ತಾರಾ ಜೋಡಿಯಾಗಿ ತಾವೆದುರಿಸುತ್ತಿರುವ ಸಮಸ್ಯೆಯ ಬಗ್ಗೆ ನಟಿ ಮಿಲನಾ ನಾಗರಾಜ್ ಬಿಚ್ಚು ಮಾತು

Milana Nagaraj: ಡಾರ್ಲಿಂಗ್ ಕೃಷ್ಣ ಪತ್ನಿ, ನಟಿ ಮಿಲನಾ ನಾಗರಾಜ್ ತಾರಾ ದಂಪತಿಗಳಾಗಿ ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

ತಾರಾ ಜೋಡಿಯಾಗಿ ತಾವೆದುರಿಸುತ್ತಿರುವ ಸಮಸ್ಯೆಯ ಬಗ್ಗೆ ನಟಿ ಮಿಲನಾ ನಾಗರಾಜ್ ಬಿಚ್ಚು ಮಾತು
ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ
Follow us
ಮಂಜುನಾಥ ಸಿ.
|

Updated on: Jul 14, 2023 | 10:39 PM

ನಟಿ ಮಿಲನಾ ನಾಗರಾಜ್ (Milana Nagaraj), ಡಾರ್ಲಿಂಗ್ ಕೃಷ್ಣರ (Darling Krishna) ಪತ್ನಿಯೂ ಹೌದು. ಕೃಷ್ಣ ಅವರೊಟ್ಟಿಗೆ ಸಿನಿಮಾ ಕತೆ ಕೇಳುವುದರಿಂದ ಹಿಡಿದು, ಪತಿಯೊಟ್ಟಿಗೆ ಸಿನಿಮಾ ನಿರ್ದೇಶನ ನಿರ್ಮಾಣದ ಜವಾಬ್ದಾರಿಗಳನ್ನು ಸಮವಾಗಿ ಹೊರುತ್ತಾ ಸ್ವತಃ ತಾವೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಅದರಲ್ಲಿಯೂ ಮದುವೆಯಾದ ಬಳಿಕ ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ನಟಿ ಮಿಲನಾ ನಾಗರಾಜ್, ‘ಕೌಸಲ್ಯ ಸುಪ್ರಜಾ ರಾಮ‘ (Kausalya Supraja Rama) ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದಾರೆ.

”ಮನೆಗೆ ಕತೆ ಹೇಳಲು ನಿರ್ದೇಶಕರು ಬರುತ್ತಾರೆ. ಅವರೊಟ್ಟಿಗೆ ಕೂತು ನಾನೂ ಕತೆ ಕೇಳುತ್ತೇನೆ. ಕತೆ ಓಕೆ ಆಗುತ್ತದೆ. ಕೃಷ್ಣನಿಗೂ ಇಷ್ಟವಾಗುತ್ತದೆ, ನನಗೂ ಇಷ್ಟವಾಗುತ್ತದೆ. ಸರಿ ನಾಯಕಿ ಯಾರೆಂದು ಹುಡುಕಾಡಲು ತೆರಳುತ್ತಾರೆ. ಅದಾದ ಸ್ವಲ್ಪ ದಿನಕ್ಕೆ ಬಂದು, ನಿಮ್ಮ ಪತ್ನಿ ಮಿಲನಾ ಅವರೇ ನಟಿಸುತ್ತಾರಾ ಕೇಳಿ ಎಂದು ಕೃಷ್ಣ ಬಳಿ ಹೇಳುತ್ತಾರೆ. ಕೃಷ್ಣ, ನನಗೆ ಗೊತ್ತಿಲ್ಲ ನೀವುಂಟು ಅವರುಂಟು ನೀವೇ ಕೇಳಿಕೊಳ್ಳಿ ಎನ್ನುತ್ತಾರೆ. ಆ ನಂತರ ಅವರು ನನ್ನ ಬಳಿ ಬಂದು ಇದೇ ಪ್ರಶ್ನೆ ಕೇಳುತ್ತಾರೆ. ಇದೇ ಸೀನ್ ಮತ್ತೆ ಮತ್ತೆ ರಿಪೀಟ್ ಆಗುತ್ತಿದೆ” ಎಂದರು ಮಿಲನಾ ನಾಗರಾಜ್.

”ನಾನೂ ಹಾಗೂ ಕೃಷ್ಣ ಈಗಾಗಲೇ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೀವಿ. ಕಾಂಬಿನೇಷನ್ ರಿಪೀಟ್ ಮಾಡುವುದು ಬೇಡ ಎಂಬ ಕಾರಣಕ್ಕೆ ನಾವಿಬ್ಬರೂ ಒಟ್ಟಿಗೆ ನಟಿಸುವುದು ಬೇಡ ಅಂದುಕೊಂಡಿದ್ದೇವೆ. ಆದರೂ ಪದೇ-ಪದೇ ಅದೇ ಇಕ್ಕಟ್ಟಿನ ಸಮಸ್ಯೆಗೆ ನಾವು ಸಿಲುಕುತ್ತಿದ್ದೇವೆ. ಈ ಸಿನಿಮಾದಲ್ಲಿ ಯಥಾವತ್ತು ಹಾಗೆ ಆಗದಿದ್ದರೂ ತುಸು ಬೇರೆ ರೀತಿಯಲ್ಲಿ ಆಯಿತು” ಎಂದಿದ್ದಾರೆ ಮಿಲನಾ.

”ಶಶಾಂಕ್ ಅವರು ಕತೆ ಹೇಳಿದಾಗ ನಾನೂ ಇದ್ದೆ ಇಬ್ಬರಿಗೂ ಸಿನಿಮಾ ಇಷ್ಟವಾಯಿತು. ಸಿನಿಮಾಕ್ಕೆ ನಾಯಕಿಯೂ ಆಯ್ಕೆ ಆದರು. ಅದಾದ ಕೆಲವು ದಿನಗಳ ಬಳಿಕ ಬಂದ ಶಶಾಂಕ್ ಅವರು ನಿಮಗೆ ಕತೆ ಹೇಳುತ್ತೇನೆ ಎಂದರು. ಅದಾಗಲೇ ನಾಯಕಿ ಆಯ್ಕೆ ಆಗಿದೆಯಲ್ಲ ಎಂದಾಗ ಇಲ್ಲ, ನಿಮಗೊಂದು ಪಾತ್ರವಿದೆ ಎಂದರು. ನಾನು ಆ ಪಾತ್ರವನ್ನು ಒಪ್ಪಿಕೊಳ್ಳುವುದಾ ಬೇಡವಾ ಎಂಬ ಗೊಂದಲದಲ್ಲಿದ್ದೆ. ಆಗ ಶಶಾಂಕ್ ಅವರು, ಆ ಪಾತ್ರ ಬಹಳ ನಾಜೂಕಿನದ್ದು, ಹೊಸಬರಿಂದ ಅದನ್ನು ಮಾಡಲು ಆಗಲ್ಲ, ಅನುಭವಿಗಳೇ ಆಗಿರಬೇಕು ಹಾಗಾಗಿ ನಿಮ್ಮನ್ನು ಕೇಳುತ್ತಿದ್ದೇನೆ ಎಂದರು. ಅಲ್ಲದೆ ಶಶಾಂಕ್ ಅವರು ತಮ್ಮ ಸಿನಿಮಾಗಳಲ್ಲಿ ನಾಯಕಿಯರ ಪಾತ್ರಕ್ಕೆ ಎಂಥಹಾ ಮಹತ್ವ ಕೊಡುತ್ತಾರೆ ಎಂದು ಅರಿವಿದ್ದ ನಾನು ಕೇವಲ ಅವರಿಗಾಗಿ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ” ಎಂದರು.

ಇದನ್ನೂ ಓದಿ:Darling Krishna Birthday: ಡಾರ್ಲಿಂಗ್​ ಕೃಷ್ಣ ಜನ್ಮದಿನ; ಹೀರೋ ಆಗಿ 10 ವರ್ಷ: 2 ವಿಶೇಷ ಕಾರಣಗಳಿಗೆ ಶುಭ ಕೋರಿದ ಮಿಲನಾ ನಾಗರಾಜ್​

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅವರ ನಟನೆಯ ಲವ್ ಮಾಕ್ಟೆಲ್ ಸಿನಿಮಾದ ಎರಡು ಭಾಗಗಳೂ ಸಹ ಸೂಪರ್ ಹಿಟ್ ಆಗಿವೆ. ಈಗ ಮೂರನೇ ಭಾಗಕ್ಕೂ ಈ ಜೋಡಿ ತಯಾರಾಗುತ್ತಿದೆ. ಇನ್ನು ಶಶಾಂಕ್ ನಿರ್ದೇಶನದ ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿಯೂ ಈ ಜೋಡಿ ಒಟ್ಟಿಗೆ ನಟಿಸಿದೆ. ಆದರೆ ಸಿನಿಮಾದಲ್ಲಿ ಬೃಂದಾ ಆಚಾರ್ ಸಹ ನಾಯಕಿಯಾಗಿಯೇ ನಟಿಸುತ್ತಿದ್ದಾರೆ. ಸಿನಿಮಾವು ಜುಲೈ 28ಕ್ಕೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ