮತ್ತು ಟೈಗರ್​ ಶ್ರಾಫ್​ ಅವರು ಆ್ಯಕ್ಷನ್​ ಹೀರೋಗಳಾಗಿ ಗುರುತಿಸಿಕೊಂಡಿದ್ದಾರೆ. ಬೇರೆ ಬೇರೆ ತಲೆಮಾರಿಗೆ ಸೇರಿದ ಈ ನಟರು ತಮ್ಮದೇ ರೀತಿಯ ಛಾಪು ಮೂಡಿಸಿದ್ದಾರೆ. ಈಗ ಇವರಿಬ್ಬರು ಒಂದೇ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿರುವುದರಿಂದ ಅಭಿಮಾನಿಗಳಲ್ಲಿ ಕೌತುಕ ಮೂಡಿದೆ. ‘ಮಾಸ್ಟರ್​ ಬ್ಲಾಸ್ಟರ್​’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯಗಳು ಇರಲಿವೆ. ಅದಕ್ಕಾಗಿ ಚಿತ್ರೀಕರಣಕ್ಕೂ ಮುನ್ನ ಸಖತ್​ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಖ್ಯಾತ ನಿರ್ಮಾಪಕ ಫಿರೋಜ್​ ನಾಡಿಯದ್ವಾಲಾ ಅವರು ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ.

ಇದನ್ನೂ ಓದಿ: Sanjay Dutt: ‘ಪ್ರೇಮ್​ ಬೆಸ್ಟ್​ ಡೈರೆಕ್ಟರ್​’: ಚಾಮುಂಡಿ ಬೆಟ್ಟದಲ್ಲಿ ಹೊಗಳಿದ ಸಂಜಯ್​ ದತ್​

‘ಜವಾನ್​’, ‘ಪಠಾಣ್​’, ‘ಗದರ್​ 2’ ಸಿನಿಮಾಗಳು ಭಾರತದ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿವೆ. ಹಾಗಾಗಿ ಮುಂಬರುವ ಆ್ಯಕ್ಷನ್​ ಸಿನಿಮಾಗಳು ಆ ಗುಣಮಟ್ಟದಲ್ಲಿ ಇರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ‘ಮಾಸ್ಟರ್​ ಬ್ಲಾಸ್ಟರ್​’ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ: Sanjay Dutt: ಕೆಡಿ ಸಿನಿಮಾ ಸೆಟ್​ನಲ್ಲಿ ಸಂಜಯ್ ದತ್​ಗೆ ಗಾಯ, ನಡೆದಿದ್ದೇನು?

ಹಾಂಗ್​ ಕಾಂಗ್​ ಮುಂತಾದ ಕಡೆಗಳಲ್ಲಿ ‘ಮಾಸ್ಟರ್​ ಬ್ಲಾಸ್ಟರ್​’ ಸಿನಿಮಾದ ಶೂಟಿಂಗ್​ ನಡೆಯಲಿದೆ. ಲಾಸ್​ ಏಂಜಲಿಸ್​ನಿಂದ ಬಂದ ಘಟಾನುಘಟಿ ತಂತ್ರಜ್ಞರು ಈ ಸಿನಿಮಾದ ತೆರೆ ಹಿಂದೆ ಕೆಲಸ ಮಾಡಲಿದ್ದಾರೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಈವರೆಗೂ ನೋಡಿರದ ಅನೇಕ ಹೊಸ ತಂತ್ರಗಳನ್ನು ಈ ಸಿನಿಮಾದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಎಲ್ಲ ಕಾರಣದಿಂದ ಸಂಜಯ್​ ದತ್​ ಮತ್ತು ಟೈಗರ್​ ಶ್ರಾಫ್​ ಅಭಿಮಾನಿಗಳು ಈ ಸಿನಿಮಾದ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:34 pm, Fri, 22 September 23