AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೀತಸಾಹಿತಿ ಕವಿರಾಜ್​ ಜನ್ಮದಿನ: ದೊಡ್ಡ ಪಾರ್ಟಿ ಬೇಡ, ಬೈಟೂ ಟೀ ಸಾಕು ಅಂತಿದೆ ‘ಭೀಮ’ ತಂಡ

ಅನೇಕ ಸ್ಟಾರ್​ ನಟರ ಸಿನಿಮಾಗಳಿಗೆ ಕವಿರಾಜ್​ ಅವರು ಸಾಂಗ್​ ಬರೆದು ಸೈ ಎನಿಸಿಕೊಂಡಿದ್ದಾರೆ. ದುನಿಯಾ ವಿಜಯ್​ ಮತ್ತು ಕವಿರಾಜ್​ ಅವರದ್ದು ಹಿಟ್​ ಜೋಡಿ. ‘ಭೀಮ’ ಸಿನಿಮಾದಲ್ಲೂ ಅವರ ಕಾಂಬಿನೇಷನ್​ ಇರುವುದರಿಂದ ನಿರೀಕ್ಷೆ ಹೆಚ್ಚಿದೆ.

ಗೀತಸಾಹಿತಿ ಕವಿರಾಜ್​ ಜನ್ಮದಿನ: ದೊಡ್ಡ ಪಾರ್ಟಿ ಬೇಡ, ಬೈಟೂ ಟೀ ಸಾಕು ಅಂತಿದೆ ‘ಭೀಮ’ ತಂಡ
‘ಭೀಮ’ ಸಿನಿಮಾ ತಂಡದ ಜೊತೆ ಕವಿರಾಜ್​
ಮದನ್​ ಕುಮಾರ್​
|

Updated on: Aug 11, 2023 | 6:47 PM

Share

ಕನ್ನಡ ಚಿತ್ರರಂಗದಲ್ಲಿ ಗೀತಸಾಹಿತಿಯಾಗಿ, ನಿರ್ದೇಶಕನಾಗಿ ಕವಿರಾಜ್​ (Kavi Raj) ಅವರು ಗುರುತಿಸಿಕೊಂಡಿದ್ದಾರೆ. ಅವರ ಲೇಖನಿಯಿಂದ ನೂರಾರು ಸೂಪರ್​ ಹಿಟ್​ ಗೀತೆಗಳು ಮೂಡಿಬಂದಿವೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರು ಇಂದಿಗೂ ಬಹುಬೇಡಿಕೆಯ ಲಿರಿಸಿಸ್ಟ್​ ಆಗಿ ಮಿಂಚುತ್ತಿದ್ದಾರೆ. ಇಂದು (ಆಗಸ್ಟ್​ 11) ಅವರಿಗೆ ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅನೇಕ ಸಿನಿಮಾಗಳಿಗೆ ಕವಿರಾಜ್​ ಅವರು ಸಾಹಿತ್ಯ ಬರೆಯುತ್ತಿದ್ದಾರೆ. ಆ ಪೈಕಿ ‘ಭೀಮ’ ಸಿನಿಮಾ (Bheema Movie) ಮೇಲೆ ವಿಶೇಷವಾದ ನಿರೀಕ್ಷೆ ಇದೆ. ದುನಿಯಾ ವಿಜಯ್​ (Duniya Vijay) ನಟನೆಯ ಈ ಸಿನಿಮಾ ತಂಡದಿಂದ ಇತ್ತೀಚೆಗಷ್ಟೇ ಒಂದು ಸುದ್ದಿ ಹೊರಬಿದ್ದಿದೆ. ‘ಬೇಡ ದೊಡ್ಡ ದೊಡ್ಡ ಪಾರ್ಟಿ, ಕುಡಿಸು ನೀ ಸಾಕು ಬೈಟೂ ಟೀ..’ ಎಂಬ ಸ್ಪೆಷಲ್​ ಸಾಂಗ್​ ಸಿದ್ಧವಾಗುತ್ತಿದೆ.

ಅನೇಕ ಸ್ಟಾರ್​ ನಟರ ಸಿನಿಮಾಗಳಿಗೆ ಕವಿರಾಜ್​ ಅವರು ಸಾಂಗ್​ ಬರೆದು ಸೈ ಎನಿಸಿಕೊಂಡಿದ್ದಾರೆ. ದುನಿಯಾ ವಿಜಯ್​ ಮತ್ತು ಕವಿರಾಜ್​ ಅವರದ್ದು ಹಿಟ್​ ಜೋಡಿ. ಈ ಹಿಂದೆ ದುನಿಯಾ ವಿಜಯ್​ ನಟನೆಯ ‘ಜಾನಿ ಮೇರ ನಾಮ್​ ಪ್ರೀತಿ ಮೇರ ಕಾಮ್​’ ಸಿನಿಮಾಗೆ ಕವಿರಾಜ್​ ಅವರು ಸಾಂಗ್​ ಬರೆದಿದ್ದರು. ‘ಊರಿಗೊಬ್ಳೆ ಪದ್ಮಾವತಿ..’ ಹಾಡು ಸೂಪರ್​ ಹಿಟ್​ ಆಗಿತ್ತು. ಆ ಗೀತೆಯಲ್ಲಿ ರಮ್ಯಾ ಅವರು ಡ್ಯಾನ್ಸ್​ ಮಾಡಿದ್ದರು. ಈಗ ‘ಭೀಮ’ ಸಿನಿಮಾದಲ್ಲಿ ಕವಿರಾಜ್ ಬರೆದಿರುವ ‘ಬೇಡ ದೊಡ್ಡ ದೊಡ್ಡ ಪಾರ್ಟಿ, ಕುಡಿಸು ನೀ ಸಾಕು ಬೈಟೂ ಟೀ..’ ಹಾಡು ಯಾವ ರೀತಿ ಮೂಡಿಬಂದಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

‘ಭೀಮ’ ಸಿನಿಮಾಗೆ ಚರಣ್​ ರಾಜ್​ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ದುನಿಯಾ ವಿಜಯ್​ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಸಲಗ’ ಚಿತ್ರದಲ್ಲೂ ಚರಣ್ ರಾಜ್​ ಮತ್ತು ದುನಿಯಾ ವಿಜಯ್​ ಮೋಡಿ ಮಾಡಿದ್ದರು. ಈಗ ಅವರ ಜೊತೆಗೆ ಕವಿರಾಜ್​ ಕಾಂಬಿನೇಷನ್​ ಕೂಡ ಸೇರಿಕೊಂಡಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Duniya Vijay: ಪಕ್ಕಾ ಅಭಿಮಾನಿಗೆ ವಿಶೇಷ ಪ್ರೀತಿ ತೋರಿಸಿದ ನಟ ದುನಿಯಾ ವಿಜಯ್

‘ಭೀಮ’ ಚಿತ್ರತಂಡದ ಬಗ್ಗೆ ಕವಿರಾಜ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಟೀಮ್​ ಜೊತೆ ಫೋಟೋ ಕ್ಲಿಕ್ಕಿಸಿದ ಸಂದರ್ಭ ಯಾವ ರೀತಿ ಇತ್ತು ಎಂಬುದನ್ನು ಅವರು ಕ್ಯಾಪ್ಷನ್​ ಮೂಲಕ ವಿವರಿಸಿದ್ದಾರೆ. ‘ಭೀಮನ ಟೀಂಯಿಂದ ಚರಣ್ ರಾಜ್ ಸಂಗೀತದಲ್ಲಿ ಒಂದು ಖಡಕ್ ಸಾಂಗ್ ಲೋಡಿಂಗ್. ಬೇಡ ಬೇಡವೆಂದರೂ ಛೇರ್ ಮೇಲೆ ನನ್ನ ಕೂರಿಸಿ, ತಾವು ಹಿಂದೆ ನಿಂತು ಒಬ್ಬ ತಂತ್ರಜ್ಞನಿಗೆ ಗೌರವ ನೀಡಿದ್ದು ಹೃದಯವಂತ ವಿಜಯ್ ಸರ್’ ಎಂದು ಕವಿರಾಜ್​ ಬರೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!