Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಕ್ಕೆ ಹೊರಟ ‘ಹಾಸ್ಟೆಲ್ ಹುಡುಗರು’: ಹೊಸಬರ ಸಿನಿಮಾಗೆ ಸಿಕ್ಕಿದೆ ಭರ್ಜರಿ ಸಕ್ಸಸ್​

ಕರ್ನಾಟಕದಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸೂಪರ್​ ಹಿಟ್​ ಆಗಿದೆ. ಶೀಘ್ರವೇ ಆಸ್ಟ್ರೇಲಿಯಾ, ಕೆನಡಾ, ಸೌತ್ ಆಫ್ರಿಕಾ, ಯುಕೆ ಮುಂತಾದ ಕಡೆಗಳಲ್ಲಿ ರಿಲೀಸ್​ ಆಗಲಿದೆ.

ವಿದೇಶಕ್ಕೆ ಹೊರಟ ‘ಹಾಸ್ಟೆಲ್ ಹುಡುಗರು’: ಹೊಸಬರ ಸಿನಿಮಾಗೆ ಸಿಕ್ಕಿದೆ ಭರ್ಜರಿ ಸಕ್ಸಸ್​
‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jul 27, 2023 | 3:22 PM

ಈಗ ಎಲ್ಲೆಲ್ಲೂ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾದ್ದೇ ಸುದ್ದಿ. ಜುಲೈ 21ರಂದು ಬಿಡುಗಡೆ ಆಗಿರುವ ಈ ಸಿನಿಮಾ ಜನಮೆಚ್ಚುಗೆ ಗಳಿಸಿದೆ. ಹಲವು ದಿನಗಳಿಂದ ಹೌಸ್​ಫುಲ್​ ಬೋರ್ಡ್​ ಕಾಣದೇ ಸೈಲೆಂಟ್​ ಆಗಿದ್ದ ಚಂದನವನಕ್ಕೆ (Sandalwood) ಈ ಸಿನಿಮಾದಿಂದ ಹೊಸ ಚೈತನ್ಯ ಬಂದಿದೆ. ಹಾಸ್ಟೆಲ್​ ಹುಡುಗರ ಕಥೆಯನ್ನೇ ಇಟ್ಟುಕೊಂಡು ಮೂಡಿಬಂದಿರುವ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈಗ ವಿದೇಶದಲ್ಲೂ ಸದ್ದು ಮಾಡಲು ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಸಜ್ಜಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ…

ರಾಜ್ಯಾದ್ಯಂತ ಪ್ರೇಕ್ಷಕರಿಂದ ಸಿಕ್ಕ ಪ್ರಶಂಸೆಯಿಂದಾಗಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡಕ್ಕೆ ಖುಷಿ ಆಗಿದೆ. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ತರಲೆ, ತಮಾಷೆ, ಕೀಟಲೆಗೆ ಜನರು ಬಿದ್ದು ಬಿದ್ದು ನಕ್ಕಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ಶಿವರಾಜ್​ಕುಮಾರ್​ ಅವರು ಈ ಚಿತ್ರಕ್ಕೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಇಷ್ಟೆಲ್ಲ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಿನಿಮಾವನ್ನು ವಿದೇಶದ ಪ್ರೇಕ್ಷಕರಿಗೂ ತೋರಿಸಲು ಸಿದ್ಧತೆ ನಡೆದಿದೆ.

ಇದನ್ನೂ ಓದಿ: Hostel Hudugaru Bekagiddare: ‘ಆಪನ್​ಹೈಮರ್​’, ‘ಬಾರ್ಬಿ’ ಚಿತ್ರವನ್ನೂ ಮೀರಿಸಿ ‘ಬುಕ್​ ಮೈ ಶೋ’ ರೇಟಿಂಗ್​ ಪಡೆದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’

‘ಹಾಸ್ಟೆಲ್ ಹುಡುಗರ ಬೇಕಾಗಿದ್ದಾರೆ’ ಚಿತ್ರವು ಆಸ್ಟ್ರೇಲಿಯಾ, ಕೆನಡಾ, ಸೌತ್ ಆಫ್ರಿಕಾ, ಯುಕೆ ಮತ್ತು ಇತರೆ ದೇಶಗಳಲ್ಲಿ ಇದೇ ವಾರಾಂತ್ಯದಿಂದ ಪ್ರದರ್ಶನ ಆರಂಭಿಸಲಿದೆ. ಈ ಮೂಲಕ ವಿಶ್ವಾದ್ಯಂತ ಇರುವ ಕನ್ನಡ ಸಿನಿಪ್ರಿಯರನ್ನು ಹಾಸ್ಟೆಲ್​ ಹುಡುಗರು ತಲುಪಲಿದ್ದಾರೆ. ಅಲ್ಲಿನ ಪ್ರೇಕ್ಷಕರಿಂದಲೂ ಮೆಚ್ಚುಗೆ ಸಿಗುತ್ತದೆ ಎಂಬ ಭರವಸೆ ಇದೆ. ನಿತಿನ್​ ಕೃಷ್ಣಮೂರ್ತಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಗೆ ಮುನ್ನ ರಮ್ಯಾ ಅವರು ಈ ಚಿತ್ರದ ವಿರುದ್ಧ ಕೇಸ್​ ಹಾಕಿದ್ದರು. ಆ ಕಿರಿಕ್​ ನಡುವೆ ಚಿತ್ರತಂಡಕ್ಕೆ ಪ್ರೇಕ್ಷಕರ ಆಶೀರ್ವಾದ ಸಿಕ್ಕಿದೆ.

ಇದನ್ನೂ ಓದಿ: Hostel Hudugaru Bekagiddare: ಭಿನ್ನವಾಗಿದೆ ಬಾಯ್ಸ್​ ವರ್ಸಸ್​ ವಾರ್ಡನ್​ ಸನ್ನಿವೇಶ; ನಗಿಸುವುದೇ ಹಾಸ್ಟೆಲ್​ ಹುಡುಗರ ಮುಖ್ಯ ಉದ್ದೇಶ

ಕರ್ನಾಟಕ ಮಾತ್ರವಲ್ಲದೇ ಇತರೆ ರಾಜ್ಯಗಳ ಪ್ರಮುಖ ನಗರಗಳಲ್ಲಿ ‘ಹಾಸ್ಟೆಲ್ ಹುಡುಗರ ಬೇಕಾಗಿದ್ದಾರೆ’ ಸಿನಿಮಾ ಈಗಾಗಲೇ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್, ಕೊಚ್ಚಿ, ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದೆ. ವರುಣ್ ಗೌಡ, ಪ್ರಜ್ವಲ್ ಬಿ.ಪಿ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಎಸ್. ಕಶ್ಯಪ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರು ‘ಪರಂವಾ ಪಿಕ್ಚರ್ಸ್’ ಮೂಲಕ ಪ್ರಸ್ತುತ ಪಡಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ಕಲಾವಿದರ ತಂಡದ ಜೊತೆ ರಿಷಬ್ ಶೆಟ್ಟಿ, ಪವನ್ ಕುಮಾರ್, ರಮ್ಯಾ, ಶೈನ್ ಶೆಟ್ಟಿ, ದಿಗಂತ್ ಮಂಚಾಲೆ ಕೂಡ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ ಹಾಡುಗಳು ಸೂಪರ್​ ಹಿಟ್​ ಆಗಿವೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣಕ್ಕೆ ಮೆಚ್ಚಿಗೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ
ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ