Kausalya Supraja Rama: ಪತ್ನಿ ಮಿಲನಾರ ಪಾತ್ರದ ಬಗ್ಗೆ ಡಾರ್ಲಿಂಗ್ ಕೃಷ್ಣ ಹೆಮ್ಮೆಯ ಮಾತು

Darling Krishna: ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಪತ್ನಿ ಮಿಲನಾ ನಾಗರಾಜ್ ಅವರ ನಟನೆಯನ್ನು ಪತಿ ಡಾರ್ಲಿಂಗ್ ಕೃಷ್ಣ ಕೊಂಡಾಡಿದ್ದಾರೆ.

Kausalya Supraja Rama: ಪತ್ನಿ ಮಿಲನಾರ ಪಾತ್ರದ ಬಗ್ಗೆ ಡಾರ್ಲಿಂಗ್ ಕೃಷ್ಣ ಹೆಮ್ಮೆಯ ಮಾತು
ಡಾರ್ಲಿಂಗ್-ಮಿಲನಾ
Follow us
ಮಂಜುನಾಥ ಸಿ.
|

Updated on: Jul 27, 2023 | 11:44 PM

ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನಾ ನಾಗರಾಜ್ (Milana Nagaraj) ಚಂದನವನದ ಕ್ಯೂಟ್ ಜೋಡಿ. ಈ ದಂಪತಿ ‘ಲವ್ ಮಾಕ್ಟೆಲ್’ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕನಿಗೆ ಮೋಡಿ ಮಾಡಿದ್ದಾರೆ. ‘ಲವ್ ಮಾಕ್ಟೆಲ್’ ಮಾತ್ರವೇ ಅಲ್ಲದೆ ಇನ್ನೂ ಕೆಲವು ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದು, ಇದೀಗ ಮತ್ತೊಮ್ಮೆ ‘ಕೌಸಲ್ಯಾ ಸುಪ್ರಜಾ ರಾಮ‘ (Kausalya Supraja Rama) ಸಿನಿಮಾದಲ್ಲಿ ಒಂದಾಗಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ತುಸು ರಗಡ್ ಪಾತ್ರದಲ್ಲಿ ಮಿಲನಾ ನಾಗರಾಜ್ ಕಾಣಿಸಿಕೊಂಡಿದ್ದಾರೆ.

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಟಿವಿ9 ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಡಾರ್ಲಿಂಗ್ ಕೃಷ್ಣ, ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಪತ್ನಿ ಮಿಲನಾ ನಾಗರಾಜ್ ಅವರ ಪಾತ್ರವನ್ನು, ಪಾತ್ರಕ್ಕೆ ಮಿಲನಾ ನೀಡಿರುವ ನಟನೆಯನ್ನು ಕೊಂಡಾಡಿದ್ದಾರೆ.

ಮಿಲನಾ ಅವರು ನಿರ್ವಹಿಸಿರುವ ಪಾತ್ರ ಭಿನ್ನವಾದುದು. ಬಹಳ ಕಷ್ಟವಾದ ಪಾತ್ರ ಅದು. ಪಾತ್ರ ಕೇಳಿದಾಗಲೆ ಮಿಲನಾ ನಾಗರಾಜ್ ನಾನು ಮಾಡಲ್ಲ ಎಂದುಬಿಟ್ಟಿದ್ದರು. ಆದರೆ ಅವರನ್ನು ಒಪ್ಪಿಸಿ ಪಾತ್ರ ಮಾಡಿಸಲಾಯ್ತು. ಮಿಲನಾರ ಪಾತ್ರ ಬಹಳ ಸಂಕೀರ್ಣವಾದ ಪಾತ್ರ, ತುಸು ಹೆಚ್ಚಾದರೂ ಓವರ್ ಆಕ್ಟಿಂಗ್ ಅನಿಸಿಕೊಳ್ಳುವಂಥಹಾ ಪಾತ್ರ ಆದರೆ ಮಿಲನಾ ಅವರು ಅದನ್ನು ನಾಜೂಕಿನಿಂದ ನಿರ್ವಹಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:‘ಇದನ್ನು ಅವರು ಧೈರ್ಯ ಇದ್ದರೆ ಮನೆಯಲ್ಲಿ ಮಾಡಲಿ’; ಡಾರ್ಲಿಂಗ್ ಕೃಷ್ಣಗೆ ಸುದೀಪ್ ಸವಾಲ್

‘ಲವ್ ಮಾಕ್ಟೆಲ್’ ಸಿನಿಮಾ ಅವರಿಗೆ ಬೇರೆಯದ್ದೇ ರೀತಿಯ ಇಮೇಜು ನೀಡಿತ್ತು, ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಮಿಲನಾಗೆ ತುಸು ಮಾಸ್ ಇಮೇಜು ಕೊಡಲಿದೆ. ಬಹಳ ಚೆನ್ನಾಗಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೋಡಿದವರಿಗೆಲ್ಲ ಮಿಲನಾ ಅವರ ಪಾತ್ರ ಬಹಳ ಇಷ್ಟವಾಗುತ್ತಿದೆ. ಜನರಿಗೂ ಸಹ ಆ ಪಾತ್ರ ಬಹಳ ಇಷ್ಟವಾಗಲಿದೆ ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಗ್ಗೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಬಹಳ ಮುಖ್ಯವಾದ ಹಾಗೂ ಜನಜನಿತವಾದ ವಿಷಯವೊಂದನ್ನು ಹಾಸ್ಯ ಮತ್ತು ಭಾವುಕ ನೆಲೆಯಲ್ಲಿ ಈ ಸಿನಿಮಾದಲ್ಲಿ ಹೇಳಲಾಗಿದೆ. ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ. ಕುಟುಂಬವೆಲ್ಲ ಕೂತು ನೋಡಬಹುದಾದ ಸಿನಿಮಾ. ಈ ದಶಕದಲ್ಲಿ ಇಂಥಹಾ ಒಳ್ಳೆಯ ಕೌಟುಂಬಿಕ ಸಿನಿಮಾ ಬಂದಿಲ್ಲ ಎಂದೇ ಹೇಳಬಹುದು ಎಂದರು.

ಸಿನಿಮಾದಲ್ಲಿ ಸುಧಾ ಬೆಳವಾಡಿ ಅವರ ಪಾತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಡಾರ್ಲಿಂಗ್ ಕೃಷ್ಣ, ನಾಯಕನ ತಾಯಿಯ ಪಾತ್ರದಲ್ಲಿ ಸುಧಾ ನಟಿಸಿದ್ದಾರೆ. ಬಹಳ ಇನ್ನೋಸೆಂಟ್ ಆದ ಜೊತೆಗೆ ಪೆದ್ದಿಯ ರೀತಿ ವರ್ತಿಸುವ ಪಾತ್ರ ಅದು. ಎಲ್ಲರಿಗೂ ಗೊತ್ತಿರುವಂತೆ ಸುಧಾ ಬೆಳವಾಡಿ ಅವರ ಮುಖದಲ್ಲಿ ಬಹಳ ಮುಗ್ಧತೆ ಇದೆ. ಮತ್ತು ಅದ್ಬುತವಾದ ನಟಿ ಸಹ ಅವರು. ಹಾಗಾಗಿ ಅವರನ್ನೇ ಪಾತ್ರಕ್ಕೆ ಆಯ್ಕೆ ಮಾಡಿಕೊಂಡೆವು. ಅದ್ಭುತವಾಗಿ ಅವರು ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾ ನೋಡಿದವರು ಅವರ ಪಾತ್ರ ನೋಡಿ ಕಣ್ಣೀರು ಹಾಕಿದ್ದನ್ನು ನಾನು ನೋಡಿದ್ದೇನೆ ಎಂದರು. ಡಾರ್ಲಿಂಗ್ ಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ