AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darling Krishna Birthday: ಡಾರ್ಲಿಂಗ್​ ಕೃಷ್ಣ ಜನ್ಮದಿನ; ಹೀರೋ ಆಗಿ 10 ವರ್ಷ: 2 ವಿಶೇಷ ಕಾರಣಗಳಿಗೆ ಶುಭ ಕೋರಿದ ಮಿಲನಾ ನಾಗರಾಜ್​

ಮಿಲನಾ ನಾಗರಾಜ್​ ಹಂಚಿಕೊಂಡಿರುವ ಫೋಟೋದ ಹಿನ್ನೆಲೆಯಲ್ಲಿ ಡಾರ್ಲಿಂಗ್​ ಕೃಷ್ಣ ನಟಿಸಿದ ಹಲವು ಸಿನಿಮಾಗಳ ಪೋಸ್ಟರ್​ ಇದೆ. ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್​ ವೈರಲ್​ ಆಗಿದೆ.

Darling Krishna Birthday: ಡಾರ್ಲಿಂಗ್​ ಕೃಷ್ಣ ಜನ್ಮದಿನ; ಹೀರೋ ಆಗಿ 10 ವರ್ಷ: 2 ವಿಶೇಷ ಕಾರಣಗಳಿಗೆ ಶುಭ ಕೋರಿದ ಮಿಲನಾ ನಾಗರಾಜ್​
ಡಾರ್ಲಿಂಗ್​ ಕೃಷ್ಣ
ಮದನ್​ ಕುಮಾರ್​
|

Updated on: Jun 12, 2023 | 10:42 AM

Share

ನಟ ಡಾರ್ಲಿಂಗ್​ ಕೃಷ್ಣ (Darling Krishna) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಲವ್ ಮಾಕ್ಟೇಲ್​’ ಸಿನಿಮಾದಿಂದ ಅವರಿಗೆ ಸಿಕ್ಕ ಗೆಲುವು ದೊಡ್ಡದು. ಇಂದು (ಜೂನ್​ 12) ಡಾರ್ಲಿಂಗ್​ ಕೃಷ್ಣ ಅವರಿಗೆ ಜನ್ಮದಿನದ ಸಂಭ್ರಮ. ಈ ವಿಶೇಷ ದಿನದಂದು ಅವರ ಪತ್ನಿ ಮಿಲನಾ ನಾಗರಾಜ್​ (Milana Nagaraj) ಶುಭಾಶಯ ತಿಳಿಸಿದ್ದಾರೆ. ಅವರು ಸಂಭ್ರಮಿಸಲು ಇನ್ನೊಂದು ಕಾರಣ ಕೂಡ ಇದೆ. ಡಾರ್ಲಿಂಗ್​ ಕೃಷ್ಣ ಅವರು ಹೀರೋ ಆಗಿ 10 ವರ್ಷ ಕಳೆದಿದೆ. ಸ್ಯಾಂಡಲ್​ವುಡ್​ನಲ್ಲಿ ಅವರು ಸಾಗಿ ಬಂದ ಹಾದಿಯನ್ನು ಮೆಲುಕು ಹಾಕಲಾಗುತ್ತಿದೆ. ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಡಾರ್ಲಿಂಗ್​ ಕೃಷ್ಣಗೆ ಹುಟ್ಟುಹಬ್ಬದ (Darling Krishna Birthday) ಶುಭಾಶಯ ಮತ್ತು ಅಭಿನಂದನೆ ತಿಳಿಸುತ್ತಿದ್ದಾರೆ.

ಮಿಲನಾ ನಾಗರಾಜ್​ ಮತ್ತು ಡಾರ್ಲಿಂಗ್​ ಕೃಷ್ಣ ಅವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ‘ಲವ್​ ಮಾಕ್ಟೇಲ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರಿಬ್ಬರು ತಮ್ಮ ಲವ್​ ಸ್ಟೋರಿ ಬಹಿರಂಗ ಪಡಿಸಿದರು. 2021ರಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಿನಿಮಾದಲ್ಲೂ, ರಿಯಲ್​ ಲೈಫ್​ನಲ್ಲೂ ಅವರಿಬ್ಬರ ಜೋಡಿ ಎಂದರೆ ಅಭಿಮಾನಿಗಳಿಗೆ ತುಂಬ ಇಷ್ಟ. ಹಲವು ಚಿತ್ರಗಳಲ್ಲಿ ಅವರಿಬ್ಬರು ಜೊತೆಯಾಗಿ ನಟಿಸಿದ್ದಾರೆ.

‘ನನ್ನ ಡಾರ್ಲಿಂಗ್​ಗೆ ಹ್ಯಾಪಿ ಬರ್ತ್​ಡೇ. ಒಂದು ಅಸಾಧಾರಣವಾದ ಪಯಣ ಮತ್ತು 10 ವರ್ಷ ಅನ್ನೋದು ಆರಂಭ ಅಷ್ಟೇ. ಯಶಸ್ಸು ಮತ್ತು ಸೋಲನ್ನು ನೀವು ಚೆನ್ನಾಗಿ ನಿಭಾಯಿಸುತ್ತೀರಿ. ನಾನು ಭೇಟಿ ಆದಾಗಿನಿಂದ ಈ 10 ವರ್ಷಗಳಲ್ಲಿ ನೀವು ಅದೇ ರೀತಿ ಇದ್ದೀರಿ. ಪರಿಶ್ರಮದಿಂದ ನೀವು ಲಕ್ಷಾಂತರ ಹೃದಯಗಳನ್ನು ಗೆಲ್ಲುವಂತಾಗಲಿ. ನಿಮ್ಮ ಬದ್ಧತೆ ನಮಗೆ ಸ್ಫೂರ್ತಿ ನೀಡುತ್ತದೆ. ನಿಮ್ಮ ಸಿನಿಮಾ ಪಯಣದಲ್ಲಿ ಮತ್ತು ಜೀವನದ ಭಾಗವಾಗಿ ನಾನು ಇರುವುದಕ್ಕೆ ಖುಷಿ ಆಗುತ್ತದೆ. ನಿಮ್ಮ ನಿರ್ದೇಶನದ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇನೆ’ ಎಂದು ಮಿಲನಾ ನಾಗರಾಜ್​ ಪೋಸ್ಟ್​ ಮಾಡಿದ್ದಾರೆ.

ಮಿಲನಾ ನಾಗರಾಜ್​ ಮಾಡಿದ ಈ ಪೋಸ್ಟ್​ಗೆ ಡಾರ್ಲಿಂಗ್​ ಕೃಷ್ಣ ಅವರು ಬಹಳ ಕ್ಯೂಟ್​ ಆಗಿ ಪ್ರತಿಕ್ರಿಯಿಸಿದ್ದಾರೆ. ‘ಧನ್ಯವಾದಗಳು ಬೇಬು. ತಡವಾಗಿ ರಿಪ್ಲೆ ಮಾಡಿದ್ದಕ್ಕೆ ಕ್ಷಮೆ ಇರಲಿ. ಇದನ್ನು ನಾನು ಈಗ ನೋಡಿದೆ. ಲವ್​ ಯೂ’ ಎಂದು ಅವರು ಕಮೆಂಟ್​ ಮಾಡಿದ್ದಾರೆ. ಮಿಲನಾ ಹಂಚಿಕೊಂಡಿರುವ ಫೋಟೋದ ಹಿನ್ನೆಲೆಯಲ್ಲಿ ಡಾರ್ಲಿಂಗ್​ ಕೃಷ್ಣ ನಟಿಸಿದ ಹಲವು ಸಿನಿಮಾಗಳ ಪೋಸ್ಟರ್​ ಇದೆ. ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್​ ವೈರಲ್​ ಆಗಿದೆ.

ಇದನ್ನೂ ಓದಿ: Love Mocktail 3: ‘ಲವ್​ ಮಾಕ್ಟೇಲ್​ 3’ ಕೆಲಸ ಆರಂಭಿಸಿದ ಡಾರ್ಲಿಂಗ್​ ಕೃಷ್ಣ; ಮುಂದುವರಿಯಲಿದೆ ಆದಿ-ನಿಧಿ ಕಥೆ

2010ರಲ್ಲೇ ನಟನಾಗಿ ಡಾರ್ಲಿಂಗ್​ ಕೃಷ್ಣ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಮದರಂಗಿ’ 2013ರ ಮೇ 10ರಂದು ಬಿಡುಗಡೆ ಆಯಿತು. 2023ರ ಮೇ ತಿಂಗಳಲ್ಲಿ ಅವರು 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ನಟನಾಗಿದ್ದ ಡಾರ್ಲಿಂಗ್​ ಕೃಷ್ಣ ಅವರು 2020ರಲ್ಲಿ ‘ಲವ್​ ಮಾಕ್ಟೇಲ್​’ ಸಿನಿಮಾದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದುಕೊಂಡರು. ಆ ಚಿತ್ರ ದೊಡ್ಡ ಹಿಟ್​ ಆಯಿತು. ಅದಕ್ಕೆ ಸೀಕ್ವೆಲ್​ ಆಗಿ ಮೂಡಿಬಂದ ‘ಲವ್​ ಮಾಕ್ಟೇಲ್​ 2’ ಸಿನಿಮಾ ಕೂಡ ಜನಮೆಚ್ಚುಗೆ ಪಡೆದುಕೊಂಡರು. ಈಗ ‘ಲವ್​ ಮಾಕ್ಟೇಲ್​ 3’ ಕೂಡ ಸಿದ್ಧವಾಗುತ್ತಿದೆ. ಡಾರ್ಲಿಂಗ್​ ಕೃಷ್ಣ ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ