‘ಕೌಸಲ್ಯ ಸುಪ್ರಜಾ ರಾಮ’ ಟ್ರೈಲರ್ ಬಿಡುಗಡೆ: ಪುರುಷ ಅಹಂಕಾರದ ಸುತ್ತ ಪ್ರೇಮಕತೆ

Kausalya Supraja Rama: ಡಾರ್ಲಿಂಗ್ ಕೃಷ್ಣ ನಟಿಸಿರುವ ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

'ಕೌಸಲ್ಯ ಸುಪ್ರಜಾ ರಾಮ' ಟ್ರೈಲರ್ ಬಿಡುಗಡೆ: ಪುರುಷ ಅಹಂಕಾರದ ಸುತ್ತ ಪ್ರೇಮಕತೆ
ಕೌಸಲ್ಯ ಸುಪ್ರಜಾ ರಾಮ
Follow us
ಮಂಜುನಾಥ ಸಿ.
|

Updated on:Jul 14, 2023 | 8:28 PM

ಡಾರ್ಲಿಂಗ್ ಕೃಷ್ಣ (Darling Krishna) ನಟನೆಯ ‘ಕೌಸಲ್ಯ ಸುಪ್ರಜಾ ರಾಮ‘ (Kausalya Supraja Rama) ಸಿನಿಮಾದ ಟ್ರೈಲರ್ ಅನ್ನು ಇಂದು (ಜುಲೈ 14) ನಟ ಸುದೀಪ್ (Sudeep) ಬಿಡುಗಡೆ ಮಾಡಿದ್ದಾರೆ. ಪುರುಷ ಅಹಾಂಕರದ ಕುರಿತಾದ ಕತೆಯನ್ನು ಸಿನಿಮಾ ಒಳಗೊಂಡಿದೆ ಎಂಬುದನ್ನು ಟೀಸರ್ ಸಾರಿ ಹೇಳುತ್ತಿದೆ. ಗಂಡು ಮೇಲು, ಹೆಣ್ಣು ಕೀಳು ಅಥವಾ ಗಂಡಿನ ಆಳು ಅಂದುಕೊಂಡಿರುವ ಯುವಕನೊಬ್ಬ ಪ್ರೀತಿಯಲ್ಲಿ ಬಿದ್ದಾಗಿನ ಆ ನಂತರದ ಕತೆಯನ್ನು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಒಳಗೊಂಡಿದೆ.

ಸಿನಿಮಾದ ಟ್ರೈಲರ್​ನಲ್ಲಿ ಕೆಲವು ಅಂಶಗಳನ್ನು ನಿರ್ದೇಶಕ ಶಶಾಂಕ್ ಬಿಟ್ಟುಕೊಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಮಹಿಳಾ ದ್ವೇಷಿಯಾಗಲು ಅಪ್ಪನೇ ಕಾರಣ, ಅಪ್ಪನ ಮಾತುಗಳಿಂದ ಸ್ಪೂರ್ತಿ ಪಡೆದು ಪುರುಷ ಅಹಂಕಾರವನ್ನು ಬೆಳೆಸಿಕೊಂಡಿದ್ದಾನೆ ನಾಯಕ. ಆದರೆ ಅಮ್ಮ ಹಾಗಲ್ಲ ಆಕೆ ಕರುಣಾಮಯಿ, ಪ್ರೇಮಮಯಿ, ಆದರೆ ನಾಯಕ ಡಾರ್ಲಿಂಗ್ ಕೃಷ್ಣ ಕೇಳಿರುವುದು ಪಾಲಿಸುತ್ತಿರುವುದು ಅಪ್ಪನ ಮಾತನ್ನು ಹೀಗಿರುವಾಗ ಅವನಿಗೆ ಚಂದದ ಹುಡುಗಿಯೊಟ್ಟಿಗೆ ಲವ್ ಆಗುತ್ತದೆ. ಮುಂದೇನು? ಸಿನಿಮಾದಲ್ಲಿಯೇ ನೋಡಬೇಕು.

ಇದನ್ನೂ ಓದಿ:Darling Krishna: ಬಿಲ್ಡಪ್​, ಹೈಪ್​ ಇಲ್ಲದೇ ರಿಲೀಸ್​ ಡೇಟ್​ ತಿಳಿಸಿದ ‘ಕೌಸಲ್ಯ ಸುಪ್ರಜಾ ರಾಮ’; ಜುಲೈ 28ಕ್ಕೆ ಬರಲಿದೆ ಶಶಾಂಕ್​-ಡಾರ್ಲಿಂಗ್​ ಕೃಷ್ಣ ಸಿನಿಮಾ

ತಮ್ಮ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ನಟ ಡಾರ್ಲಿಂಗ್ ಕೃಷ್ಣ ಹೆಚ್ಚು ಮಾಸ್ ಆಗಿ, ಹೆಚ್ಚು ಖಡಕ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಮಾಸ್ ಡೈಲಾಗ್​ಗಳನ್ನು ಸಹ ಡಾರ್ಲಿಂಗ್ ಕೃಷ್ಣ ಹೊಡೆದಿರುವುದು ಟ್ರೈಲರ್​ನಲ್ಲಿ ತಿಳಿದು ಬಂದಿದೆ. ಹಾಸ್ಯಕ್ಕೆ ನಾಗಭೂಷಣ ಇದ್ದಾರೆ. ಡಾರ್ಲಿಂಗ್ ಕೃಷ್ಣನ ತಂದೆಯ ಪಾತ್ರದಲ್ಲಿ ರಂಗಾಯಣ ರಘು ಮಿಂಚಿದ್ದಾರೆ, ಅಹಂಕಾರಿ ಅಪ್ಪನ ಪಾತ್ರದಲ್ಲಿ ರಘು ನಟಿಸಿದ್ದಾರೆ. ಅಮ್ಮನ ಪಾತ್ರದಲ್ಲಿ ಸ್ಯಾಂಡಲ್​ವುಡ್ ತಾಯಿ ಎಂದೇ ಖ್ಯಾತವಾಗಿರುವ ಸುಧಾ ಬೆಳವಾಡಿ ನಟಿಸಿದ್ದಾರೆ.

ಟ್ರೈಲರ್​ನಲ್ಲಿ ಕೆಲ ಮಾಸ್ ಅಂಶಗಳು, ಭಾವುಕ ಅಂಶಗಳು, ಪ್ರೀತಿ-ತಮಾಷೆಯ ದೃಶ್ಯಗಳನ್ನು ಸೇರಿಸಲಾಗಿದೆ. ಟ್ರೈಲರ್​ನಲ್ಲಿ ನಾಯಕಿ ಬೃಂದಾ ಆಚಾರ್ಯ ಗಮನ ಸೆಳೆದಿದ್ದಾರೆ. ಕೊನೆಯಲ್ಲಿ ಎಂಟ್ರಿ ಕೊಡುವ ಮಿಲನಾ ನಾಗರಾಜ್ ಪಾತ್ರವೇನು ಎಂಬುದು ಸಿನಿಮಾ ನೋಡಿದ ಬಳಿಕವೇ ತಿಳಿಯಲಿದೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಟ್ರೈಲರ್​ನಲ್ಲಿಯೇ ಅವರ ಸಂಗೀತದ ಕೆಲವು ಝಲಕ್​ಗಳು ಕೇಳ ಸಿಗುತ್ತವೆ.

ಸಿನಿಮಾವನ್ನು ಹಿರಿಯ ನಿರ್ದೇಶಕ ಶಶಾಂಕ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಮಾಜಿ ಸಚಿವ ಬಿಸಿ ಪಾಟೀಲ್ ನಿರ್ಮಾಣ ಮಾಡಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರೂ ಸಹ ಹಾಜರಿದ್ದರಲ್ಲದೆ ಸಿನಿಮಾ ಚೆನ್ನಾಗಿ ಬಂದಿದೆಯೆಂದೂ ಗೆಲ್ಲುವ ಭರವಸೆ ಇದೆಯೆಂದೂ ಹೇಳಿದರು. ಸಿನಿಮಾ ಜುಲೈ 28ಕ್ಕೆ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:27 pm, Fri, 14 July 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ