ವಿದೇಶಕ್ಕೆ ತೆರಳಿದ್ದ ಸಂಜಯ್ ದತ್ಗೆ ಗಾಯ? ಅಭಿಮಾನಿಗಳಲ್ಲಿ ಮೂಡಿದೆ ಆತಂಕ
ಸಂಜಯ್ ದತ್ ಅವರು ತೆಲುಗಿನ ‘ಡಬಲ್ ಇಸ್ಮಾರ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಬಿಗ್ ಬುಲ್ ಹೆಸರಿನ ವಿಲನ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಥೈಲ್ಯಾಂಡ್ನಲ್ಲಿ ನಡೆಯುತ್ತಿದೆ. ಈ ವೇಳೆ ಅವರಿಗೆ ಗಾಯ ಆಗಿದೆ ಎಂದು ವರದಿ ಆಗಿದೆ. ಈ ಸುದ್ದಿ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ.
ನಟ ಸಂಜಯ್ ದತ್ (Sanjay Dutt) ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ವಿಲನ್ ಆಗಿ, ಹೀರೋ ಆಗಿ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ‘ಕೆಜಿಎಫ್ 2’ (KGF Chapter 2) ಚಿತ್ರದಲ್ಲಿ ಅಧೀರನ ಪಾತ್ರ ಮಾಡುವ ಮೂಲಕ ಅವರು ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು. ಹೀಗಾಗಿ, ಅವರ ಬಗ್ಗೆ ಅಪ್ಡೇಟ್ ತಿಳಿದುಕೊಳ್ಳೋಕೆ ಫ್ಯಾನ್ಸ್ ಕಾದಿರುತ್ತಾರೆ. ಈಗ ಅವರು ವಿದೇಶದಲ್ಲಿ ಗಾಯಗೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಇದನ್ನು ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅವರ ಬೇಗ ಚೇತರಿಸಿಕೊಳ್ಳಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.
ಸಂಜಯ್ ದತ್ ಅವರು ತೆಲುಗಿನ ‘ಡಬಲ್ ಇಸ್ಮಾರ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಬಿಗ್ ಬುಲ್ ಹೆಸರಿನ ವಿಲನ್ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಸಂಜಯ್ ದತ್ ಬರ್ತ್ಡೇ ಪ್ರಯುಕ್ತ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಈ ಚಿತ್ರದ ಶೂಟಿಂಗ್ ಥೈಲ್ಯಾಂಡ್ನಲ್ಲಿ ನಡೆಯುತ್ತಿದೆ. ಈ ವೇಳೆ ಅವರಿಗೆ ಗಾಯ ಆಗಿದೆ ಎಂದು ವರದಿ ಆಗಿದೆ. ಈ ಸುದ್ದಿ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ.
ಖಡ್ಗದಲ್ಲಿ ಫೈಟ್ ಮಾಡುವ ದೃಶ್ಯವನ್ನು ಶೂಟ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಖಡ್ಗ ಅವರಿಗೆ ತಾಗಿ ಗಾಯ ಆಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಗಾಯಕ್ಕೆ ಹೊಲಿಗೆ ಹಾಕಿಸಿಕೊಂಡು ಅವರು ಮರಳಿ ಸೆಟ್ಗೆ ಆಗಮಿಸಿದ್ದಾರೆ. ಬಳಿಕ ತಮ್ಮ ಭಾಗದ ಶೂಟಿಂಗ್ನ ಅವರು ಪೂರ್ಣಗೊಳಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: Sanjay Dutt: ಸಂಜಯ್ ದತ್ ಈಗ ಬಿಗ್ ಬುಲ್; ‘ಡಬಲ್ ಇಸ್ಮಾರ್ಟ್’ಗೆ ಖಡಕ್ ವಿಲನ್
ಸಂಜಯ್ ದತ್ ಗಾಯಗೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದ್ದು ಇದೇ ಮೊದಲೇನು ಅಲ್ಲ. ಇತ್ತೀಚೆಗೆ ಅವರು ‘ಕೆಡಿ’ ಸಿನಿಮಾದ ಶೂಟ್ನಲ್ಲಿ ಪೆಟ್ಟು ಮಾಡಿಕೊಂಡರು ಎಂದು ಹೇಳಲಾಗಿತ್ತು. ಆಗಲೂ ಅಭಿಮಾನಿಗಳಿಗೆ ಆತಂಕ ಆಗಿತ್ತು. ಈ ಕಾರಣದಿಂದಲೇ ಸಂಜಯ್ ದತ್ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದರು. ‘ನನಗೆ ಗಾಯ ಆಗಿದೆ ಎಂಬ ಸುದ್ದಿ ಆಧಾರ ರಹಿತ’ ಎಂದು ಹೇಳಿದ್ದರು. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ಅವರಿ ತೆರೆ ಎಳೆದಿದ್ದರು. ಸದ್ಯ ಈಗ ಹಬ್ಬಿರುವ ವದಂತಿಗೆ ಅವರ ಕಡೆಯಿಂದಲೇ ಸ್ಪಷ್ಟನೆ ಬರಬೇಕಿದೆ.
‘ಸಂಜಯ್ ದತ್ ಬರ್ತ್ಡೇ ದಿನ ಮಾಡಲಾದ ಪೋಸ್ಟ್’
It takes me immense pride to be working with the director of the masses #PuriJagannadh ji and the young energetic Ustaad @ramsayz ?
Glad to be Playing the #BIGBULL in this sci-fi mass entertainer #DoubleISMART
Excited to be teaming up with this super-talented team and Looking… pic.twitter.com/SrIAJv6yy1
— Sanjay Dutt (@duttsanjay) July 29, 2023
‘ಡಬಲ್ ಇಸ್ಮಾರ್ಟ್’ ಚಿತ್ರಕ್ಕೆ ರಾಮ್ ಪೋತಿನೇನಿ ಹೀರೋ. ಪೂರಿ ಜಗನ್ನಾಥ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:02 am, Tue, 15 August 23