AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಮಿಲನಾ ಹೊಡೆದರೆ ನನ್ನ ಸಿನಿಮಾ ಹಿಟ್ ಆಗುತ್ತೆ: ಡಾರ್ಲಿಂಗ್ ಕೃಷ್ಣ

Kausalya Supraja Rama: ಡಾರ್ಲಿಂಗ್ ಕೃಷ್ಣ ನಟನೆಯ ಕೌಸಲ್ಯ ಸುಪ್ರಜಾ ರಾಮ ಸಿನಿಮಾಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪತ್ನಿ ಮಿಲನಾ ಹೊಡೆದರೆ ನನ್ನ ಸಿನಿಮಾ ಹಿಟ್ ಆಗುತ್ತೆ: ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ
ಮಂಜುನಾಥ ಸಿ.
|

Updated on: Jul 28, 2023 | 10:44 PM

Share

ಡಾರ್ಲಿಂಗ್ ಕೃಷ್ಣ (Darling Krishna), ಬೃಂದಾ ಆಚಾರ್ಯ (Brinda Acharya), ಮಿಲನಾ ನಾಗರಾಜ್ (Milana Nagaraj) ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಇಂದು (ಜುಲೈ 28) ಬಿಡುಗಡೆ ಆಗಿದೆ. ಪವನ್ ಕಲ್ಯಾಣ್​ರ ‘ಬ್ರೋ’ ಸಿನಿಮಾದ ಅಬ್ಬರದ ನಡುವೆಯೂ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರೂ ಸಹ ಸಿನಿಮಾದ ಬಗ್ಗೆ, ಸಿನಿಮಾ ನೀಡುತ್ತಿರುವ ಸಂದೇಶದ ಬಗ್ಗೆ ಖುಷಿ ವ್ಯಕ್ತಪಡಿಸಿರುವುದು ಚಿತ್ರತಂಡದ ಜೋಷ್ ಹೆಚ್ಚಿಸಿದೆ. ಸಿನಿಮಾಕ್ಕೆ ಉತ್ತಮ ಆರಂಭ ಸಿಕ್ಕ ಖುಷಿಯನ್ನು ಡಾರ್ಲಿಂಗ್ ಕೃಷ್ಣ ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

”ಇದು ನನ್ನ ಕರಿಯರ್​ನಲ್ಲಿಯೇ ಬೆಸ್ಟ್ ಸಿನಿಮಾ. ಭಿನ್ನವಾದ ಸಂದೇಶವನ್ನು ನಾವು ಸಿನಿಮಾದಲ್ಲಿ ನೀಡಿದ್ದೀವಿ. ಸಿನಿಮಾ ನೋಡುತ್ತಿರುವವರು ಎರಡನೇ ಅರ್ಧದಲ್ಲಿ ಬಹಳ ಎಮೋಷನಲ್ ಆಗುತ್ತಿದ್ದುದನ್ನು ನಾನು ಗಮನಿಸಿದೆ. ಸಿನಿಮಾ ನೋಡುವವರನ್ನು ಭಾವುಕರನ್ನಾಗಿಸುವಂಥಹಾ ಕತೆಯನ್ನು ನಾವು ಹೇಳಿದ್ದೇವೆ. ಈ ರೀತಿಯ ಸಿನಿಮಾವನ್ನು ನಾವು ಈ ಹಿಂದಿನ ವರೆಗೆ ನಾನು ಮಾಡಿರಲಿಲ್ಲ” ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.

ಸಿನಿಮಾದಲ್ಲಿ ಮಿಲನಾ ನಾಗರಾಜ್ ಸಹ ನಟಿಸಿದ್ದು, ಲವ್ ಮಾಕ್ಟೆಲ್ ಸಿನಿಮಾದಲ್ಲಿ ಮಿಲನಾ, ನನ್ನನ್ನು ಒದ್ದಿದ್ದರು, ಈ ಸಿನಿಮಾದಲ್ಲಿ ಹೊಡೆದಿದ್ದಾರೆ. ಅವರು ನನ್ನನ್ನು ಹೊಡೆದರೆ ಅಥವಾ ಒದ್ದರೆ ಆ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಅದು ಈ ಸಿನಿಮಾ ಮೂಲಕವೂ ಮುಂದುವರೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ:ತಾರಾ ಜೋಡಿಯಾಗಿ ತಾವೆದುರಿಸುತ್ತಿರುವ ಸಮಸ್ಯೆಯ ಬಗ್ಗೆ ನಟಿ ಮಿಲನಾ ನಾಗರಾಜ್ ಬಿಚ್ಚು ಮಾತು

ಸಿನಿಮಾ ಬಗ್ಗೆ ಮಾತು ಹೊರಳಿಸಿದ ಡಾರ್ಲಿಂಗ್ ಕೃಷ್ಣ, ಈ ಸಿನಿಮಾ ಕಾಲೇಜು ವಿದ್ಯಾರ್ಥಿಗಳಿಗೆ, ಮಾಸ್ ಆಡಿಯನ್ಸ್​ಗೆ ಕುಟುಂಬ ಪ್ರೇಕ್ಷಕರು ಎಲ್ಲರಿಗೂ ಇಷ್ಟವಾಗುತ್ತದೆ. ಮೊದಲನೇ ಅರ್ಧದಲ್ಲಿ ನನ್ನ ಪಾತ್ರವನ್ನು ಇಷ್ಟ ಪಡದ ಜನರೇ ಆ ನಂತರ ಆ ಪಾತ್ರ ಬದಲಾಗುವ ರೀತಿ ನೋಡಿ ಖುಷಿ ಪಡುತ್ತಾರೆ. ಮೊದಲಾರ್ಧದಲ್ಲಿರುವ ನನ್ನ ರಗಡ್ ಲುಕ್​ನ ಪಾತ್ರವೂ ಹಲವರಿಗೆ ಇಷ್ಟವಾಗಲಿದೆ” ಎಂದಿದ್ದಾರೆ ಕೃಷ್ಣ.

ಸಿನಿಮಾದಲ್ಲಿ ತಂದೆ-ಮಗನ ಸಂಬಂಧ, ತಾಯಿ-ಮಗನ ಸಂಬಂಧ, ಗಂಡ-ಹೆಂಡತಿ, ಗೆಳೆಯರ ಸಂಬಂಧ ಹೀಗೆ ಹಲವು ಕೋನಗಳಲ್ಲಿ ನಾವು ಕತೆಯನ್ನು ಹೇಳಿದ್ದೇವೆ. ಎಲ್ಲರಿಗೂ ಇಷ್ಟವಾಗುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ನಾವು ಹೇಳಲು ಹೊರಟಿರುವ ವಿಷಯ ಸಹ ಎಲ್ಲರಿಗೂ ತಟ್ಟುವಂಥಹದ್ದು, ಸಮಾಜದಲ್ಲಿ, ಪ್ರತಿ ಮನೆಯಲ್ಲಿಯೂ ಇರುವಂಥಹದ್ದು ಹಾಗಾಗಿ ಈ ಸಿನಿಮಾ ಹೆಚ್ಚಿನ ಜನರಿಗೆ ಇಷ್ಟವಾಗುತ್ತದೆ, ಅರ್ಥವಾಗುತ್ತದೆ ಎಂದಿದ್ದಾರೆ.

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಗಂಡಸಿನ ಅಹಂ ಕುರಿತ ಕತೆಯನ್ನು ನಿರ್ದೇಶಕ ಶಶಾಂಕ್ ಹೇಳಿದ್ದಾರೆ. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಬೃಂದಾ, ಮಿಲನಾ, ನಾಗಭೂಷಣ್, ಸುಧಾ ಬೆಳವಾಡಿ, ರಂಗಾಯಣ ರಘು ಇನ್ನಿತರರು ನಟಿಸಿದ್ದಾರೆ. ಸಿನಿಮಾ ಜುಲೈ 28ಕ್ಕೆ ತೆರೆಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!