ತಿರುಪತಿಗೆ ಸುದೀಪ್ ಭೇಟಿ: ಅಭಿಮಾನಿಗಳ ಸೆಲ್ಫಿಗೆ ಕಿಚ್ಚನ ಸ್ಮೈಲ್

Sudeep: ನಟ ಸುದೀಪ್, ಪತ್ನಿ ಪ್ರಿಯಾ ಹಾಗೂ ಪೋಷಕರೊಟ್ಟಿಗೆ ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ವಿಡಿಯೋ ಇಲ್ಲಿದೆ..

Follow us
ಮಂಜುನಾಥ ಸಿ.
|

Updated on:Jul 29, 2023 | 2:32 PM

ನಟ ಸುದೀಪ್ (Sudeep) ಇತ್ತೀಚೆಗೆ ಸಣ್ಣ ವಿವಾದದಲ್ಲಿ ಸಿಲುಕಿದ್ದರು. ಕೆಲವು ನಿರ್ಮಾಪಕರು ಸುದೀಪ್ ವಿರುದ್ಧ ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದರು. ಚಿತ್ರರಂಗದಲ್ಲಿ (Sandalwood) ದಶಕಗಳ ಕಾಲ ಸೇವೆ ಸಲ್ಲಿಸಿದ ಬಳಿಕವೂ ಈ ಹಣ, ಡೇಟ್ಸ್ ವಿಚಾರದಲ್ಲಿ ಆರೋಪಗಳಿಗೆ ಗುರಿಯಾದ ಬಗ್ಗೆ ಬೇಸರಗೊಂಡಿದ್ದ ಸುದೀಪ್ ಆರೋಪ ಮಾಡಿದ ನಿರ್ಮಾಪಕರ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆ ಬಳಿಕ ಚಿತ್ರರಂಗದ ದಿಗ್ಗಜರ ಮಧ್ಯಸ್ಥಿಕೆಯಿಂದ ವಿವಾದ ಇತ್ಯರ್ಥವಾದಂತಿದೆ.

ಇದೀಗ ನಟ ಸುದೀಪ್ ಪತ್ನಿ ಪ್ರಿಯಾ ಹಾಗೂ ಇತರ ಕೆಲವು ಆಪ್ತರೊಟ್ಟಿಗೆ ಸೇರಿ ಆಂಧ್ರ ಪ್ರದೇಶದ ಧಾರ್ಮಿಕ ಸ್ಥಳ ತಿರುಪತಿಗೆ ಭೇಟಿ ನೀಡಿದ್ದಾರೆ. ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್ ಅವರನ್ನು ಅಭಿಮಾನಿಗಳು ಮುತ್ತಿಕೊಂಡು ಸೆಲ್ಫಿಗಳನ್ನು ತೆಗೆದುಕೊಂಡಿದ್ದಾರೆ. ಸುದೀಪ್ ಸಹ ಎಂದಿನಂತೆ ನಗುಮುಖದಿಂದ ಅಭಿಮಾನಿಗಳೊಟ್ಟಿಗೆ ಸೆಲ್ಫಿಗೆ ಫೋಸು ನೀಡಿದ್ದಾರೆ.

ನಟ ಸುದೀಪ್ ತೆಲುಗು ಚಿತ್ರರಂಗಕ್ಕೂ ಚಿರಪರಿಚಿತವಾಗಿರುವ ನಟ. ತೆಲುಗು ಸಿನಿ ಪ್ರೇಕ್ಷಕರು ಅತ್ಯುತ್ತಮ ಎಂದು ಒಪ್ಪಿರುವ ನಿರ್ದೇಶಕರಲ್ಲಿ ಇಬ್ಬರಾದ ಎಸ್​ಎಸ್ ರಾಜಮೌಳಿ ಹಾಗೂ ರಾಮ್ ಗೋಪಾಲ್ ವರ್ಮಾ ಅವರ ತೆಲುಗು ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ. ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾದಲ್ಲಿ ಸುದೀಪ್ ನಟನೆಯನ್ನು ಯಾವ ಸಿನಿಮಾ ಪ್ರೇಮಿಯೂ ಮರೆಯುವಂತಿಲ್ಲ. ಅಂತೆಯೇ ‘ಬಾಹುಬಲಿ’ ಸಿನಿಮಾದಲ್ಲಿ ಸುದೀಪ್​ರ ಅತಿಥಿ ಪಾತ್ರಕ್ಕೂ ಅದರದ್ದೇ ಆದ ತೂಕವಿದೆ.

ಇದನ್ನೂ ಓದಿ:ಚಿತ್ರರಂಗಕ್ಕೆ ಯಾರಾಗಬೇಕು ನಾಯಕ? ಹಲವರ ಹೆಸರು ಹೇಳಿದ ಶಿವರಾಜ್ ಕುಮಾರ್

ಇನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಕೆಲವಾರು ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ, ವರ್ಮಾರ ಮೆಚ್ಚಿನ ನಟರಲ್ಲಿ ಸುದೀಪ್ ಸಹ ಒಬ್ಬರು. ಆದರೆ ರಾಮ್ ಗೋಪಾಲ್ ವರ್ಮಾರ ‘ರಕ್ತ ಚರಿತ್ರ’, ‘ರಕ್ತ ಚರಿತ್ರ 2’ ಸಿನಿಮಾದಲ್ಲಿನ ಸುದೀಪ್ ಪಾತ್ರಗಳು ಭಾರಿ ಹಿಟ್ ಆಗಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Sat, 29 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ