AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಸುದೀಪ್​ ಅಭಿಮಾನಿಗಳಲ್ಲೂ ನಿರೀಕ್ಷೆ ಮೂಡಿಸಿದ ‘ಬ್ಯಾಂಗ್​’ ಸಿನಿಮಾ; ಅದಕ್ಕೆ ಕಾರಣ ಕಿಚ್ಚನ ಕಂಠ

Shanvi Srivastava New Movie: ಕಿಚ್ಚ ಸುದೀಪ್ ಅವರು ಹಿನ್ನೆಲೆ ಧ್ವನಿ ನೀಡಿರುವುದರಿಂದ ‘ಬ್ಯಾಂಗ್’ ಸಿನಿಮಾ ತಂಡದ ಉತ್ಸಾಹ ಹೆಚ್ಚಾಗಿದೆ. ಶಾನ್ವಿ ಶ್ರೀವಾಸ್ತವ, ರಘು ದೀಕ್ಷಿತ್​ ನಟನೆಯ ಈ ಚಿತ್ರಕ್ಕೆ ಗಣೇಶ್​ ಪರಶುರಾಮ್​ ನಿರ್ದೇಶನ ಮಾಡಿದ್ದಾರೆ.

Kichcha Sudeep: ಸುದೀಪ್​ ಅಭಿಮಾನಿಗಳಲ್ಲೂ ನಿರೀಕ್ಷೆ ಮೂಡಿಸಿದ ‘ಬ್ಯಾಂಗ್​’ ಸಿನಿಮಾ; ಅದಕ್ಕೆ ಕಾರಣ ಕಿಚ್ಚನ ಕಂಠ
ಶಾನ್ವಿ ಶ್ರೀವಾಸ್ತವ, ರಘು ದೀಕ್ಷಿತ್​, ರಿತ್ವಿಕ್​ ಮುರಳೀಧರ್​, ಕಿಚ್ಚ ಸುದೀಪ್​, ಗಣೇಶ್​ ಪರಶುರಾಮ್​
ಮದನ್​ ಕುಮಾರ್​
|

Updated on: Jul 28, 2023 | 3:05 PM

Share

ನಟಿ ಶಾನ್ವಿ ಶ್ರೀವಾಸ್ತವ (Shanvi Srivastava) ಅವರು ಹಲವು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅದಕ್ಕಿಂತಲೂ ಭಿನ್ನವಾದ ಪಾತ್ರದೊಂದಿಗೆ ಜನರ ಎದುರು ಬರಲು ಅವರು ಸಜ್ಜಾಗಿದ್ದಾರೆ. ಶಾನ್ವಿ ಶ್ರೀವಾಸ್ತವ ನಟಿಸಿರುವ ‘ಬ್ಯಾಂಗ್’ ಸಿನಿಮಾದ (Baang Kannada Movie) ರಿಲೀಸ್​ ದಿನಾಂಕ ಹತ್ತಿರ ಆಗುತ್ತಿದೆ. ಈ ಸಿನಿಮಾದಲ್ಲಿ ಡಾರ್ಕ್​ ಕಾಮಿಡಿ ಕಥಾಹಂದರ ಇದೆ. ಈಗಾಗಲೇ ನಿರೀಕ್ಷೆ ಮೂಡಿಸಿರುವ ‘ಬ್ಯಾಂಗ್’ ಸಿನಿಮಾ ಆಗಸ್ಟ್​ 18ರಂದು ತೆರೆಕಾಣಲಿದೆ. ಕಿಚ್ಚ ಸುದೀಪ್​ (Kichcha Sudeep) ಅವರ ಅಭಿಮಾನಿಗಳು ಕೂಡ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ಯಾಕೆಂದರೆ, ಸುದೀಪ್​ ಅವರು ಈ ಸಿನಿಮಾಗೆ ಧ್ವನಿ ನೀಡಿದ್ದಾರೆ. ಜುಲೈ 29ರಂದು ಈ ಸಿನಿಮಾದ ಟ್ರೇಲರ್ ರಿಲೀಸ್​ ಆಗಲಿದೆ.

ಕಿಚ್ಚ ಸುದೀಪ್ ಅವರು ಹಿನ್ನೆಲೆ ಧ್ವನಿ ನೀಡಿರುವುದರಿಂದ ‘ಬ್ಯಾಂಗ್’ ಸಿನಿಮಾ ತಂಡದ ಉತ್ಸಾಹ ಹೆಚ್ಚಾಗಿದೆ. ಈ ಬಗ್ಗೆ ನಿರ್ದೇಶಕ ಗಣೇಶ್​ ಪರಶುರಾಮ್​ ಅವರು ಮಾತನಾಡಿದ್ದಾರೆ. ‘ಸುದೀಪ್ ಅಭಿನಯದ ಸಿನಿಮಾಗಳನ್ನು ನೋಡಿ ಬೆಳೆದವರು ನಾವು. ಅವರ ಚಿತ್ರಗಳನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಿ ಎಂಜಾಯ್​ ಮಾಡುವವರು ನಾವೆಲ್ಲ. ಈಗ ಅವರು ನಮ್ಮ ಸಿನಿಮಾಗೆ ಧ್ವನಿ ನೀಡಿದ್ದಾರೆ. ಅವರನ್ನು ಭೇಟಿ ಮಾಡಿ, ಕೈ ಕುಲುಕಿದಾಗ ನಮ್ಮ ಹಲವು ವರ್ಷಗಳ ಕನಸು ನನಸಾದಂತೆ ಎನಿಸಿತು’ ಎಂದು ಗಣೇಶ್​ ಪರಶುರಾಮ್​ ಹೇಳಿದ್ದಾರೆ.

ಇದನ್ನೂ ಓದಿ: ವಿವಾದ ಬದಿಗಿಟ್ಟು ಶೂಟಿಂಗ್​ಗೆ ರೆಡಿ ಆದ ಕಿಚ್ಚ ಸುದೀಪ್; ‘K46’ ಚಿತ್ರೀಕರಣ ಎಲ್ಲಿ?

ಕಿಚ್ಚ ಸುದೀಪ್​ ಅವರ ಧ್ವನಿಯಿಂದಾಗಿ ಅವರ ಅಭಿಮಾನಿಗಳಿಗೆ ‘ಬ್ಯಾಂಗ್​’ ಸಿನಿಮಾ ಇಷ್ಟ ಆಗುತ್ತದೆ ಎಂಬುದು ಚಿತ್ರತಂಡದವರ ನಂಬಿಕೆ. ಧ್ವನಿ ನೀಡುವ ಮೂಲಕ ತಂಡದ ಬೆನ್ನು ತಟ್ಟಿದ್ದಕ್ಕೆ ‘ಬ್ಯಾಂಗ್​’ ಬಳಗದವರು ಸುದೀಪ್​ಗೆ ಧನ್ಯವಾದ ತಿಳಿಸಿದ್ದಾರೆ. ಪೂಜಾ ವಸಂತ್ ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಶಾನ್ವಿ ಶ್ರೀವಾಸ್ತವ ಮತ್ತು ರಘು ದೀಕ್ಷಿತ್​ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ: Kichcha Sudeep: ‘ನನ್ನ ಒಳ್ಳೆಯತನ ದುರುಪಯೋಗ ಮಾಡಿಕೊಳ್ಳಬೇಡಿ’: ಖಡಕ್​ ಎಚ್ಚರಿಗೆ ನೀಡಿದ ಕಿಚ್ಚ ಸುದೀಪ್

‘ಬ್ಯಾಂಗ್’ ಸಿನಿಮಾದ ಇನ್ನುಳಿದ ಪಾತ್ರಗಳಲ್ಲಿ ಸಾತ್ವಿಕಾ, ಸುನಿಲ್ ಗುಜ್ಜಾರ್, ರಿತ್ವಿಕ್ ಮುರಳೀಧರ್, ನಾಟ್ಯರಂಗ ಮುಂತಾದ ಕಲಾವಿದರು ಇದ್ದಾರೆ. ರಿತ್ವಿಕ್ ಮುರಳೀಧರ್ ಅವರು ನಟನೆ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣದಲ್ಲಿ ಈ ಸಿನಿಮಾ ಮೂಡಿಬಂದಿದೆ. ಆನಂದ್ ಆಡಿಯೋ ಮೂಲಕ ಈ ಸಿನಿಮಾದ ಎರಡು ಹಾಡುಗಳು ರಿಲೀಸ್​ ಆಗಿವೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಬಹುತೇಕ ಮುಗಿದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.