AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಲನಾ ಜತೆ ಸಿಡಿಮಿಡಿ ಮಾಡುತ್ತಿರುವ ಡಾರ್ಲಿಂಗ್​ ಕೃಷ್ಣ; ಇದಕ್ಕೆಲ್ಲ ಕಾರಣ ಶಿವಾನಿ ಸಹವಾಸ

Shivani song | Darling Krishna: ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಡಾರ್ಲಿಂಗ್​ ಕೃಷ್ಣ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಸುವ ರೀತಿಯಲ್ಲಿ ಈ ಟೀಸರ್​ ಮೂಡಿಬಂದಿದೆ. ‘ಶಿವಾನಿ..’ ಹಾಡು ಏ.21ರಂದು ಸಂಜೆ 6 ಗಂಟೆಗೆ ಬಿಡುಗಡೆ ಆಗಲಿದೆ.

ಮಿಲನಾ ಜತೆ ಸಿಡಿಮಿಡಿ ಮಾಡುತ್ತಿರುವ ಡಾರ್ಲಿಂಗ್​ ಕೃಷ್ಣ; ಇದಕ್ಕೆಲ್ಲ ಕಾರಣ ಶಿವಾನಿ ಸಹವಾಸ
ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ
ಮದನ್​ ಕುಮಾರ್​
|

Updated on:Apr 18, 2023 | 5:00 PM

Share

ಮುಖ್ಯಾಂಶಗಳು

  • ಡಾರ್ಲಿಂಗ್​ ಕೃಷ್ಣ-ಬೃಂದಾ ಆಚಾರ್ಯ ನಟನೆಯ ಹೊಸ ಸಿನಿಮಾ
  • ಶಶಾಂತ್​ ನಿರ್ದೇಶನದಲ್ಲಿ ಮೂಡಿಬರುತ್ತಿದೆ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ
  • ‘ಶಿವಾನಿ..’ ಹಾಡು ಬಿಡುಗಡೆಗೂ ಮುನ್ನ ಡಿಫರೆಂಟ್​ ಟೀಸರ್​ ಹಂಚಿಕೊಂಡ ಚಿತ್ರತಂಡ

ನಟ ಡಾರ್ಲಿಂಗ್​ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್​ (Milana Nagaraj) ನಡುವೆ ಉತ್ತಮ ಹೊಂದಾಣಿಕೆ ಇದೆ. ಇಬ್ಬರೂ ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ‘ಲವ್​ ಮಾಕ್ಟೇಲ್​’ ಸಿನಿಮಾ ಗೆದ್ದ ಬಳಿಕ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದರು. ಈಗ ಇವರಿಬ್ಬರು ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಡಾರ್ಲಿಂಗ್​ ಕೃಷ್ಣ ಅವರು ಮಿಲನಾ ನಾಗರಾಜ್​ ಜೊತೆ ಸಿಡಿಮಿಡಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಶಿವಾನಿ! ಯಾರು ಈ ಶಿವಾನಿ? ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ಸಂಸಾರದಲ್ಲಿ ಈಕೆ ಯಾಕೆ ಮೂಗು ತೂರಿಸುತ್ತಿದ್ದಾಳೆ? ಇಂಥ ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರ ‘ಕೌಸಲ್ಯ ಸುಪ್ರಜಾ ರಾಮಾ’ (Kousalya Supraja Rama) ಸಿನಿಮಾದ ಸಾಂಗ್​ ಟೀಸರ್​ನಲ್ಲಿದೆ. ಹೌದು, ಈ ಸಿನಿಮಾದ ತಂಡದಿಂದ ಹೊಸ ಹಾಡಿನ ಟೀಸರ್​ ಬಿಡುಗಡೆ ಆಗಿದೆ. ಅದರಲ್ಲಿ ಡಾರ್ಲಿಂಗ್​ ಕೃಷ್ಣ (Darling Krishna) ಅವರು ಎಲ್ಲರ ಮೇಲೂ ಸಿಡಿಮಿಡಿ ಮಾಡುವಂತಹ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

‘ಮೊಗ್ಗಿನ ಮನಸು’ ಖ್ಯಾತಿಯ ಶಶಾಂಕ್​ ಅವರು ‘ಕೌಸಲ್ಯ ಸುಪ್ರಜಾ ರಾಮಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಡಾರ್ಲಿಂಗ್​ ಕೃಷ್ಣ ಜೊತೆ ಬೃಂದಾ ಆಚಾರ್ಯ ನಟಿಸಿದ್ದಾರೆ. ಅರ್ಜುನ್​ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಶಿವಾನಿ..’ ಎಂಬ ಹಾಡನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಫನ್ನಿಯಾದ ಒಂದು ಟೀಸರ್​ ರಿಲೀಸ್​ ಮಾಡಲಾಗಿದೆ.

ಇದನ್ನೂ ಓದಿ: ‘ಲವ್​ ಮಾಕ್ಟೇಲ್​ 3’ ಕೆಲಸ ಆರಂಭಿಸಿದ ಡಾರ್ಲಿಂಗ್​ ಕೃಷ್ಣ; ಮುಂದುವರಿಯಲಿದೆ ಆದಿ-ನಿಧಿ ಕಥೆ

ಇದನ್ನೂ ಓದಿ
Image
Milana Nagaraj: ‘ಡಿಯರ್​​ ವಿಕ್ರಮ್​’ ಹೇಗಿದೆ? ಸತೀಶ್​ ನೀನಾಸಂ, ಶ್ರದ್ಧಾ ಶ್ರೀನಾಥ್​ ನಟನೆಯ ಚಿತ್ರಕ್ಕೆ ಮಿಲನಾ ವಿಮರ್ಶೆ
Image
Darling Krishna Birthday: ಬರ್ತ್​ಡೇ ಪ್ರಯುಕ್ತ ಮಾಲ್ಡೀವ್ಸ್​ಗೆ ತೆರಳಿದ ಡಾರ್ಲಿಂಗ್​ ಕೃಷ್ಣ-ಮಿಲನಾ; ಇಲ್ಲಿವೆ ಕ್ಯೂಟ್​ ಜೋಡಿಯ ಫೋಟೋ
Image
‘ಅವತಾರ ಪುರುಷ’ ಸಿನಿಮಾ ನೋಡಿ ಕಣ್ಣಲ್ಲಿ ನೀರು ಬರುವಷ್ಟು ನಕ್ಕುಬಿಟ್ಟೆ ಎಂದ ಮಿಲನಾ ನಾಗರಾಜ್
Image
ಸಿಂಗಾಪುರದಲ್ಲಿ ಮಿಲನಾ ನಾಗರಾಜ್​-ಡಾರ್ಲಿಂಗ್ ಕೃಷ್ಣ; ವೈರಲ್ ಆಯ್ತು ಫೋಟೋ

‘ಶಿವಾನಿ..’ ಸಾಂಗ್​ ಟೀಸರ್​ನಲ್ಲಿ ಏನಿದೆ?

ಸಿನಿಮಾದ​ ಬಗ್ಗೆ ಮಾತನಾಡಲು ಶಶಾಂಕ್​, ಡಾರ್ಲಿಂಗ್​ ಕೃಷ್ಣ ಒಂದು ಆಫೀಸ್​ನಲ್ಲಿ ಕುಳಿತಿರುತ್ತಾರೆ. ಆಗ ಅಲ್ಲಿಗೆ ನಟಿ ಬೃಂದಾ ಆಚಾರ್ಯ ಬರುತ್ತಾರೆ. ‘ಎಷ್ಟು ಹೊತ್ತಿಗೆ ಬರೋದು? ಟೈಮ್​ ಸೆನ್ಸ್​ ಇಲ್ಲವಾ’ ಎಂದು ಕೃಷ್ಣ ರೇಗುತ್ತಾರೆ. ‘ಶೂಟಿಂಗ್​ ಮುಗಿದರೂ ಇವರು ಪಾತ್ರದಿಂದ ಹೊರಗೆ ಬಂದಿಲ್ಲವಲ್ಲ ಸರ್​. ಇಲ್ಲೇ ಹೀಗಾದರೆ ಮನೆಯಲ್ಲಿ ಮಿಲನಾ ಕಥೆ ಏನಾಗಿರಬಹುದು’ ಎಂದು ನಿರ್ದೇಶಕ ಶಶಾಂಕ್​ ಬಳಿ ಬೃಂದಾ ಕೇಳುತ್ತಾರೆ. ಆಗ ಕೃಷ್ಣಗೆ ಮಿಲನಾ ಕಡೆಯಿಂದ ಫೋನ್​ ಕರೆ ಬರುತ್ತದೆ.

‘ಟ್ರಿಪ್​ಗೆ ಹೋಗೋಕೆ ಟಿಕೆಟ್​ ಬುಕ್​ ಮಾಡುತ್ತಿದ್ದೇನೆ. ಸ್ವಿಜರ್​ಲ್ಯಾಂಡ್​ಗೆ ಹೋಗೋಣ’ ಅಂತ ಮಿಲನಾ ಹೇಳ್ತಾರೆ. ‘ಸ್ವಿಜರ್​ಲ್ಯಾಂಡ್​ ಬೇಡ. ಪ್ಯಾರಿಸ್​ಗೆ ಹೋಗೋಣ’ ಎಂದು ಕೃಷ್ಣ ಸಿಡುಕಿನಿಂದ ಉತ್ತರಿಸುತ್ತಾರೆ. ಇದರಿಂದ ಸಿಟ್ಟಾದ ಮಿಲನಾ ಅವರು ನಿರ್ದೇಶಕರ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಈ ರೀತಿಯ ಫನ್ನಿ ಕಾನ್ಸೆಪ್ಟ್​ನಲ್ಲಿ ಟೀಸರ್​ ಸಿದ್ಧವಾಗಿದೆ.

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಸುವ ರೀತಿಯಲ್ಲಿ ಈ ಟೀಸರ್​ ಮೂಡಿಬಂದಿದೆ. ‘ಶಿವಾನಿ..’ ಹಾಡು ಏಪ್ರಿಲ್​ 21ರಂದು ಸಂಜೆ 6 ಗಂಟೆಗೆ ಬಿಡುಗಡೆ ಆಗಲಿದೆ. ‘ಶಶಾಂಕ್​ ಸಿನಿಮಾಸ್​’ ಮತ್ತು ‘ಕೌರವ ಪ್ರೊಡಕ್ಷನ್​ ಹೌಸ್​’ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:00 pm, Tue, 18 April 23

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ