ರೈತನಾಗಿ ಅಬ್ಬರಿಸುವ ‘ಗುಳ್ಟು’ ನವೀನ್ ಶಂಕರ್; ‘ಕ್ಷೇತ್ರಪತಿ’ ಟ್ರೇಲರ್ ಹೇಗಿದೆ ನೋಡಿದ್ರಾ?
Kshetrapati Trailer: ಈ ಮೊದಲು ಬಿಡುಗಡೆ ಆದ ಟೀಸರ್ ಮೂಲಕ ‘ಕ್ಷೇತ್ರಪತಿ’ ಸಿನಿಮಾ ಸದ್ದು ಮಾಡಿತ್ತು. ಈಗ ಟ್ರೇಲರ್ ಕೂಡ ಅಬ್ಬರಿಸುತ್ತಿದೆ. ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುವ ಯುವಕನಾಗಿ ನವೀನ್ ಶಂಕರ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಆ್ಯಂಗ್ರಿ ಯಂಗ್ ಮ್ಯಾನ್ ಗೆಟಪ್ ಗಮನ ಸೆಳೆಯುತ್ತಿದೆ.
ನಟ ನವೀನ್ ಶಂಕರ್ (Naveen Shankar) ಅವರು ‘ಗುಳ್ಟು’ ಸಿನಿಮಾ ಮೂಲಕ ಸಖತ್ ಜನಪ್ರಿಯತೆ ಪಡೆದರು. ಆ ಬಳಿಕ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಈ ವರ್ಷ ತೆರೆಕಂಡ ‘ಹೊಂದಿಸಿ ಬರೆಯಿರಿ’, ‘ಹೊಯ್ಸಳ’ ಸಿನಿಮಾಗಳಲ್ಲಿನ ನವೀನ್ ಶಂಕರ್ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈಗ ಮತ್ತೊಂದು ಡಿಫರೆಂಟ್ ಅವತಾರದಲ್ಲಿ ಅಭಿಮಾನಿಗಳ ಎದುರು ಬರಲು ನವೀನ್ ಶಂಕರ್ ಸಜ್ಜಾಗಿದ್ದಾರೆ. ಅವರ ಹೊಸ ಸಿನಿಮಾ ‘ಕ್ಷೇತ್ರಪತಿ’ (Kshetrapati) ಆಗಸ್ಟ್ 18ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅವರು ರೈತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ‘ಕ್ಷೇತ್ರಪತಿ’ ಟ್ರೇಲರ್ (Kshetrapati Trailer) ಬಿಡುಗಡೆ ಆಗಿದ್ದು, ಸಿನಿಪ್ರಿಯರಲ್ಲಿ ಸಖತ್ ಕೌತುಕ ಮೂಡಿಸಿದೆ. ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ಈ ಟ್ರೇಲರ್ ಮೂಡಿಬಂದಿದೆ.
ಈ ಮೊದಲು ಬಿಡುಗಡೆ ಆದ ಟೀಸರ್ ಮೂಲಕ ‘ಕ್ಷೇತ್ರಪತಿ’ ಸಿನಿಮಾ ಸದ್ದು ಮಾಡಿತ್ತು. ಈಗ ಟ್ರೇಲರ್ ಕೂಡ ಅಬ್ಬರಿಸುತ್ತಿದೆ. ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುವ ಯುವಕನಾಗಿ ನವೀನ್ ಶಂಕರ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಆ್ಯಂಗ್ರಿ ಯಂಗ್ ಮ್ಯಾನ್ ಗೆಟಪ್ ಗಮನ ಸೆಳೆಯುತ್ತಿದೆ. ಟ್ರೇಲರ್ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ನವೀನ್ ಶಂಕರ್ ಡೈಲಾಗ್ ಹೊಡೆದಿದ್ದಾರೆ. ಅವರ ವೃತ್ತಿಜೀವನದಲ್ಲಿ ಈ ಪಾತ್ರ ಮತ್ತು ಸಿನಿಮಾ ತುಂಬ ಡಿಫರೆಂಟ್ ಆಗಿರಲಿದೆ.
‘ಕ್ಷೇತ್ರಪತಿ’ ಸಿನಿಮಾಗೆ ಶ್ರೀಕಾಂತ್ ಕಟಗಿ ಅವರು ನಿರ್ದೇಶನ ಮಾಡಿದ್ದಾರೆ. ನವೀಶ್ ಶಂಕರ್ ಅವರ ಜೊತೆ ‘ಕೆಜಿಎಫ್’ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಅಚ್ಯುತ್ ಕುಮಾರ್ ರಾಹುಲ್ ಐನಾಪುರ್, ಕೃಷ್ಣ ಹೆಬ್ಬಾಳೆ, ನಾಟ್ಯ ರಂಗ, ಶೈಲಶ್ರೀ, ಹರ್ಷ ಅರ್ಜುನ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ರವಿ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಟ್ರೇಲರ್ನಲ್ಲಿ ಹಿನ್ನೆಲೆ ಸಂಗೀತ ಹೈಲೈಟ್ ಆಗಿದೆ. ಇತ್ತೀಚೆಗೆ ಬಿಡುಗಡೆ ಆದ ‘ಪಲ್ಲಕ್ಕಿ..’ ಸಾಂಗ್ ಜನಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ: ‘ಗುಳ್ಟು’ ಹೀರೋ-ನಿರ್ದೇಶಕರ ಕಾಂಬಿನೇಷನ್ನಲ್ಲಿ ಬರಲಿದೆ ಮತ್ತೊಂದು ಸಿನಿಮಾ; ಹೆಚ್ಚಿದೆ ನಿರೀಕ್ಷೆ
ನವೀನ್ ಶಂಕರ್ ಅವರ ಅಭಿಮಾನಿಗಳು ‘ಕ್ಷೇತ್ರಪತಿ’ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನವೀನ್ ಶಂಕರ್ ಅವರ ಪಾಲಿಗೂ ಈ ಚಿತ್ರ ಬಹಳ ಸ್ಪೆಷಲ್ ಆಗಿದೆ. ‘ಗುಳ್ಟು’ ಯಶಸ್ಸಿನ ಬಳಿಕ ತಾವು ಕೇಳಿದ ಬೆಸ್ಟ್ ಕಥೆಗಳಲ್ಲಿ ಇದೂ ಒಂದು ಎಂದು ಅವರು ಹೇಳಿದ್ದಾರೆ. ನವೀನ್ ಶಂಕರ್ ಅವರು ಉತ್ತರ ಕರ್ನಾಟಕದವರಾಗಿದ್ದು, ಈ ಸಿನಿಮಾ ಕೂಡ ಆ ಭಾಗದ ಕಥೆ ಆದ್ದರಿಂದ ಬಹಳ ಖುಷಿಯಿಂದ ನಟಿಸಿದ್ದಾರೆ. ರೈತಾಪಿ ಕುಟುಂಬದ ಬಸವ ಎಂಬ ಹುಡುಗನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಸಿನಿಮಾ ಅಬ್ಬರಿಸುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.