ಈ ಫೋಟೋದಲ್ಲಿರೋ ಸ್ಟಾರ್ ನಟಿಯ ಮಗಳು ಯಾರೆಂದು ಗುರುತಿಸುತ್ತೀರಾ?
ಸ್ಟಾರ್ ಕುಟುಂಬದ ಕುಡಿಯ ಫೋಟೋ ವೈರಲ್ ಆಗಿದೆ. ಇವಳು ಸ್ಟಾರ್ ದಂಪತಿಯ ಮಗಳು. ಸದ್ಯ ವಿದ್ಯಾಭ್ಯಾಸದಲ್ಲಿ ಅವಳು ಬ್ಯುಸಿ ಆಗಿದ್ದಾಳೆ. ಆಕೆಯ ವಿಡಿಯೋ ವೈರಲ್ ಆಗಿದೆ. ಸ್ಕೂಲ್ ಡ್ರೆಸ್ನಲ್ಲಿ ಈಕೆ ಮಿಂಚಿದ್ದಾಳೆ. ಈಕೆ ಯಾರು ಎಂದು ಗುರುತಿಸಿ ಎಂದು ಅನೇಕರು ಬರೆದುಕೊಂಡಿದ್ದಾರೆ.
ಸೆಲೆಬ್ರಿಟಿಗಳಷ್ಟೇ ಬೇಡಿಕೆ ಸೆಲೆಬ್ರಿಟಿಗಳ ಮಕ್ಕಳಿಗೂ ಇರುತ್ತದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ತೆಗೆದರೆ ಸಾಕು ಅಭಿಮಾನಿಗಳು ಅವರನ್ನು ಫಾಲೋ ಮಾಡೋಕೆ ಆರಂಭಿಸುತ್ತಾರೆ. ಈಗ ಸ್ಟಾರ್ ಕುಟುಂಬದ ಕುಡಿಯ ಫೋಟೋ ವೈರಲ್ ಆಗಿದೆ. ಇವಳು ಸ್ಟಾರ್ ದಂಪತಿಯ ಮಗಳು. ಸದ್ಯ ವಿದ್ಯಾಭ್ಯಾಸದಲ್ಲಿ ಅವಳು ಬ್ಯುಸಿ ಆಗಿದ್ದಾಳೆ. ಆಕೆಯ ವಿಡಿಯೋ ವೈರಲ್ ಆಗಿದೆ. ಸ್ಕೂಲ್ ಡ್ರೆಸ್ನಲ್ಲಿ ಈಕೆ ಮಿಂಚಿದ್ದಾಳೆ. ಅಷ್ಟಕ್ಕೂ ಯಾರು ಅವಳು? ಆರಾಧ್ಯಾ ರೈ ಬಚ್ಚನ್ (Aradhya Rai Bachchan).
ಆರಾಧ್ಯಾ ರೈ ಬಚ್ಚನ್ಗೆ ಈಗ 12 ವರ್ಷ ವಯಸ್ಸು. 2011ರಲ್ಲಿ ಆರಾಧ್ಯಾ ಜನಿಸಿದಳು. ತಾಯಿ ಜೊತೆ ಆರಾಧ್ಯಾ ಹೆಚ್ಚು ಕಾಣಿಸಿಕೊಳ್ಳುತ್ತಾಳೆ. ಅವಳನ್ನು ಸ್ಕೂಲ್ ಡ್ರೆಸ್ನಲ್ಲಿ ಯಾರೂ ನೋಡಿಲ್ಲ. ಇತ್ತೀಚೆಗೆ ಅವಳ ಶಾಲೆಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಆರಾಧ್ಯ ಭಾಗಿ ಆಗಿದ್ದಳು. ಈ ಸಂದರ್ಭದಲ್ಲಿ ತೆಗೆದ ವಿಡಿಯೋ ವೈರಲ್ ಆಗುತ್ತಿದೆ. ಆರಾಧ್ಯಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ. ಆರಾಧ್ಯಾ ಜೊತೆ ಆಕೆಯ ಗೆಳೆತಿಯರೂ ಕಾಣಿಸಿಕೊಂಡಿದ್ದಾರೆ.
ಆರಾಧ್ಯಳನ್ನು ನೋಡಿದ ಅನೇಕರಿಗೆ ಐಶ್ವರ್ಯಾ ರೈ ಅವರ ಬಾಲ್ಯದ ಫೋಟೋ ನೆನಪಾಗಿದೆ. ಐಶ್ವರ್ಯಾ ರೈ ಅವರು ಬಾಲ್ಯದಲ್ಲಿ ಇದೇ ರೀತಿ ಇದ್ದರು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸ್ಟಾರ್ ನಟಿಯ ಮಗಳು ಎನ್ನುವ ಕಾರಣಕ್ಕೆ ಈಗಲೇ ಆರಾಧ್ಯಾ ಎಲ್ಲರ ಗಮನ ಸೆಳೆದಿದ್ದಾಳೆ. ಮುಂದೆ ಚಿತ್ರರಂಗಕ್ಕೆ ಕಾಲಿಡೋದು ಅವಳಿಗೆ ದೊಡ್ಡ ವಿಷಯ ಆಗದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
View this post on Instagram
ಇದನ್ನೂ ಓದಿ: ಪೊಯಿನ್ ಸೆಲ್ವನ್ 2’ಸಿನಿಮಾಗೆ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ಬಚ್ಚನ್ ಸೊಸೆಗೆ ಭಾರಿ ಬೇಡಿಕೆ
ಮಗಳು ಆರಾಧ್ಯ ಜನಿಸಿದ ಬಳಿಕ ಐಶ್ವರ್ಯಾ ಅವರು ಚಿತ್ರರಂಗದಲ್ಲಿ ಕಡಿಮೆ ಆ್ಯಕ್ಟೀವ್ ಆಗಿದ್ದಾರೆ. ಕುಟುಂಬದ ಕಡೆ ಅವರು ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ಪೊನ್ನಿಯಿನ್ ಸೆಲ್ವನ್’ ಹಾಗೂ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ಗಮನ ಸೆಳೆದರು. ಅವರ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಇದಾದ ಬಳಿಕ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ಚಿತ್ರರಂಗದಿಂದ ದೂರವೇ ಇರುತ್ತಾರಾ ಅಥವಾ ಒಳ್ಳೆಯ ಪಾತ್ರ ಬಂದರೆ ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:50 am, Mon, 14 August 23