Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕರ್ನಾಟಕದ ‘ರೂರಲ್ ಸ್ಟಾರ್’ ಅಂಜನ್ ಈಗ ‘ಚೋಳ’; ಆಗಸ್ಟ್ 20ರಂದು ಬರಲಿದೆ ಟೀಸರ್​

ಸುರೇಶ್ ಅವರು ‘ಚೋಳ’ ಸಿನಿಮಾದ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ‘ರೂರಲ್ ಸ್ಟಾರ್’ ಅಂಜನ್ ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ಅವರ ಜೊತೆ ನಾಯಕಿಯರಾಗಿ ದಿಶಾ ಪಾಂಡೆ, ಪ್ರತಿಭಾ ನಟಿಸುತ್ತಿದ್ದಾರೆ. ದಿನೇಶ್ ಮಂಗಳೂರು, ಬಾಲ ರಾಜ್​ವಾಡಿ ಅವರಂತಹ ಅನುಭವಿ ಕಲಾವಿದರು ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಉತ್ತರ ಕರ್ನಾಟಕದ ‘ರೂರಲ್ ಸ್ಟಾರ್’ ಅಂಜನ್ ಈಗ ‘ಚೋಳ’; ಆಗಸ್ಟ್ 20ರಂದು ಬರಲಿದೆ ಟೀಸರ್​
‘ಚೋಳ’ ಸಿನಿಮಾ ಟೀಮ್​
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on:Aug 13, 2023 | 3:42 PM

ನಟ ಅಂಜನ್​ ಅವರು ಈಗ ಸಿನಿಮಾಗೆ ಹೀರೋ ಆಗಿದ್ದಾರೆ. ಯಾರು ಈ ಅಂಜನ್​? ಬರೀ ಅಂಜನ್​ ಎಂದರೆ ತಕ್ಷಣಕ್ಕೆ ಎಲ್ಲರಿಗೂ ತಿಳಿಯುವುದು ಕಷ್ಟ. ಅದರ ಬದಲು ‘ರೂರಲ್​ ಸ್ಟಾರ್​’ ಅಂಜನ್​ (Rural Star Anjan) ಎಂದರೆ ಉತ್ತರ ಕರ್ನಾಟಕದ ಮಂದಿಗೆ ಗುರುತು ಸಿಗುತ್ತದೆ. ಉತ್ತರ ಕರ್ನಾಟಕ(Uttara Karnataka) ಭಾಗಗಳಲ್ಲಿ ಸಿನಿಮಾ ಸಾಹಸಗಳನ್ನು ಮಾಡುತ್ತಾ ಖ್ಯಾತಿ ಪಡೆದಿದ್ದಾರೆ ಅಂಜನ್. ಅವರಿಗೆ ಅಲ್ಲಿ ಅಭಿಮಾನಿ ಬಳಗ ಇದೆ. ತಮ್ಮದೇ ಆದಂತಹ ಸೀಮಿತ ಚೌಕಟ್ಟಿನಲ್ಲಿ ಹೆಸರು ಗಳಿಸಿರುವುದು ಅವರ ಹೆಚ್ಚುಗಾರಿಕೆ. ಈಗ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾಗೆ ‘ಚೋಳ’ (Chola Movie) ಎಂದು ಹೆಸರು ಇಡಲಾಗಿದೆ. ಚಿತ್ರದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

‘ಚೋಳ’ ಸಿನಿಮಾ ಮೂಲಕ ಮಾಸ್ ಲುಕ್​ನಲ್ಲಿ ಪ್ರೇಕ್ಷಕರ ಎದುರು ಬರಲು ಅಂಜನ್​ ಅವರು ಸಿದ್ಧವಾಗುತ್ತಿದ್ದಾರೆ. ಈವರೆಗೂ ಸ್ಯಾಂಡಲ್​ವುಡ್​ನಲ್ಲಿ ನಿರ್ಮಾಪಕರಾಗಿ ಸಕ್ರಿಯವಾಗಿದ್ದ ಸುರೇಶ್ ಡಿ.ಎಂ. ಅವರು ಈಗ ‘ಚೋಳ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆಗೆ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಆಗಸ್ಟ್ 20ರಂದು ಪ್ರೇಕ್ಷಕರು ಎದುರು ಟೀಸರ್​ ಅನಾವರಣ ಆಗಲಿದೆ. ‘ಚೋಳ’ ಸಿನಿಮಾದ ಕಹಾನಿ ಏನು? ಈ ಸಿನಿಮಾದ ಶೀರ್ಷಿಕೆ ಕೇಳಿದ ತಕ್ಷಣ ಇದು ಯಾವುದೋ ಐತಿಹಾಸಿಕ ಕಥಾಹಂದರ ಇರುವ ಸಿನಿಮಾ ಎನಿಸುವುದು ಸಹಜ. ಆದರೆ ಇದು ಅಂಥ ಸಿನಿಮಾ ಅಲ್ಲ. ಹೊಸ ಜಮಾನದ ಕಥೆ ‘ಚೋಳ’ ಸಿನಿಮಾದಲ್ಲಿ ಇರಲಿದೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಹೊಸ ತಂಡಗಳು ಬರಬೇಕು, ಉತ್ತರ ಕರ್ನಾಟಕದ ಮಂದಿಗೆ ರಕ್ಷಿತ್ ಮನವಿ

ಸುರೇಶ್ ಡಿ.ಎಂ. ಅವರು ‘ಸೃಷ್ಟಿ ಎಂಟರ್​ಪ್ರೈಸಸ್​​’ ಸಂಸ್ಥೆಯ ಮೂಲಕ ‘ಪ್ರಯಾಣಿಕರ ಗಮನಕ್ಕೆ’, ‘ರಣಹೇಡಿ’ ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿ ಅನುಭವ ಪಡೆದಿದ್ದಾರೆ. ಈಗ ಅವರು ಡಿಫರೆಂಟ್​ ಆದಂತಹ ಒಂದು ಕಥೆಯನ್ನು ಇಟ್ಟುಕೊಂಡು ‘ಚೋಳ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅಂಜನ್​ ಅವರನ್ನು ಹೀರೋ ಆಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಅವರ ಕನಸುಗಳಿಗೆ ನೀರೆರೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ರೈತನಾಗಿ ಅಬ್ಬರಿಸುವ ‘ಗುಳ್ಟು’ ನವೀನ್ ಶಂಕರ್​; ‘ಕ್ಷೇತ್ರಪತಿ’ ಟ್ರೇಲರ್​ ಹೇಗಿದೆ ನೋಡಿದ್ರಾ?

ಅಂಜನ್​ ಅವರು ‘ಯರ್ರಾಬಿರ್ರಿ’ ಶೀರ್ಷಿಕೆಯಲ್ಲಿ ಒಂದು ಸಿನಿಮಾ ಮಾಡಿದ್ದರು. ಅವರ ಪ್ರತಿಭೆಯನ್ನು ಗುರುತಿಸಿದ ನಿರ್ದೇಶಕ ಸುರೇಶ್ ಅವರು ‘ಚೋಳ’ ಚಿತ್ರಕ್ಕೆ ಅಂಜನ್​ರನ್ನು ನಾಯಕರನ್ನಾಗಿಸಿದ್ದಾರೆ. ಲವ್​, ರೌಡಿಸಂ ಮುಂತಾದ ಅಂಶಗಳನ್ನು ಹೊಂದಿರುವ ಕಥೆ ಈ ಸಿನಿಮಾದಲ್ಲಿ ಇರಲಿದೆ ಎಂದು ಅವರು ತಿಳಿಸಿದ್ದಾರೆ. ದಿಶಾ ಪಾಂಡೆ, ಪ್ರತಿಭಾ ಅವರು ನಾಯಕಿಯರಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಿನೇಶ್ ಮಂಗಳೂರು, ಬಾಲ ರಾಜ್​ವಾಡಿ ಅವರು ಖಳನಾಯಕರಾಗಿ ನಟಿಸುತ್ತಿದ್ದಾರೆ. ಮನಮೋಹನ್ ರಾಯ್ ಅವರು ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಜಗಪ್ಪ, ವರ್ಧನ್ ತೀರ್ಥಹಳ್ಳಿ, ಮಿಂಚು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸುರೇಶ್ ಅವರು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯ ಆಗಿದೆ. ಕೆಲವೇ ದೃಶ್ಯಗಳ ಶೂಟಿಂಗ್​ ಮಾತ್ರ ಬಾಕಿ ಇದೆ. ಅದಾದ ಬಳಿಕ ಆಡಿಯೋ ಬಿಡುಗಡೆ ಮಾಡಬೇಕು ಎಂದು ಪ್ಲ್ಯಾನ್​ ಹಾಕಿಕೊಳ್ಳಲಾಗಿದೆ. ಸಂದೀಪ್ ಹೊನ್ನಾಳಿ ಅವರು ‘ಚೋಳ’ ಸಿನಿಮಾಗೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಶಿವಕುಮಾರ್​ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:26 pm, Sun, 13 August 23

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್
ಮಂತ್ರಾಲಯದಲ್ಲಿ 6 ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ ಗುರು ವೈಭವೋತ್ಸವ
ಮಂತ್ರಾಲಯದಲ್ಲಿ 6 ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ ಗುರು ವೈಭವೋತ್ಸವ