Sanjay Dutt: ಸಂಜಯ್ ದತ್ ಈಗ ಬಿಗ್ ಬುಲ್; ‘ಡಬಲ್ ಇಸ್ಮಾರ್ಟ್’ಗೆ ಖಡಕ್ ವಿಲನ್

Double iSmart: ಸಂಜಯ್ ದತ್ ‘ಕೆಜಿಎಫ್ 2’ ಚಿತ್ರದಲ್ಲಿ ಅಧೀರನಾಗಿ ಕಾಣಿಸಿಕೊಂಡರು. ಆ ಬಳಿಕ ದಕ್ಷಿಣದಿಂದ ಅವರಿಗೆ ಹೆಚ್ಚು ಆಫರ್​ಗಳು ಬರುತ್ತಿವೆ. ಒಳ್ಳೆಯ ಪಾತ್ರಗಳು ಸಿಕ್ಕರೆ ಅದನ್ನು ಒಪ್ಪಿ ನಟಿಸುತ್ತಿದ್ದಾರೆ.

Sanjay Dutt: ಸಂಜಯ್ ದತ್ ಈಗ ಬಿಗ್ ಬುಲ್; ‘ಡಬಲ್ ಇಸ್ಮಾರ್ಟ್’ಗೆ ಖಡಕ್ ವಿಲನ್
ಸಂಜಯ್ ದತ್
Follow us
ರಾಜೇಶ್ ದುಗ್ಗುಮನೆ
|

Updated on: Jul 29, 2023 | 12:56 PM

ಸಂಜಯ್ ದತ್ (Sanjay Dutt) ಅವರು ಬಾಲಿವುಡ್​ ಜೊತೆಗೆ ದಕ್ಷಿಣದಲ್ಲೂ ಬ್ಯುಸಿ ಆಗಿದ್ದಾರೆ. ಹೊಸ ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಕನ್ನಡದಲ್ಲಿ ‘ಕೆಡಿ’ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಈಗ ಅವರು ಹೊಸ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ. ಇಂದು (ಜುಲೈ 29) ಸಂಜಯ್ ದತ್ ಅವರ ಜನ್ಮದಿನ. ಆ ಪ್ರಯುಕ್ತ ಅವರ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರ ರಗಡ್ ಅವತಾರ ಎಲ್ಲರ ಗಮನ ಸೆಳೆದಿದೆ.

ರಾಮ್ ಪೋತಿನೇನಿ ಹಾಗೂ ಪುರಿ ಜಗನ್ನಾಥ್ ಅವರ ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ ‘ಇಸ್ಮಾರ್ಟ್ ಶಂಕರ್’ ಚಿತ್ರ ಹಿಟ್ ಆಗಿತ್ತು. ಈಗ ಈ ಜೋಡಿ ‘ಡಬಲ್ ಇಸ್ಮಾರ್ಟ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದೆ. ಇತ್ತೀಚೆಗೆ ಈ ಚಿತ್ರದ ಶೂಟಿಂಗ್ ಹೈದರಾಬಾದ್​​ನಲ್ಲಿ ಆರಂಭ ಆಗಿದೆ. ಈ ಚಿತ್ರಕ್ಕಾಗಿ ರಾಮ್ ಅವರು ಭಿನ್ನ ಅವತಾರ ತಾಳಿದ್ದಾರೆ. ‘ಪುರಿ ಕನೆಕ್ಟ್ಸ್’ ಲಾಂಛನದ ಅಡಿಯಲ್ಲಿ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಈಗ ಸಂಜಯ್ ದತ್ ಎಂಟ್ರಿ ಆಗಿದೆ.

ಸಂಜಯ್ ದತ್ ‘ಕೆಜಿಎಫ್ 2’ ಚಿತ್ರದಲ್ಲಿ ಅಧೀರನಾಗಿ ಕಾಣಿಸಿಕೊಂಡರು. ಆ ಬಳಿಕ ದಕ್ಷಿಣದಿಂದ ಅವರಿಗೆ ಹೆಚ್ಚು ಆಫರ್​ಗಳು ಬರುತ್ತಿವೆ. ಒಳ್ಳೆಯ ಪಾತ್ರಗಳು ಸಿಕ್ಕರೆ ಅದನ್ನು ಒಪ್ಪಿ ನಟಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ದಕ್ಷಿಣದ ಸಿನಿಮಾಗಳಲ್ಲಿ ನಟಿಸುತ್ತಿರುವ ಸಂಜಯ್ ದತ್ ‘ಡಬಲ್ ಇಸ್ಮಾರ್ಟ್’ ಚಿತ್ರದ ಭಾಗವಾಗಿದ್ದಾರೆ. ಸಂಜಯ್ ದತ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ರಿಲೀಸ್ ಮಾಡಿ, ಬರ್ತ್​ಡೇ ಶುಭ ಕೋರಲಾಗಿದೆ.

ಪೋಸ್ಟರ್​ನಲ್ಲಿ ಸಂಜಯ್ ದತ್ ಅವರ ಲುಕ್ ಗಮನ ಸೆಳೆಯುವಂತಿದೆ. ಸ್ಟೈಲಿಶ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಗಾರ್ ಇದೆ. ಬಿಗ್ ಬುಲ್ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಹಿಂದೆಂದೂ ಮಾಡಿರದ ಪಾತ್ರದಲ್ಲಿ ಸಂಜಯ್ ದತ್​ನ ತೋರಿಸಲು ಪುರಿ ಜಗನ್ನಾಥ್ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: 308 ಹುಡುಗಿಯರ ಜೊತೆ ಸಂಜಯ್ ದತ್ ಡೇಟ್; ಬಾಲಿವುಡ್​ನ ಈ ನಟಿಯರ ಜೊತೆಯೂ ಸುತ್ತಾಡಿದ್ದ ನಟ

‘ಡಬಲ್ ಇಸ್ಮಾರ್ಟ್’ ಸಿನಿಮಾಗೆ ಹಾಲಿವುಡ್ ಛಾಯಾಗ್ರಾಹಕರು ಬರಲಿದ್ದಾರೆ. ದೊಡ್ಡ ಬಜೆಟ್​​ನಲ್ಲಿ ಸಿನಿಮಾ ತಯಾರಾಗುತ್ತಿದೆ. 2024ರ ಶಿವರಾತ್ರಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕೇವಲ ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಹಿಂದಿ ಹಾಗೂ‌ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ